ಕರಾವಳಿ

ತುಳು ನಾಡಿನ ಸಿರಿವಂತ ಕ್ಷೇತ್ರವಾದ ತುಳು ನಾಟಕ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ : ಕತ್ತಲ್‌ಸಾರ್

Pinterest LinkedIn Tumblr

ಮಂಗಳೂರು: ತುಳು ನಾಟಕ ಕ್ಷೇತ್ರವು ಒಂದು ತುಳು ನಾಡಿನ ಸಿರಿವಂತ ಕ್ಷೇತ್ರವಾಗಿದೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ನಾಟಕ ಕ್ಷೇತ್ರದ ಎಲ್ಲಾ ವಿಧದಲ್ಲೂ ಮುಕ್ತವಾಗಿ ಅವಕಾಶ ನೀಡಿ, ವಿಶೇಷ ಗೌರವ ನೀಡುತ್ತಿದೆ, ಹಿರಿಯ ತಲೆಮಾರಿನ ನಾಟಕ ಕತೃಗಳನ್ನು ಸ್ಮರಿಸಿ ಅವರ ಹೆಸರಿನಲ್ಲಿ ಸಂಸ್ಮರಣಾ ದತ್ತಿ ನಿಧಿಯನ್ನು ಸ್ಥಾಪಿಸುವ ಉದ್ದೇಶವಿದ್ದು ಇದಕ್ಕೆ ಕಲಾವಿದರು, ಕಲಾಪೋಷಕರು ಸಹಕಾರ ನೀಡಬೇಕು, ರಂಗಭೂಮಿ ನಿರಂತರವಾಗಿ ಸಂಚಲನ ಮೂಡಿಸುವ ವೇದಿಕೆಯಾಗಬೇಕು, ಅಕಾಡೆಮಿಯ ಮೂಲಕ ರಂಗಾಸಕ್ತಿಯನ್ನು ಬೆಳಸುವ ಸಾಮರ್ಥ್ಯವಿದ್ದು, ಇದರ ಪ್ರಯೋಜನವನ್ನು ಕಲಾವಿದರು ಪಡೆದುಕೊಳ್ಳಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧೀನದಲ್ಲಿ ನೀಡಲ್ಪಡುವ ತುಳು ನಾಟಕ ಕ್ಷೇತ್ರದ ಅಕಾಡೆಮಿ ಪ್ರಶಸ್ತಿಯನ್ನು ಹಿರಿಯ ನಾಟಕ ರಚನೆಗಾರ ರತ್ಮಾಕರ ರಾವ್ ಕಾವೂರು ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ, ಪ್ರಶಸ್ತಿಯನ್ನು ನೀಡಿ ಮಾತನಾಡಿದರು.

ಬೆಂಗಳೂರಿನ ತುಳು ಕೂಟದ ಮಾಜಿ ಅಧ್ಯಕ್ಷ ಡಾ.ಕೆ.ಸಿ.ಬಲ್ಲಾಳ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ., ಯುವ ನಾಟಕಕಾರ ಶಶಿರಾಜ್ ರಾವ್ ಕಾವೂರು ಉಪಸ್ಥಿತರಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನರೇಂದ್ರ ಎಂ. ಪೂಜಾರಿ ಸ್ವಾಗತಿಸಿದರು, ಚೇತಕ್ ಪೂಜಾರಿ ಸನ್ಮಾನ ಪತ್ರ ವಾಚಿಸಿದರು, ಮಲ್ಲಿಕಾ ಅಜಿತ್ ಶೆಟ್ಟಿ ಪರಿಚಯಿಸಿದರು, ದಿನೇಶ್ ರೈ ಕಡಬ ವಂದಿಸಿದರು, ನಾಗೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

ವಾರ್ಷಿಕ ಪ್ರಶಸ್ತಿ ಪುರಸ್ಕಾರದಲ್ಲಿ ವಿಶೇಷ ಸನ್ಮಾನ ಪತ್ರ, ನೇಕಾರರು ನಿರ್ಮಿಸಿದ ಅಪ್ಪಟ ದೇಶೀ ಶಾಲು, ಫಲ ತಾಂಬೂಲದ ಬಿದಿರಿನ ಬುಟ್ಟಿ, ತುಪ್ಪೆ ಮಾದರಿಯ ಸ್ಮರಣಿಕೆ, ರೂ.50 ಸಾವಿರ ಗೌರವಧನದಿಂದ ಪುರಸ್ಕರಿಸಲಾಯಿತು.

Comments are closed.