ಕರಾವಳಿ

ಕೊರೋನಾ ನಿರೋಧಕ ಲಸಿಕೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿಗಳಿಂದ ಪೊಲೀಸ್ ಕಮಿಷನರ್ ಬಿಪಿ ಚೆಕ್ ಅಪ್

Pinterest LinkedIn Tumblr

ಮಂಗಳೂರು, ಫೆಬ್ರವರಿ.08 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸೋಮವಾರ ಬೆಳಿಗ್ಗೆ ನಗರದ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಲಸಿಕೆ ಪಡೆಯುವುವ ಮೂಲಕ ಚಾಲನೆ ನೀಡಿದರು.

ದ.ಕ.ಜಿಲ್ಲಾ ಡಿಸಿಯವರೇ ಲಸಿಕೆ ಪಡೆಯುವ ಮೂಲಕ 2ನೇ ಸುತ್ತಿನ ಕೊರೋನಾ ನಿರೋಧಕ ಲಸಿಕೆಗೆ ಚಾಲನೆ

ಈ ವೇಳೆಯೇ ಮಂಗಳೂರು ನಗರ ಪೊಲೀಸ್‌ ಕಮಿಷನರ್ ಶಶಿಕುಮಾರ್‌ ಎನ್‌, ಐಎಎಸ್‌ ಅಧಿಕಾರಿ ಮೋನಾ ರಾವತ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಡಿಸಿಪಿ ವಿನಯ ಗಾಂವ್ಕರ್‌, ಡಿಸಿಪಿ ಹರಿರಾಮ್‌ ಶಂಕರ್‌, ಇನ್‌ಸ್ಪೆಕ್ಟರ್‌ ಗೋಪಾಲ ಕೃಷ್ಣ ಭಟ್‌ ಹಾಗು ಮತ್ತಿತ್ತರ ಅಧಿಕಾರಿಗಳು ಲಸಿಕೆ ಪಡೆದರು.

ಕಾರ್ಯಕ್ರಮದ ವಿಶೇಷವೆಂದರೆ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಯವರೇ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಹಾಗೂ ಡಿಸಿಪಿಗಳಿಗೆ ರಕ್ಷದೊತ್ತಡ ತಪಾಸಣೆ ನಡೆಸುವಮೂಲಕ ಸ್ವಲ್ಪ ಹೊತ್ತು ವೈದ್ಯರ ಕರ್ತವ್ಯ ನಿರ್ವಾಹಿಸುವ ಮೂಲಕ ನೆರದವರ ಮೆಚ್ಚುಗೆಗೆ ಪಾತ್ರರಾದರು.

Comments are closed.