ಮಂಗಳೂರು, ಫೆಬ್ರವರಿ.12 : ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ “ರಾಜಸ್ಥಾನ್ ಗ್ರಾಮೀಣ ಮೇಳ” ವನ್ನು ನಗರದ ಬಂಟ್ಸ್ ಹಾಸ್ಟೇಲ್ ರಸ್ತೆಯ ಹೋಟೇಲ್ ವುಡ್ ಲ್ಯಾಂಡ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಫೆಬ್ರವರಿ 11, ಗುರುವಾರದಂದು ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ನಟ ನವೀನ್ ಡಿ.ಪಡೀಲ್ ಇವರು “ರಾಜಸ್ಥಾನ್ ಗ್ರಾಮೀಣ ಮೇಳ” ವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ನವೀನ್ ಡಿ.ಪಡೀಲ್ ಅವರು, ಇಂತಹ ಕ್ರಾಫ್ಟ ಮೇಳಗಳನ್ನು ಆಯೋಜಿಸುವುದರಿಂದ ಭಾರತೀಯತೆಯ ಕಲೆ ಮತ್ತು ಸಂಸ್ಕ್ರತಿಯನ್ನು ರಕ್ಷಿಸಲು ಸಹಾಯವಾಗುತ್ತದೆ. ಮಾತ್ರವಲ್ಲದೇ ಇಂದಿನ ಪೀಳಿಗೆಗೆ ನಮ್ಮ ಭಾರತೀಯ ಶ್ರೀಮಂತ ಸಂಸ್ಕೃತಿಯ ಮತ್ತು ಗ್ರಾಮೀಣ ಭಾರತದ ಕುಶಲಕರ್ಮಿಗಳ ಗುಪ್ತ ಪ್ರತಿಭೆಗಳ ಜ್ಞಾನ ಸಿಗುತ್ತದೆ.
ಇದೀಗ ಹೊರ ರಾಜ್ಯಗಳ ಗ್ರಾಮೀಣ ಪ್ರತಿಭೆಗಳು ತಯಾರಿಸಿದಂತಹ ಕಲಾತ್ಮಕವಾದ ವಿವಿಧ ಶೈಲಿಯ ಕರಕುಶಲ ವಸ್ತುಗಳು ಇಂದು “ರಾಜಸ್ಥಾನ್ ಗ್ರಾಮೀಣ ಮೇಳ”ದ ಮೂಲಕ ನಮ್ಮ ಬಳಿಗೆ ಬಂದಿದೆ. ಈ ವಸ್ತುಗಳಿಗೆ ಉತ್ತೇಜನ ನೀಡುವ ಮೂಲಕ ನಾವು ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು.
ಇಲ್ಲಿ ರಾಜಸ್ಥಾನ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲಿ ತಯಾರಾದ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಬೃಹತ್ ಸಂಗ್ರಹವಿದ್ದು, ಹೊರ ರಾಜ್ಯಗಳಿಗೆ ಹೋಗದೇ ಇಲ್ಲಿಯೇ ನಮ್ಮ ಜನತೆ ಇದರ ಪ್ರಯೋಜನ ಪಡೆಯಬಹುದು. ಮಂಗಳೂರಿನ ಜನತೆಯ ಆಶೀರ್ವಾದದಿಂದ ಈ ಮೇಳವು ಅತ್ಯಂತ ಯಶಸ್ಸು ಕಾಣಲಿ ಎಂದು ಶುಭಾಹಾರೈಸಿದರು.
ರಾಜಸ್ಥಾನ ಗ್ರಾಮೀಣ ಮೇಳದ ಸಂಯೋಜಕ ಮಹಾವೀರ್ ಅವರು ಮೇಳದ ಕುರಿತು ಮಾಹಿತಿ ನೀಡಿದರು. ಭಾರತೀಯ ಕರಕುಶಲ ವಸ್ತುಗಳು ಹಾಗೂ ಭಾರತದ ಸಂಪ್ರದಾಯದ ಕರಕುಶಲತೆಯನ್ನು ನಾವು ಜೀವಂತವಾಗಿಡಲು ಬಯಸುತ್ತೇವೆ. ಭಾರತೀಯ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯವು ಭಾರತೀಯತೆಯ ಶ್ರೀಮಂತ ಸಂಪ್ರದಾಯದ ಒಂದು ಭಾಗವಾಗಿದೆ ಮತ್ತು ಇದು ದೇಶದ ಎಲ್ಲ ಕುಶಲಕರ್ಮಿಗಳ ಕಾರ್ಯಕುಶಲತೆಯ ಪ್ರತೀಕವಾಗಿದೆ.
ದೇಶವು ಬಡತನ ರೇಖೆಗಿಂತ ಕೆಳಗಿದೆ ಎಂದು ಹೆಚ್ಚಿನ ಕುಶಲಕರ್ಮಿಗಳು ಭಾವಿಸಿದಂತಿದೆ. ಆದ್ದರಿಂದ ಈ ಗ್ರಾಮೀಣ ಮೇಳದ ಮೂಲಕ ಕುಶಲಕರ್ಮಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಸೂಕ್ತವಾದ ವೇದಿಕೆಯನ್ನು ಒದಗಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಅವರು ಹೇಳಿದರು.
