ಕರಾವಳಿ

ಗಂಗೊಳ್ಳಿ ಪೊಲೀಸರ ಕಾರ್ಯಾಚರಣೆ: ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ

Pinterest LinkedIn Tumblr

ಕುಂದಾಪುರ: ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಅರಾಟೆ ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಗಂಗೊಳ್ಳಿ‌ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ.

ಕಟ್‌ಬೆಲ್ತೂರು ಗ್ರಾಮದ ಹರೆಗೋಡು ನಿವಾಸಿ ನಾಗರಾಜ ಮೊಗವೀರ (35) ಅಲಿಯಾಸ್ ಬುಲೆಟ್ ನಾಗ ಬಂಧಿತ ಆರೋಪಿ.

ಘಟನೆ ವಿವರ:
ಹೊಸಾಡು ಗ್ರಾಮದ ಅರಾಟೆ ಸೇತುವೆ ಕೆಳಗಡೆ ಹೊಳೆಯ ಬದಿಯಲ್ಲಿ ನಾಗರಾಜ ಮೊಗವೀರ ಎಂಬಾತನು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿ ನಾಗರಾಜನನ್ನು ವಶಕ್ಕೆ ಪಡೆದು ಆತನಿಂದ ಅಂದಾಜು 16,500 ರೂ ಮೌಲ್ಯದ ಒಟ್ಟು 541 ಗ್ರಾಂ 79 ಮಿಲಿ ಗ್ರಾಂ ತೂಕದ ಗಾಂಜಾ ಸೇರಿದಂತೆ ಗಾಂಜಾ ಸೇದುವ ಚಿಲಂ, ಒಡೆದ ಬೀಡಿ ಕಟ್ಟು, ಗ್ಯಾಸ್‌ ಲೈಟರ್‌, ಕ್ಯಾಂಡಲ್, ಬಟ್ಟೆಯ ಚೀಲ, ನೆಲದಲ್ಲಿ ಹಾಸಿದ ಪ್ಲಾಸ್ಟಿಕ್‌ ಹಾಗೂ ನಗದು 1,500 ರೂ ವಶಪಡಿಸಿಕೊಂಡರು.

(ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ.)

(ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ)

(ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್)

ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ್ ಕೆ., ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಸಿನ್ನೂರ ಸಂಗಣ್ಣ ಅವರು ಕುಂದಾಪುರ ತಹಶಿಲ್ದಾರ್ ಸಮಕ್ಷಮ ಈ ದಾಳಿ ನಡೆಸಿದ್ದು ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಕ್ರೈಮ್ ವಿಭಾಗದ ಸಿಬ್ಬಂದಿಗಳಾದ ಮೋಹನ್ ಪೂಜಾರಿ ಶಿರೂರು, ಚಂದ್ರಶೇಖರ್ ಅರೆಶಿರೂರು, ಶ್ರೀಧರ್ ಸೆಳ್ಳೆಕುಳ್ಳಿ, ಪ್ರಿನ್ಸ್ ಕೆ.ಜೆ. ನೀರ್ಗದ್ದೆ, ಮೌನೇಶ್, ಸೂರ ನಾಯ್ಕ್, ಸರೋಜಾ, ಚಾಲಕ ದಿನೇಶ್ ಪಡುವರಿ ಮೊದಲಾದವರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.