ಕರಾವಳಿ

ದೇವಸ್ಥಾನ/ ದೈವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ : ಭಕ್ತಾದಿಗಳಿಂದ ಅರ್ಜಿ ಅಹ್ವಾನ

Pinterest LinkedIn Tumblr

ಮಂಗಳೂರು, ಮಾರ್ಚ್ 25 : ದ.ಕ. ಜಿಲ್ಲೆಯ ಪ್ರವರ್ಗ ‘ಬಿ’ ಮತ್ತು ‘ಸಿ’ ಗೆ ಸೇರಿದ ದೇವಸ್ಥಾನ/ ದೈವಸ್ಥಾನಗಳಿಗೆ ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸುವ ಕುರಿತಂತೆ, ಆಸಕ್ತ ಭಕ್ತಾದಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಅದರಂತೆ ನಿಗದಿತ ಸಮಯದೊಳಗೆ ಸ್ವೀಕೃತವಾಗಿರುವ ಅರ್ಜಿಗಳನ್ನು ಪೋಲೀಸ್ ಇಲಾಖೆ ಹಾಗೂ ತಹಶೀಲ್ದಾರ್‍ರ ಸತ್ಯಾಪನಾ ವರದಿಯೊಂದಿಗೆ ಪ್ರಸ್ತುತ ಸಾಲಿನ ಮಾರ್ಚ್ 3 ರಂದು ನಡೆದ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಮಂಡಿಸಿ ಅರ್ಜಿದಾರರ ಅರ್ಹತೆ, ಅನುಭವ ಪೂರ್ವಾಪರ ವಿವರಗಳನ್ನು ಪರಿಶೀಲಿಸಿ ಒಟ್ಟು 26 ದೇವಸ್ಥಾನಗಳಿಗೆ (26 ದೇವಸ್ಥಾನ/ದೈವಸ್ಥಾನಗಳ ಪಟ್ಟಿ ಲಗ್ತೀಕರಿಸಿದೆ) 3 ವರ್ಷದ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ.

ಮಂಗಳೂರು ತಾಲೂಕಿನ ಶ್ರೀ ಮುಂಡಿತ್ತಾಯ ದೈವಸ್ಥಾನ- ಬೊಂಡಂತಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಹಳೆಯಂಗಡಿ, ಪಾವಂಜೆ, ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ- ಸೂರಿಂಜೆ, ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ- ಧರೆಗುಡ್ಡೆ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ -ತೆಂಕಮಿಜಾರು, ಶ್ರೀ ಈಶ್ವರ ದೇವಸ್ಥಾನ -ಮಲ್ಲೂರು, ಶ್ರೀ ಮೊಗ್ರುಗುಡ್ಡೆ ಮಹಾದೇವ ದೇವಸ್ಥಾನ – ಕೆಂಜಾರು, ಶ್ರೀ ವಿಶ್ವನಾಥೇಶ್ವರ ದೇವಸ್ಥಾನ -ಉಳಾಯಿಬೆಟ್ಟು, ಶ್ರೀ ಮುಖ್ಯಪ್ರಾಣ ದೇವಸ್ಥಾನ- ಅಡ್ಡೂರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ-ಮೂಡುಶೆಡ್ಡೆ, ಶ್ರೀ ಸದಾಶಿವ ದೇವಸ್ಥಾನ- ಮುೂಳೂರು, ಶ್ರೀ ಸಾಂಬಸದಾಶಿವ ದೇವಸ್ಥಾನ- ಬಾರ್ದಿಲ ಕಪ್ಪೇಪದವು, ಶ್ರೀ ಜಾರಂದಾಯ ದೇವಸ್ಥಾನ-ಕರ್ನಿರೆ, ಶ್ರೀ ಕಯ್ಯಾರು ಬ್ರಹ್ಮ ದೇವಸ್ಥಾನ -ದೇಲಂತಬೆಟ್ಟು, ಶ್ರೀ ವಿನಾಯಕ ದೇವಸ್ಥಾನ- ಧರೆಗುಡ್ಡೆ, ಶ್ರೀ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನ- ಶಿರ್ತಾಡಿ.

ಬಂಟ್ವಾಳ ತಾಲೂಕಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ರಾಯಿ, ಶ್ರೀ ವಿಶ್ವನಾಥ ದೇವಸ್ಥಾನ – ಅಜ್ಜಿಬೆಟ್ಟು, ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ – ಬದಿನಡಿ, ರಾಯಿ.

ಬೆಳ್ತಂಗಡಿ ತಾಲೂಕಿನ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ – ಆರಂಬೋಡಿ.
ಪುತ್ತೂರು ತಾಲೂಕಿನ ಶ್ರೀ ಸದಾಶಿವ ದೇವಸ್ಥಾನ – ಬನ್ನೂರು, ಶ್ರೀ ಮೃತ್ಯುಂಜೇಶ್ವರ ದೇವಸ್ಥಾನ- ನರಿಮೊಗರು.

ಸುಳ್ಯ ತಾಲೂಕಿನ ಕೇರ್ಪಡ ಮಹಿಷಮರ್ಧಿನಿ ದೇವಸ್ಥಾನ-ಎಡಮಂಗಲ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ- ಮಂಡೆಕೋಲು, ಪೊದೆ ಶ್ರೀ ವಿಷ್ಣುಮೂರ್ತಿ ದೇವ ದೇವಸ್ಥಾನ- ಮುರುಳ್ಯ, ಶ್ರೀ ವಿನಾಯಕ ದೇವಸ್ಥಾನ ಗೋಳಿಕಟ್ಟೆ – ಪಂಬೆತ್ತಾಡಿ.

ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ: 0824-2220576 ಸಂಪರ್ಕಿಸುವಂತೆ ದ.ಕ ಜಿಲ್ಲಾ ಪದನಿಮಿತ್ತ ಕಾರ್ಯದರ್ಶಿ, ಜಿಲ್ಲಾ ಧಾರ್ಮಿಕ ಪರಿಷತ್, ಹಾಗೂ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಮಂಗಳೂರು ಇವರ ಕಚೇರಿ ಪ್ರಕಟಣೆ ತಿಳಿಸಿದೆ.

Comments are closed.