ಕರಾವಳಿ

ಗೋ ಕಳ್ಳರನ್ನು ಬಂಧಿಸಿದ ಕುಂದಾಪುರ ಗ್ರಾಮಾಂತರ ಪೊಲೀಸರನ್ನು ಅಭಿನಂದಿಸಿದ ಕುಂದಾಪುರ ಬಿಜೆಪಿ ಯುವಮೋರ್ಚಾ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲ್ಲೂಕಿನ ಕೊರ್ಗಿ ಗ್ರಾಮದ ಗೋವು ಕಳ್ಳತನ ಪ್ರಕರಣದ ಆರೋಪಿಗಳನ್ನು ವಾರದೊಳಗೆ ಹೆಡೆಮುರಿ ಕಟ್ಟಿದ ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಪೊಲೀಸ್ ಠಾಣಾಧಿಕಾರಿ ರಾಜಕುಮಾರ್ ಹಾಗೂ ಕ್ರೈಮ್ ಪಿಎಸ್ಐ ಸುಧಾ ಪ್ರಭು ಮತ್ತು ಸಿಬ್ಬಂದಿ ವರ್ಗದವರನ್ನು ಕುಂದಾಪುರದ ಬಿಜೆಪಿ ಯುವಮೋರ್ಚಾ ನಿಯೋಗ ಅಭಿನಂಧಿಸಿತು.

ಈತ್ತೀಚಿಗೆ ಕುಂದಾಪುರ ತಾಲ್ಲೂಕಿನ ಕೊರ್ಗಿ ಭಾಗದಲ್ಲಿ ಹಾಡ ಹಗಲೇ ಮೇಯಲು ಕಟ್ಟಿದ್ದ ದನಗಳನ್ನು ಗೋ ಕಳ್ಳರು ಕಳವುಗೈದಿದ್ದರು, ಈ ಬಗ್ಗೆ ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಗೋ ಕಳ್ಳರನ್ನು ಶೀಘ್ರ ಬಂಧಿಸುವಂತೆ ಕಂಡ್ಲೂರು ಠಾಣಾಧಿಕಾರಿಗಲ್ಲಿ ಬಿಜೆಪಿ ಕುಂದಾಪುರ ಯುವಮೋರ್ಚಾ ಆಗ್ರಹಿಸಿತ್ತು ಎರಡು ದಿನಗಳ ಹಿಂದೆ ಕುಂದಾಪುರ ಡಿವೈಎಸ್ಪಿಯವರಿಗೂ ಸಹ ಮನವಿ ನೀಡಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಂಡ್ಲೂರು ಠಾಣಾಧಿಕಾರಿಗಳಾದ ರಾಜಕುಮಾರ್ ಮತ್ತು ಸುಧಾ ಪ್ರಭು ತಂಡ ವಾರದಲ್ಲಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದು, ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಾಚರಣೆಗೆ ಸ್ಥಳೀಯರು ಭಾರೀ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಠಾಣೆಗೆ ತೆರಳಿ ಪೊಲೀಸರಿಗೆ ಅಭಿನಂದಿಸುವ ಸಂದರ್ಭ ಬಿಜೆಪಿ ಯುವಮೋರ್ಚಾ ಕುಂದಾಪುರ ಅಧ್ಯಕ್ಷ ಅವಿನಾಶ ಉಳ್ತೂರು, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಸುಧೀರ್ ಕೆ.ಎಸ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ ಖಾರ್ವಿ, ಉಪಾಧ್ಯಕ್ಷ ಅಭಿಷೇಕ ಅಂಕದಕಟ್ಟೆ, ಕಾರ್ಯದರ್ಶಿ ಸಂತೋಷ್ ಪೂಜಾರಿ ತೆಕ್ಕಟ್ಟೆ, ಅಭಯ್ ದೀಕ್ಷಿತ್, ನಗರ ಯುವಮೋರ್ಚಾ ಉಪಾಧ್ಯಕ್ಷ ಸಂಪತ್ ಕೋಟೇಶ್ವರ, ಹೈನುಗಾರಿಕೆ ಪ್ರಕೋಷ್ಠ ಸಂಚಾಲಕರಾದ ಸುಧೀರ್ ಕೋಟ, ಸಹಸಂಚಾಲಕ ಮಹೇಶ್ ಶೆಣೈ ಉಪಸ್ಥಿತರಿದ್ದರು.

Comments are closed.