ಕರಾವಳಿ

‘ಕಾಶ್ಮೀರಿ ಹಿಂದೂಗಳ ಗಡಿಪಾರು ಮಾಡಿದ 31 ವರ್ಷಗಳು’ ಕುರಿತು ವಿಶೇಷ ಪರಿಸಂವಾದ !’

Pinterest LinkedIn Tumblr

ಕಾಶ್ಮೀರಿ ಹಿಂದೂಗಳಿಗೆ ತಮ್ಮ ಸ್ವಂತ ಭೂಮಿಯನ್ನು ವಾಪಾಸು ದೊರಕಿಸಿಕೊಡಲು ದೇಶಾದ್ಯಂತ ಜಾಗೃತಿ ಅಗತ್ಯ ! – ಶ್ರೀ. ರಾಹುಲ ಕೌಲ್, ಅಧ್ಯಕ್ಷರು, ಯುಥ ಫಾರ್ ಪನೂನ್ ಕಾಶ್ಮೀರ

1990 ರಲ್ಲಿ ಕಾಶ್ಮೀರಿ ಹಿಂದೂಗಳು ವಲಸೆ ಹೋಗಿದ್ದಲ್ಲ. ಅವರನ್ನು ಕಾಶ್ಮೀರದಿಂದ ಹೊರದಬ್ಬಲಾಗಿತ್ತು. ನಮ್ಮ ದುಃಖವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಪರಿಹರಿಸುವುದು ಅಗತ್ಯವಾಗಿರುವಾಗ ಅದನ್ನು ಕೇವಲ ರಾಜಕೀಯ ಗೊಳಿಸಲಾಗುತ್ತಿದೆ. ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಒದಗಿಸಿ ಕೊಡಲಿಕ್ಕಿದ್ದರೆ, ನಾವು ನರಮೇಧಕ್ಕೆ ಒಳಗಾಗಿದ್ದೇವೆ ಎಂಬುದನ್ನು ಮೊತ್ತಮೊದಲು ಅಧಿಕೃತವಾಗಿ ಒಪ್ಪಿಕೊಳ್ಳಬೇಕು. ಇದನ್ನು ಒಪ್ಪಿಕೊಳ್ಳದ ಕಾರಣ ದೇಶಾದ್ಯಂತ ಹಿಂದೂಗಳಿಗೆ ಅಪಾಯವು ಎದುರಾಗಿದೆ.

ಈ ನಿಟ್ಟಿನಲ್ಲಿ ಶಾಸನ(ಕಾನೂನು) ರಚಿಸಬೇಕಾದ ಮೂಲಭೂತ ಅವಶ್ಯಕತೆಯಿದೆ ಮತ್ತು ಜನಾಂಗೀಯ ಮಸೂದೆ (ಜಿನೋಸೈಡ್ ಬಿಲ್) ಅಂಗೀಕಾರವಾದರೆ ಮಾತ್ರ ಕಾಶ್ಮೀರಿ ಹಿಂದೂಗಳ ಪುನರ್ವಸತಿ ಸಾಧ್ಯ. ಏಳೂವರೆ ಲಕ್ಷ ಕಾಶ್ಮೀರಿ ಹಿಂದೂಗಳಿಗೆ ಇನ್ನೂ ಪುನರ್ವಸತಿಯನ್ನು ಕಲ್ಪಿಸಿಲ್ಲ. ನಿರಾಶ್ರಿತ ಕಾಶ್ಮೀರಿ ಹಿಂದೂಗಳು ತಮ್ಮ ಗುರುತನ್ನು(ಅಸ್ತಿತ್ವ) ಉಳಿಸಿಕೊಳ್ಳಲು ನಮಗೆ ನಮ್ಮ ಭೂಮಿಯು ಮರಳಿ ಸಿಗುವುದು ಅವಶ್ಯವಾಗಿದೆ.

