ಕರಾವಳಿ

ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವವನ್ನು ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಸಾಧ್ಯ: ದೀಪಕ್ ಗಂಗೂಲಿ

Pinterest LinkedIn Tumblr

ಮಂಗಳೂರು, ಫೆಬ್ರವರಿ 24 :ಯುವ ಪೀಳಿಗೆಯು ಸಮರ್ಥ ವ್ಯಕ್ತಿತ್ವವನ್ನು ರೂಢಿಸಿಕೊಂಡು ವ್ಯಕ್ತಿ ತೆಗೆದುಕೊಳ್ಳುವ ನಿರ್ಧಾರ, ತೊಡಗಿಸಿಕೊಳ್ಳುವಿಕೆ ಎಲ್ಲವೂ ಧೃಢವಾಗಿರಬೇಕು ಎಂದು ಜೆಸಿಐ ಮಂಗಳೂರು ಇಂಪ್ಯಾಕ್ಟ್ ಸ್ಥಾಪಕಾಧ್ಯಕ್ಷರಾದ ದೀಪಕ್ ಗಂಗೂಲಿ ಹೇಳಿದರು.

ಅವರು ಇತ್ತೀಚೆಗೆ ಮಂಗಳೂರು ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಹಾಗೂ ಜೆಸಿಐ ಮಂಗಳೂರು ಇಂಪ್ಯಾಕ್ಟ್‍ರವರ ಜಂಟಿ ಆಶ್ರಯದಲ್ಲಿ ಕಾಲೇಜಿನ ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ನಾಯಕತ್ವ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ವ್ಯಕ್ತಿಯಲ್ಲಿರಬೇಕಾದ ಕೌಶಲ್ಯಗಳು, ಶಿಷ್ಟಾಚಾರಗಳನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವವನ್ನು ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಸಾಧ್ಯ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ ಹೆಬ್ಬಾರ್ ಸಿ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್.ಎಸ್.ಎಸ್ ವಿದ್ಯಾರ್ಥಿಗಳು ಮುಂದಾಳತ್ವ, ನಾಯಕತ್ವವನ್ನು ವಹಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡುವುದರೊಂದಿಗೆ ವಿದ್ಯಾರ್ಥಿಯು ಸರ್ವಾಂಗೀಣವಾಗಿ ಬೆಳೆಯುವಲ್ಲಿ ಸಹಕರಿಸುತ್ತದೆ.

ಕಾರ್ಯಕ್ರಮಗಳನ್ನು ಸಂಘಟಿಸುವಾಗ ಎನ್.ಎಸ್.ಎಸ್ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಹೇಳಿದರು. ನಾಯಕತ್ವ ಶಿಬಿರವು ವ್ಯಕ್ತಿತ್ವ ನಿರ್ಮಾಣಕ್ಕೆ ದಿಕ್ಸೂಚಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐನ ವಲಯ ತರಬೇತಿದಾರರಾದ ಚೇತನ.ಬಿ. ದತ್ತಾತ್ರೇಯರವರು ಸ್ವಯಂ ಸೇವಕರಿಗೆ ನಾಯಕತ್ವದ ಕೌಶಲ್ಯ, ನಿರ್ಧಾರ ತೆಗೆದುಕೊಳ್ಳುವಿಕೆ ಹಾಗೂ ವೈಯುಕ್ತಿಕ ವ್ಯಕ್ತಿತ್ವದ ರೂಪುಗೊಳ್ಳುವಿಕೆ ಕುರಿತು ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಮುಖ್ಯ ಶೈಕ್ಷಣಿಕ ಸಲಹೆಗಾರ ಡಾ.ಶಿವರಾಮ್, ಐಕ್ಯೂಎಸಿ ಸಂಯೋಜಕ ಡಾ.ತೆರೆಸಾ ಪಿರೇರಾ, ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ.ಶೇಷಪ್ಪ ಅಮೀನ್, ಪ್ರೊ.ತ್ರಿಶಾಂತ್ ಕುಮಾರಿ, ಪ್ರೊ.ಅರುಣಾ ಕುಮಾರಿ, ಜೆಸಿಐನ ಅಧ್ಯಕ್ಷರ ವಿರಾಜ್ ಎ.ಪಿ, ನಿಕಟ ಪೂರ್ವ ಅಧ್ಯಕ್ಷ ಸೂರಜ್ ಆರ್. ಶೆಟ್ಟಿ, ಕಾರ್ಯದರ್ಶಿ ಗಣೇಶ್ ಅದ್ಯಪಾಡಿ, ಪ್ರೊಜೆಕ್ಟ್ ನಿರ್ದೇಶಕ ಅನಿಶರವರು ಉಪಸ್ಥಿತರಿದ್ದರು.

Comments are closed.