ಕರಾವಳಿ

ಮಿತಿಮೀರಿದ ಟೋಲ್ ದರ ಖಂಡಿಸಿ ತಲಪಾಡಿ ತಲುಪದ ಬಸ್‌ಗಳು: ಜಿಲ್ಲಾಧಿಕಾರಿಗಳಿಂದ ಸಮಸೈ ಪರಿಹಾರ

Pinterest LinkedIn Tumblr

ಮಂಗಳೂರು :ತಲಪಾಡಿ ಟೋಲ್ ಕೇಂದ್ರದಲ್ಲಿ ದಿನನಿತ್ಯ ಸಂಚಾರಿಸುವ ವಾಹನ ಹಾಗು ದಿನಕ್ಕೆ ನೂರಾರು ಬಾರಿ ಚಲಿಸುವ ಬಸ್‌ಗಳಿಗೆ ಮಿತಿಮೀರಿದ ಟೋಲ್ ದರ ನಿಗದಿ ಪಡಿಸಿದ್ದರಿಂದ ನಗರದಿಂದ ತಲಪಾಡಿಗೆ ಹೋಗಬೇಕಿದ್ದ ಖಾಸಗಿ ಬಸ್ ಗಳು ಟೋಲ್ ದಾಟಿ ತಲಪಾಡಿ ಬಸ್ ನಿಲ್ಧಾಣಕ್ಕೆ ಹೋಗದೇ ಟೋಲ್ ಗೇಟ್ ಸಮೀಪದಿಂದಲೇ ಹಿಂತಿರುಗಿ ಬರುತ್ತಿತ್ತು.

ಇದರಿಂದ ಸಾರ್ವಜನಿಕರಿ ಬಹಳಷ್ಟು ಅನಾನೂಕೂಲವಾಗುತ್ತಿತ್ತು. ತಲಪಾಡಿ ಟೋಲ್ ಕೇಂದ್ರದಲ್ಲಿ ನಗರದ ಖಾಸಗಿ ಬಸ್ಸುಗಳಿಗೆ ನಿಗದಿಪಡಿಸಿದ ದರದಿಂದ ಜನಸಾಮಾನ್ಯರಿಗೆ ತುಂಬಾ ತೊದರೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯರು ಹಾಗೂ ಸಿಟಿ ಬಸ್ಸು ಮಾಲೀಕರ ಸಂಘದವರೊಂದಿಗೆ ಪರಸ್ಪರ ಸಮಾಲೋಚನೆ ನಡೆಸಿಕೊಂಡು 14,000 ರಷ್ಟು ಅನಿಯಮಿತ ಪಾಸುಗಳನ್ನು ಕೊಡುವುದರ ಬಗ್ಗೆ ಸಭೆಯಲ್ಲಿ ಸೌಹಾರ್ದಯುತವಾಗಿ ನಿರ್ಣಯ ಮಾಡಲಾಯಿತು.

ಇನ್ನು ಮುಂದೆ ಎಲ್ಲಾ ಸಿಟಿ ಬಸ್ಸುಗಳು ತಲಪಾಡಿಯನ್ನು ದಾಟಿಕೊಂಡು ಮುಂದಿನ ಬಸ್ಸು ನಿಲ್ದಾಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ಇದರಿಂದ ಸಮಸೈ ಸುಖಾಂತ್ಯ ಖಂಡಿತು.

Comments are closed.