ನಾವು ಮತ್ತೆ ಅಲ್ಲಿಗೆ ಹೋಗಲು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಬೇಕಾಗಿದೆ ಮತ್ತು ಸುರಕ್ಷಿತ ವಾತಾವರಣವನ್ನು ಹೇಗೆ ರಚಿಸಲಿದ್ದಾರೆ ಎಂದು ಸರಕಾರವು ನಮಗೆ ತಿಳಿಸಬೇಕು. ನಮ್ಮ ಪುನರ್ವಸತಿಗಾಗಿ, ‘ಪನುನ್ ಕಾಶ್ಮೀರ’ಕ್ಕೆ ಭಾರತದಾದ್ಯಂತದ ಹಿಂದೂಗಳ ಬೆಂಬಲ ಬೇಕು ಮತ್ತು ಇದಕ್ಕಾಗಿ ದೇಶಾದ್ಯಂತ ಹಿಂದೂಗಳು ಈ ಬಗ್ಗೆ ಅರಿವು ಮೂಡಿಸಬೇಕು ಎಂದು ‘ಯುಥ ಫಾರ್ ಪನುನ್ ಕಾಶ್ಮೀರ’ದ ಅಧ್ಯಕ್ಷರಾದ ಶ್ರೀ  ರಾಹುಲ್ ಕೌಲ್ ಇವರು ಕರೆ ನೀಡಿದರು.

ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಕಾರ್ಯಕ್ರಮದಲ್ಲಿ ‘ಕಾಶ್ಮೀರಿ ಹಿಂದೂಗಳನ್ನು ಗಡಿಪಾರು ಮಾಡಿದ 31 ವರ್ಷಗಳು!’ ಎಂಬ ವಿಶೇಷ ಪರಿಸಂವಾದದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ‘ಯೂಟ್ಯೂಬ್ ಲೈವ್’ ಮತ್ತು ‘ಫೇಸ್‌ಬುಕ್’ ಮೂಲಕ 29715 ಜನರು ವೀಕ್ಷಿಸಿದ್ದಾರೆ ಮತ್ತು 90162 ಜನರ ವರಿಗೆ ತಲುಪಿದೆ.

‘ಎಪಿಲೋಗ್ ನ್ಯೂಸ್ ಚಾನೆಲ್’ನ ಅಧ್ಯಕ್ಷ ನ್ಯಾಯವಾದಿ ಟಿಟೊ ಗಂಜು (ಕಾಶ್ಮೀರಿ ಹಿಂದೂ) ಇವರು ಮಾತನಾಡುತ್ತಾ, ‘ಕಾಶ್ಮೀರಿ ಹಿಂದೂಗಳ ನರಮೇಧವನ್ನು ನಿರಂತರವಾಗಿ ನಿರಾಕರಿಸುವ ಮೂಲಕ ನಮ್ಮನ್ನು ‘ವಲಸಿಗರು’ ಎಂದು ಕರೆಯಲಾಗುತ್ತಿದೆ. ಈ ನರಮೇಧವನ್ನು ಪರಿಗಣಿಸದೆ ರಾಜ್ಯ ಸರಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ.

ಈ ನರಮೇಧದಲ್ಲಿ ಎಷ್ಟು ಹಿಂದೂಗಳು ಒಳಗೊಂಡಿದ್ದರು ಎಂಬುದನ್ನು ಸರಿಯಾಗಿ ದಾಖಲಿಸಲಾಗಿಲ್ಲ. 1990 ರಿಂದ 1993 ರ ನಡುವೆ, ಸುಮಾರು 25 ಸಾವಿರ ಹಿಂದೂಗಳು ನಿರಾಶ್ರಿತರ ಶಿಬಿರಗಳಲ್ಲಿ ಬದಲಾದ ವಾತಾವರಣವನ್ನು ಎದುರಿಸುತ್ತಿರುವಾಗ ಸಾವನ್ನಪ್ಪಿದರು. ಅಲ್ಲದೆ, ಸಾವಿರಾರು ಹಿಂದೂಗಳು ಕೊಲ್ಲಲ್ಪಟ್ಟರು ಮತ್ತು ಸಾವಿರಾರು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರವಾಯಿತು. ಕಳೆದ 700 ವರ್ಷಗಳಲ್ಲಿ ಕಾಶ್ಮೀರಿ ಹಿಂದೂಗಳು ಏಳು ಬಾರಿ ಕಾಶ್ಮೀರವನ್ನು ತೊರೆಯಬೇಕಾಯಿತು.

