ಕರಾವಳಿ

ತುಳು ಲಿಪಿ ರಾಜ್ಯದಲ್ಲಿಯೇ ಕ್ರಾಂತಿಯನ್ನುಂಟು ಮಾಡಲಿದೆ : ದಯಾನಂದ ಜಿ. ಕತ್ತಲ್‌ಸಾರ್

Pinterest LinkedIn Tumblr

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಭಾಷಾ ಸಾಹಿತ್ಯಕ್ಕೆ ವಿಶೇಷ ಗೌರವ ನೀಡುತ್ತಿದ್ದು, ಹಿರಿಯ ಸಾಹಿತಿಗಳ ಬರವಣಿಗೆ ಮುಂದಿನ ಯುವ ಸಾಹಿತಿಗಳಿಗೆ ಪ್ರೇರಣೆಯಾಗಲು ವಿವಿಧ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಹಿತ್ಯಕ್ಕೆ ವೇದಿಕೆಯನ್ನು ಅಕಾಡೆಮಿಯ ಮೂಲಕ ನಿರ್ಮಿಸಿ ಸಂವಾದ, ಕೃತಿ ರಚನೆ, ತುಳು ಲಿಪಿಯ ಜ್ಞಾನಾಸಕ್ತಿಯನ್ನು ಬೆಳಸಲಾಗುತ್ತಿದೆ. ಮುಂದೊಂದು ದಿನ ತುಳು ಲಿಪಿ ರಾಜ್ಯದಲ್ಲಿಯೇ ಕ್ರಾಂತಿಯನ್ನುಂಟು ಮಾಡುವಲ್ಲಿ ಇಂದು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧೀನದಲ್ಲಿ ನೀಡಲ್ಪಡುವ ತುಳು ಸಾಹಿತ್ಯ ಕ್ಷೇತ್ರದ ಅಕಾಡೆಮಿ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಲಲಿತಾ ಆರ್. ರೈ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಮಾತನಾಡಿದರು.

ಬೆಂಗಳೂರಿನ ತುಳು ಕೂಟದ ಮಾಜಿ ಅಧ್ಯಕ್ಷ ಡಾ.ಕೆ.ಸಿ.ಬಲ್ಲಾಳ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ., ಕೃಪಾ ಆನಂದ ಶೆಟ್ಟಿ ಉಪಸ್ಥಿತರಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನರೇಂದ್ರ ಎಂ. ಪೂಜಾರಿ ಸ್ವಾಗತಿಸಿದರು, ಚೇತಕ್ ಪೂಜಾರಿ ಸನ್ಮಾನ ಪತ್ರ ವಾಚಿಸಿದರು, ಮಲ್ಲಿಕಾ ಅಜಿತ್ ಶೆಟ್ಟಿ ಪರಿಚಯಿಸಿದರು, ದಿನೇಶ್ ರೈ ಕಡಬ ವಂದಿಸಿದರು, ನಾಗೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Comments are closed.