ಕರಾವಳಿ

ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿ ನಾಗರಿಕರಿಗೂ ಪಿಎಂಎವೈ ಯೋಜನೆ ದೊರಕಿಸಿಕೊಟ್ಟ ಸಂಸದ ಬಿ.ವೈ ರಾಘವೇಂದ್ರ

Pinterest LinkedIn Tumblr

ಕುಂದಾಪುರ : ಹೊಸದಾಗಿ ಮೊದಲನೇಯ ಮನೆ ನಿರ್ಮಾಣ ಮಾಡುವವರಿಗೆ ಕೇಂದ್ರ ಸರ್ಕಾರದ ಪಿಎಂಎವೈ ( ಪ್ರಧಾನ ಮಂತ್ರಿ ‘ ಸಬ್ಕೋ ಅವಾಸ್ ) ಯೋಜನೆಯಡಿಯಲ್ಲಿ ದೊರಕುತ್ತಿದ್ದ 2.67 ಲಕ್ಷ ರೂ ಸಹಾಯಧನ ಬೈಂದೂರು ಪಟ್ಟಣ ಪಂಚಾಯಿತಿಯ ನಾಗರೀಕರಿಗೆ ದೊರಕುತ್ತಿಲ್ಲ ಎನ್ನುವ ಅಹವಾಲಿಗೆ ಕ್ಷಿಪ್ರವಾಗಿ ಸ್ಪಂದಿಸಿದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಯತ್ನದಿಂದಾಗಿ ಈ ಯೋಜನೆಯ ಪ್ರತಿಫಲ ಬೈಂದೂರು ಪಟ್ಟಣ ಪಂಚಾಯಿತಿಯ ನಿವಾಸಿಗಳಿಗೂ ದೊರಕುವಂತಗಿದೆ.

ಪಟ್ಟಣ ಪಂಚಾಯಿತಿಯಲ್ಲಿ ಪಿಎಂಎವೈ ಯೋಜನೆಯಡಿಯಲ್ಲಿ ಹೊಸದಾಗಿ ಸಹಾಯಧನ ಸೌಲಭ್ಯ ಪಡೆದುಕೊಳ್ಳಲು ಬ್ಯಾಂಕಿನ ಪೋರ್ಟ್‌ಲ್‌ನಲ್ಲಿ ಪಟ್ಟಣ ಪಂಚಾಯಿತಿಯ ಹೆಸರು ಇರಬೇಕಿತ್ತು. ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪಟ್ಟಣ ಪಂಚಾಯಿತಿಗಳ ಪೈಕಿ ಬೈಂದೂರು ಒಂದಾಗಿದ್ದರಿಂದ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಬ್ಯಾಂಕ್‌ ಪೋರ್ಟ್‌ಲ್‌ನಲ್ಲಿ ಬೈಂದೂರು ಹೆಸರು ಸೇರ್ಪಡೆಯಾಗಿರಲಿಲ್ಲ.

ಈಚೆಗೆ ಕೊಲ್ಲೂರಿನ ‘ಅಮ್ಮ’ ವಸತಿಗ್ರಹದ ಸಭಾಂಗಣದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಜತೆಯಾಗಿ ನಡೆಸಿದ ಬೈಂದೂರು ಪಟ್ಟಣ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗಳ ಸಭೆಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸದಾಗಿ ಮನೆ ಕಟ್ಟುವವರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ವಿಸ್ತ್ರತ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಸಂಸದರು ಪಿಎಂಎವೈ ಯೋಜನೆಯಡಿ ದೊರಕುವ ಸಹಾಯಧನದ ಪ್ರಯೋಜನ ಬೈಂದೂರು ನಾಗರೀಕರಿಕೂ ದೊರಕಿಸಿ ಕೊಡುವ ಭರವಸೆ ವ್ಯಕ್ತಪಡಿಸಿದ್ದರು.

ಕೇಂದ್ರ ಸರ್ಕಾರದ ಸಂಬಂಧಿಸಿದ ಇಲಾಖೆಯ ಅಧಿಕಾರಗಳನ್ಹು ಸಂಪರ್ಕಿಸಿದ್ದ ಸಂಸದರು, ಸಮಸ್ಯೆಯ ಪರಿಹಾರಕ್ಕಾಗಿ ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದಕ್ಕೆ ಸ್ಪಂದಿಸಿರುವ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಸ್ಪಂದಿಸಿದ್ದು, ತಂತ್ರಾಂಶದಲ್ಲಿ ಬೈಂದೂರು ಪಟ್ಟಣ ಪಂಚಾಯಿತಿ ಹೆಸರು ಸೇರ್ಪಡೆಯನ್ನು ರಾಜ್ಯ ರಾಜೀವ ಗಾಂಧಿ ವಸತಿ ನಿಗಮದವರು ಮಾಡಲಿದ್ದಾರೆ. ಇದರ ಯೂಸರ್‌ ಐಡಿ ಹಾಗೂ ಪಾಸ್‌ ವರ್ಡ್‌ ಮಾಡುವ ಕಾರ್ಯವೂ ಚಾಲನೆಯಲ್ಲಿ ಇದೆ. ವಾರ್ಡ್ ವಿಂಗಡನೆ ಕಾರ್ಯವೂ ಶೀಘ್ರದಲ್ಲಿ ನಡೆಯಲಿದೆ ಎಂದು ಸಂಸದರ ಕಚೇರಿ ಮೂಲಗಳು ತಿಳಿಸಿವೆ.

ಬೈಂದೂರು ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಸಂಸದರ ನಡೆಸಿದ ಪ್ರಯತ್ನದಿಂದಾಗಿ ಬೈಂದೂರು ಪಟ್ಟಣ ಪಂಚಾಯಿತಿಯ ಜತೆಯಲ್ಲಿ ಕುದುರೆಮುಖ, ಭೀಮರಾಯನಗುಡಿ, ಸೋಮೆಶ್ವರ ಹಾಗೂ ಕಳಗಿ ಪಟ್ಟಣ ಪಂಚಾಯಿತಿಯ ನಾಗರೀಕರಿಗೂ ಪಿಎಂಎವೈ ಯೋಜನೆಯ ಸೌಲಭ್ಯ ದೊರಕುವಂತಾಗಿದೆ.

Comments are closed.