ಮಂಗಳೂರು, ಫೆಬ್ರವರಿ.15: ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಮಂಗಳೂರು, ಇದರ ಸುತ್ತು ಪೌಳಿಯ ಕಾಷ್ಟಶಿಲ್ಪದ ಕಾಮಗಾರಿ ಮುಹೂರ್ತ ಸೋಮವಾರ 15.02.2021 ಬೆಳಗ್ಗೆ ವಿಘ್ನೇಶ್ ಪುರೋಹಿತರ ಆಚಾರ್ಯತ್ವದಲ್ಲಿ ನೆರವೇರಿತು.
ಕಾಷ್ಟ ಶಿಲ್ಪಿ ಅಶ್ವಥಪುರ ಶಿವಪ್ರಸಾದ್ ಆಚಾರ್ಯ, ವಾಸ್ತುಶಿಲ್ಪಿ ಪಯ್ಯನೂರು ಶಶಿಧರನ್, ಜೋಕಟ್ಟೆ ಪ್ರಭಾಕರ ಆಚಾರ್ಯ,ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, 2ನೇ ಮೊಕ್ತೇಸರ ಜಿ . ಸುಂದರ್ ಆಚಾರ್ಯ ಬೆಳುವಾಯಿ, ಮೂರನೇ ಮೊಕ್ತೇಸರ ಎ. ಲೋಕೇಶ್ ಆಚಾರ್ಯ ಬಿಜೈ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮ. ವೆಂಕಟೇಶ ಆಚಾರ್, ಕಾರ್ಯದರ್ಶಿಗಳಾದ ಬಿ. ಉದಯ ಆಚಾರ್ಯ, ರವೀಂದ್ರ ಎಸ್, ಸುಜೀರ್ ವಿನೋದ್,ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಸದಸ್ಯರು, ಭಕ್ತಾದಿಗಳು, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಸದಸ್ಯರು ಹಾಗು ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು.