ಕರಾವಳಿ

ನಗರದ ಜನತೆಗೆ ಜಲಸಿರಿ ಯೋಜನೆಯಡಿ 24×7 ಶುದ್ಧ ಮತ್ತು ನಿರಂತರ ನೀರಿನ ಪೂರೈಕೆ : ವಾಲ್ಸನ್.ಎಂ

Pinterest LinkedIn Tumblr

ಮಂಗಳೂರು, ಫೆಬ್ರವರಿ 23 : 24*7 ಶುದ್ಧ ಮತ್ತು ನಿರಂತರ ನೀರಿನ ಪೂರೈಕೆ ಮಂಗಳೂರು ಜನತೆಯ ಪಾಲಿಗೆ ಸಿಗಲಿದೆ ಎಂದು ಕೆ.ಯು.ಐ.ಡಿ.ಎಫ್.ಸಿ ಯ ಯೋಜನಾ ಘಟಕದ ಕಾರ್ಯಪಾಲಕ ಅಭಿಯಂತರರಾದ ವಾಲ್ಸನ್.ಎಂ ತಿಳಿಸಿದರು.

ಫೆಬ್ರವರಿ 18 ರಂದು ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ 8ನೇ ಹೊಸಬೆಟ್ಟು ವಾರ್ಡಿನ ಅನುದಾನಿತ ವೆಂಕಟರಮಣ ಶಾಲೆಯಲ್ಲಿ ನಡೆದ ಜಲಸಿರಿ 24*7 ಯೋಜನೆಯ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಸ್ಥಳೀಯ ಕಾರ್ಪೋರೇಟರ್ ವರುಣ್ ಚೌಟ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಜನೆಯ ಬಗ್ಗೆ ಜನರಿಗೆ ಅರಿವು ಇದ್ದಷ್ಟು ಯೋಜನೆಯು ಯಶಸ್ವಿಯಾಗುತ್ತದೆ ಮತ್ತು ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳುವುದರಿಂದ ಜನರಿಗೆ ಅಭಿಪ್ರಾಯ ಅನಿಸಿಕೆಗಳನ್ನು ಮಂಡಿಸಲು ಅದ್ಭುತ ಅವಕಾಶ ನೀಡಿದಂತೆ ಆಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಮಂಗಳೂರು ಅನುಷ್ಠಾನ ಘಟಕದ ಸಹಾಯಕ ಅಭಿಯಂತರರಾದ ಬಾಲಕೃಷ್ಣ, ಸುಯೇಜ್ ಇಂಡಿಯಾ ಗುತ್ತಿಗೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ರೇಷ್ಮಾ ಉಳ್ಳಾಲ್ ಹಾಗೂ ಸ್ಥಳೀಯ ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಗ್ರಾಮ್ಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.