ಕರಾವಳಿ

ನಿರ್ಬಂಧ ತೆರವು: ಕೇರಳದಿಂದ ದ.ಕ.ಜಿಲ್ಲೆಗೆ ಬರುವವರಿಗೆ ಕರೋನಾ ಟೆಸ್ಟ್ ಕಡ್ಡಾಯ ಇಲ್ಲ

Pinterest LinkedIn Tumblr

 

(ಸಾಂದರ್ಭಿಕ ಚಿತ್ರ)

ಮಂಗಳೂರು : ಗಡಿನಾಡಿಗರ ದಕ್ಷಿಣ ಕನ್ನಡ ಪ್ರವೇಶದ ಮೇಲೆ ಇದ್ದ ಕರೋನಾ ಟೆಸ್ಟ್ ಕಡ್ಡಾಯ ಎಂಬ ನಿರ್ಬಂಧವನ್ನು ಕರ್ನಾಟಕ ಸರ್ಕಾರ ತೆಗೆದು ಹಾಕಿದೆ. ಇನ್ನು ಮುಂದೆ ಕೇರಳದಿಂದ ದ.ಕ.ಜಿಲ್ಲೆಗೆ ಬರುವ ಪ್ರಯಾಣಿಕರಿಗೆ ಬರುವವರಿಗೆ ಕರೋನಾ ನೆಗೆಟಿವ್ ರಿಪೋರ್ಟ್ ಹಾಜರಿಪಡಿಸುವ ಅಗತ್ಯವಿಲ್ಲ.

ಕೇರಳ ರಾಜ್ಯ ಭಾಜಪಾ ಅಧ್ಯಕ್ಷರಾದ ಶ್ರೀ ಕೆ ಸುರೇಂದ್ರನ್ ಹಾಗೂ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಅಡ್ವಕೇಟ್ ಶ್ರೀಕಾಂತ್ ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಗಳಾದ ಡಾ ಅಶ್ವತ್ಥ ನಾರಾಯಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಸುನಿಲ್ ಕುಮಾರ್ ಕಾರ್ಕಳ ಇವರೊಡನೆ ನಡೆಸಿದ ಮಾತುಕಥೆಯ ಪರಿಣಾಮವಾಗಿ ಕರ್ನಾಟಕ ಸರಕಾರವು ಕರ್ನಾಟಕಕ್ಕೆ ಬರುವ ಕಾಸರಗೋಡಿಗರು ಕಡ್ಡಾಯವಾಗಿ ಕರೋನಾ ನೆಗೆಟಿವ್ ರಿಪೋರ್ಟ್ ಹಾಜರಿಪಡಿಸಬೇಕು ಎಂಬ ನಿರ್ಬಂಧವನ್ನು ಹಿಂದೆ ತೆಗೆದಿದೆ.

Comments are closed.