ಈ ಮೇಳದಲ್ಲಿ 30-40 ಕ್ಕೂ ಹೆಚ್ಚು ಸ್ಟಾಲ್‌ಗಳಿವೆ. ಕುಶಲಕರ್ಮಿಗಳು ಈ ಮೇಳದಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ. ಈ ಮೇಳದಲ್ಲಿ ಸಾವಿರಾರು ಬಗೆಯ ಉಡುಪುಗಳು ಹಾಗೂ ಸೀರೆಗಳು ಮತ್ತು ಕರಕುಶಲ ವಸ್ತುಗಳು ಲಭ್ಯವಿವೆ.
ಪ್ರಿಂಟೆಡ್ ಡ್ರೆಸ್ ಮಟೀರಿಯಲ್, ಸೂಟ್ಸ್, ಟಾಪ್ಸ್, ಪ್ರಿಂಟೆಸ್ & ಟ್ರೆಡಿಶನಲ್ ಬೆಡ್ ಶಿಟ್ಸ್, ಬೆಡ್‌ಸ್ಪ್ರೇಡ್ಸ, ರಾಜಸ್ಥಾನದ ಸಂಗನೇರಿ ಸೀರೆ, ವೆಸ್ಟ್ ಬೆಂಗಾಳದ ಕಾಂಥಾ ವರ್ಕ ಸೀರೆ, ಕಾಶ್ಮಿರದ ಪಾಶಿಮಾನ ಶಾಲ್‌ಗಳು, ಕಲ್ಕತ್ತಾದ ಬಲುಚೇರಿ ಬೋಟಿಕ್ ಸೀರೆಗಳು, ಛತ್ತಿಸಗಡದ ಟಸ್ಸರ ಮಡಕಾ & ರೇಶ್ಮೆ ಸೀರೆಗಳು, ತೆಲಂಗಾಣಾದ ಪೋಚಂಪಲ್ಲಿ ಮತ್ತು ಕಲಮಕರಿ ಸೀರೆಗಳು, ಬನಾರಸ ಜಂಬಾನಿ ಸೀರೆ, ಡ್ರೆಸ್ ಮಟೀರಿಯಲ್ಸ್, ಉತ್ತರ ಪ್ರದೇಶದ ಕುಶನ ಕವರಗಳು, ಪಿಲ್ಲೋ ಕವರಗಳು, ಮಧ್ಯಪ್ರದೇಶದ ಮಹೇಶ್ವರಿ ಸೀರೆಗಳು, ಬೀಹಾರದ ಡ್ರೆಸ್ ಮಟೀರಿಯಲ್ಸ್, ಗುಜರಾತದ ಬಾಂಧನಿ ಸೀರೆಗಳು ಇನ್ನೂ ಅನೇಕ ವಸ್ತೂಗಳು ಇಲ್ಲಿ ಲಭ್ಯವಿದೆ. ಡ್ರೆಸ್ ಮಟೀರಿಯಲ್ಸ್ ಮತ್ತು ಸೀರೆಗಳ ಜೊತೆಗೆ ಓರಿಸ್ಸಾದ ಇಕ್ಕತ್ ಸಂಭಲಪುರ ಸೀರೆಗಳು, ಆಂಟಿಕ್ ಜುವೇಲರಿಗಳು ಇಲ್ಲಿ ಲಭ್ಯವಿದೆ.
ರಾಜಸ್ಥಾನದ ಮರದಿಂದ ತಯಾರಿಸಿದ ಗೊಂಬೆಗಳು, ಲಖನೌದ ಬ್ಲೂ-ಪಾರ್ಟಿ, ಮಣಿಪೂರದ ಬ್ಲಾಕ್ ಸ್ಟೋನ್ ಆರ್ಟಿಕಲ್ಸ್, ತಮೀಳನಾಡಿನ ಹಿತ್ತಾಳೆಯ ಮೂರ್ತಿಗಳು, ಪಾಂಡಿಚೇರಿಯ ಪೇಪರ್ ನಿಂದ ತಯಾಸಿಲಾದ ವಸ್ತುಗಳು, ಕರ್ನಾಟಕದ ಚನ್ನಪಟ್ಟಣದ ಗೊಂಬೆಗಳು ಇಲ್ಲಿ ಲಭ್ಯವಿದೆ ಎಂದು ಮಹಾವೀರ್ ವಿವರ ನೀಡಿದರು.
ಈ ಗ್ರಾಮೀಣ ಮೇಳದಲ್ಲಿ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಕೈಮಗ್ಗದ ಸೀರೆ ಹಾಗೂ ಸಿಲ್ಕ್ ಸೀರೆಗಳು ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವಿದ್ದು, ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಮೇಳವು ಫೆಬ್ರವರಿ 11ರಿಂದ ಮಾರ್ಚ್ 07ರವರೆಗೆ ನಡೆಯಲಿದೆ. ಬೆಳಗ್ಗೆ 10ಗಂಟೆಯಿಂದ ರಾತ್ರಿ 9.30ರ ವರೆಗೆ ತೆರೆದಿರುತ್ತದೆ. ಪ್ರವೇಶ ಉಚಿತವಾಗಿದೆ.