ಕರಾವಳಿ

ಕರವಾಳಿಯ ದೈವಸ್ಥಾನಗಳಿಗೆ ಅಪಚಾರ: ದುಷ್ಕರ್ಮಿಗಳ ವಿರುದ್ಧ ಸಾಮೂಹಿಕ ಪ್ರಾರ್ಥನೆಗೆ ವಿಹಿಂಪ ಕರೆ

Pinterest LinkedIn Tumblr

(ಕಡತ ಚಿತ್ರ)

ಮಂಗಳೂರು, ಜನವರಿ.28: ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವವರ ವಿರುದ್ಧ ನಾಳೆ 29/01/2021 ಶುಕ್ರವಾರ ಕರಾವಳಿಯ ಎಲ್ಲಾ ದೇವಸ್ಥಾನ/ದೈವಸ್ಥಾನಗಳಲ್ಲಿ ಸಾರ್ವಜನಿಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತೆ ವಿಶ್ವ ಹಿಂದು ಪರಿಷತ್ ಕರೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಗೊಳಿಸುವ ಕುಕೃತ್ಯ ನಿರಂತರವಾಗಿ ನಡೆಯುತ್ತಿದೆ.

ಮಂಗಳೂರು ಕಂಕನಾಡಿ ಗರೋಡಿ ದೇವಸ್ಥಾನ, ಅತ್ತಾವರ ಬಾಬುಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನ, ಪಂಪುವೆಲ್ ಕಲ್ಲುರ್ಟಿ ಕಲ್ಕುಡ ದೈವಸ್ಥಾನ, ಉಜ್ಜೋಡಿ ಮಹಾಕಾಳಿ ದೈವಸ್ಥಾನ, ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ,ಉಳ್ಳಾಲ ಕೊರಗಜ್ಜ ದೈವಸ್ಥಾನದ ಕಾಣಿಕೆ ಹುಂಡಿಗೆ ಬಳಸಿದ ಕಾಂಡೋಮ್ ಗಳನ್ನ ಹಾಕಿ ಅಪವಿತ್ರಗೊಳಿಸಿದಲ್ಲದೆ ದೇವರ ನಿಂದನೆಯ ಮತ್ತು ಧರ್ಮ ವಿರೋಧಿ ಬರಹಗಳನ್ನು ಬರೆದು ಹಾಕಿ ಜೊತೆಗೆ ಅಪವಿತ್ರ ಗೊಳಿಸಿದ್ದಾರೆ.

ಅಲ್ಲದೆ ಕೊಣಾಜೆ ಗೋಪಾಲ ಕೃಷ್ಣ ಮಂದಿರದ ಭಗವ ದ್ವಜವನ್ನು ಕಿತ್ತು ಅದರ ಮೇಲೆ ಮಲ ಮೂತ್ರ ವಿಸರ್ಜಿಸಿ, ಮಂದಿರ ಅವರಣದೊಳಗೂ ಮಲ ಮೂತ್ರ ವಿಸರ್ಜಿಸಿ ಅಪವಿತ್ರಗೊಳಿಸಿ ವಿಕೃತಿ ಕೃತ್ಯವನ್ನು ಎಸಗಿದ್ದಾರೆ.

ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುತ್ತಿರುವುದನ್ನು ನಾವೆಲ್ಲರೂ ಒಟ್ಟಾಗಿ ಖಂಡಿಸುವುದರ ಜೊತೆಗೆ, ಕರಾವಳಿ ಭಾಗದ ಎಲ್ಲಾ ದೇವಸ್ಥಾನ, ದೈವಸ್ಥಾನ ಮತ್ತು ಎಲ್ಲಾ ಮಂದಿರಗಳಲ್ಲಿ 29/01/2021 ಶುಕ್ರವಾರ ಎಲ್ಲರೂ ಸಾಮೂಹಿಕವಾಗಿ ದೈವ – ದೇವರಿಗೆ ಪ್ರಾಥನೆಯನ್ನು ಸಲ್ಲಿಸಿ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿ ಕುಕೃತ್ಯ ನಡೆಸುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಯಾಗಲಿ ಮತ್ತು ಇಂತಹ ಧರ್ಮವಿರೋಧಿ ಕೃತ್ಯಗಳನ್ನು ಯಾರು ಮಾಡದಿರಲಿ ಎಂದು ಪ್ರಾರ್ಥಿಸುವ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರಾದ ಗೋಪಾಲ್ ಕುತ್ತಾರ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Comments are closed.