ಕರಾವಳಿ

ಸರಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು: ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು : ಸರಕಾರದ ಯೋಜನೆಗಳು ಅರ್ಹರನ್ನು ತಲುಪುವ ವಾಹಕದಂತೆ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಬಾಬುಗುಡ್ಡೆ ಗ್ರಾಮ ಸಂಘ ಸಭಾಂಗಣದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಅತ್ತಾವರ ವಾರ್ಡಿನ ಕಾರ್ಯಕರ್ತರ ಸಮಾವೇಶ ಹಾಗೂ ಅಭಿವೃದ್ಧಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವು ಆರ್ಥಿಕವಾಗಿ ಹಿಂದುಳಿದ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅಂತಹ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ವಿಶೇಷ ಗಮನ ಹರಿಸಬೇಕು ಎಂದರು.

ಸಾರ್ವಜನಿಕರ ಉಪಯೋಗಕ್ಕಾಗಿ ಅನೇಕ ಯೋಜನೆಗಳನ್ನು ಒದಗಿಸಿದರೂ ಮಾಹಿತಿಯ ಕೊರತೆಯಿಂದಾಗಿ ಬಹಳಷ್ಟು ಜನರು ಸೌಲಭ್ಯ ಪಡೆಯಲು ವಿಫಲರಾಗುತಿದ್ದಾರೆ. ಅಂತಹ ಮನೆಗಳನ್ನು ಗುರುತಿಸಿ ಅವರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರೆ ಸರಕಾರ ನೀಡುವ ಯೋಜನೆಗಳಿಗೆ ನ್ಯಾಯ ಒದಗಿಸಬಹುದು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಗಳೂರು ನಗರ ದಕ್ಷಿಣ ಅದ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ,ಕಳೆದ ಎರಡು ವರ್ಷಗಳ ಅವಧಿಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಅತ್ತಾವರ ವಾರ್ಡಿನ ಅಭಿವೃದ್ಧಿಗಾಗಿ ಸರಿಸುಮಾರು 8 ಕೋಟಿ ಅನುದಾನ ಒದಗಿಸಿದ್ದಾರೆ. ಸದ್ಯ ಮಂಗಳೂರು ನಗರ ದಕ್ಷಿಣ ವಿಧಾನಸಭೆಯ ವ್ಯಾಪ್ತಿಯಲ್ಲಿ ಹಿಂದೆ ಕಂಡಿರದ ಮಟ್ಟಿನ ಅಭಿವೃದ್ಧಿ ಕಾಮಗಾರಿಗಳು ಶಾಸಕರ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಹೀಗೂ ಅಭಿವೃದ್ಧಿ ಕುರಿತು ಮುಕ್ತ ಸಂವಾದ ನಡೆಯಿತು.

ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಮಹಾನಗರ ಪಾಲಿಕೆಯ ಮುಖ್ಯ ಸಚೇತಕರು ಹಾಗೂ ಪಂಚಾಯತ್ ರಾಜ್ ಪ್ರಕೋಷ್ಠದ ರಾಜ್ಯ ಸಹಸಂಚಾಲಕರಾದ ಪ್ರೇಮಾನಂದ ಶೆಟ್ಟಿ, , ಮೈಸೂರ್ ಇಲೆಕ್ಟ್ರಿಕಲ್ ಕಂಪನಿ ಅಧ್ಯಕ್ಷರಾದ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ರೈ ಬೋಳಿಯಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ‌ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪೂರ್ಣಿಮಾ ಎಂ, ಜಿಲ್ಲಾ ಕಾರ್ಯದರ್ಶಿಗಳಾದ ಪೂಜಾ ಪೈ, ಮಂಡಲದ ಪ್ರಧಾನ ಕಾರ್ಯದರ್ಶಿ ರೂಪ ಡಿ ಬಂಗೇರ,   ಹಾಗೂ ಅತ್ತಾವರ ವಾಡ್೯ ನ ಕಾರ್ಪೋರೇಟರ್  ಶ್ರೀ ಶೈಲೇಶ್ ಶೆಟ್ಟಿ, ಪಶ್ಚಿಮ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಮಂಡಲದ ಉಪಾಧ್ಯಕ್ಷರಾದ ದೀಪಕ್ ಪೈ, ಪಶ್ಚಿಮ ಮಹಾಶಕ್ತಿ ಕೇಂದ್ರದ  ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಕಾಮತ್,  ಶಕ್ತಿ ಕೇಂದ್ರದ ಪ್ರಮುಖರಾದ ಪುಷ್ಪರಾಜ್ ಶೆಟ್ಟಿ ಮತ್ತು ಅಜಯ್ ಅತ್ತಾವರ, ಮಂಡಲದ ಉಪಾಧ್ಯಕ್ಷರು ಹಾಗೂ ನಾಮನಿರ್ದೇಶಿತ ಸದಸ್ಯರಾದ ರಮೇಶ್ ಕಂಡೆಟ್ಟು,  ಎಸ್.ಸಿ.ಮೋರ್ಚಾದ ಅಧ್ಯಕರಾದ ರಘುವೀರ ಬಾಬುಗುಡ್ಡ, ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂರ್ಣಿಮ ರಾವ್, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷರಾದ ಅನಿಲ್ ಕುಮಾರ್ ಹೈೂಗೆಬಜಾರ್, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ  ಫೆಡ್ರಿಕ್ ಪೌಲ್, ಮಂಡಲದ ಕಾರ್ಯದರ್ಶಿಗಳಾದ ಲಲ್ಲೇಶ್ ಕುಮಾರ್, ಸುರೇಖಾ ಹೆಗ್ಡೆ, ವಿನೋದ್ ಮೆಂಡನ್ ಕೋಶಾಧಿಕಾರಿಗಳಾದ ಶ್ರೀನಿವಾಸ್ ಶೇಟ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಅನಿಲ್ ಕುಮಾರ್ ಅತ್ತಾವರ, ಮಂಡಲ ಕಾರ್ಯಕಾರಿಣಿ ಸದಸ್ಯರಾದ ವಿವೇಕ್ ಶೆಟ್ಟರ್, ಮೋಹನ್ ಕೆ.ಪೂಜಾರಿ, ಭಾರತಿ ರಾವ್ ಪಶ್ಚಿಮ ಮಹಾಶಕ್ತಿ ಕೇಂದ್ರದ ಉಪಾಧ್ಯಕ್ಷರಾದ  ರಾಜೇಂದ್ರ ಮಂಕಿಸ್ಟ್ಯಾಂಡ್, ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ರೂಪಾ, ಕಾರ್ಯದರ್ಶಿಗಳಾದ ಲಲಿತಾ, ಬೂತ್ ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಪೊರೇಟರ್ ಶೈಲೇಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ತೇಜಶ್ ವಂದೇ ಮಾತರಂ ಹಾಡಿದರು ಮಂಡಲ ಎಸ್. ಸಿ.ಮೋರ್ಚಾದ ಅಧ್ಯಕ್ಷ ರಘುವೀರ್ ಬಾಬು ಗುಡ್ಡೆ ಕಾರ್ಯಕ್ರಮ ನಿರೂಪಿಸಿ, ಧರ್ಮೇಂದ್ರ ಅಮೀನ್ ಧನ್ಯವಾದ ಅರ್ಪಿಸಿದರು.

Comments are closed.