ನಮ್ಮ 21 ತಲೆಮಾರುಗಳು ನರಮೇಧವನ್ನು ಅನುಭವಿಸಿವೆ. ಇದಕ್ಕೆ ಹಿಂದೂಗಳ ಹಿಮಾಲಯೀನ (ಹಿಮಾಲಯದಂತಹ) ಸಂಸ್ಕೃತಿಯನ್ನು ನಾಶಗೊಳಿಸಿ ಕಾಶ್ಮೀರವನ್ನು ಇಸ್ಲಾಮೀಕರಿಸುವ ನಿಲುವೇ ಕಾರಣವಾಗಿದೆ. ಭಾರತದಲ್ಲಿ ನರಮೇಧ ಮಸೂದೆ (ಜಿನೋಸೈಡ್ ಬಿಲ್) ಅಂಗೀಕಾರವಾದರೆ ಬಾಂಗ್ಲಾದೇಶ, ಮ್ಯಾನ್ಮಾರ್ ಮುಂತಾದ ಇತರ ದೇಶಗಳಿಂದ ಹಿಂದೂಗಳ ಬರುವಿಕೆಯನ್ನು ನಿಲ್ಲಿಸಬಹುದು. ಈ ಮಸೂದೆಯನ್ನು ಕಾನೂನಾಗಿ ಪರಿವರ್ತಿಸಬೇಕು’, ಎಂದರು.

ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಈ ಸಮಯದಲ್ಲಿ ಮಾತನಾಡುತ್ತಾ, ‘ಕಾಶ್ಮೀರಿ ಹಿಂದೂಗಳ ನೋವು, ಸಂಕಟ, ನರಕಯಾತನೆಯನ್ನು ಅರ್ಥ ಮಾಡಿಕೊಳ್ಳಲು ಮೊದಲಿಗೆ ಎಲ್ಲರೂ 1990 ರ ಜನವರಿ 19 ರಂದು ಏನಾಯಿತು ? ಎಂಬುದನ್ನು ತಿಳಿದುಕೊಳ್ಳಬೇಕು.

ಅನೇಕ ಜನರಿಗೆ ಈ ಬಗ್ಗೆ ಇನ್ನೂ ತಿಳಿದಿಲ್ಲ. ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ನಮಗೆ ತಿಳಿಸಲಾಗಿಲ್ಲ, ವಾಸ್ತವವಾಗಿ ಇದನ್ನು ರಾಷ್ಟ್ರೀಯ ಪಿತೂರಿಯ ಮೂಲಕ ಜನರಿಂದ ಮರೆಮಾಚಲಾಯಿತು. ಆ ಸಮಯದಲ್ಲಿ 7 ಲಕ್ಷದ 50 ಸಾವಿರ ಕಾಶ್ಮೀರಿ ಹಿಂದೂಗಳು ತಮ್ಮ ಮಾತೃಭೂಮಿಯನ್ನು ತೊರೆದು ನಿರಾಶ್ರಿತರಾಗಬೇಕಾಯಿತು. ಈ ಉಚ್ಚಾಟನೆಯನ್ನು ಒಂದು ನಿರ್ದಿಷ್ಟ ರಾಜಕೀಯ ಉದ್ದೇಶದಿಂದ ಮಾಡಲಾಗಿತ್ತು.

ಉಚ್ಚಾಟನೆಯನ್ನು ಕಾಶ್ಮೀರದಲ್ಲಿ ಇಸ್ಲಾಮಿಕ್ ಆಡಳಿತಕ್ಕಾಗಿ ನಡೆಸಲಾಯಿತು. ಕಳೆದ 31 ವರ್ಷಗಳಲ್ಲಿ ಯಾವುದೇ ರಾಜಕೀಯ ಮುಖಂಡರು ಕಾಶ್ಮೀರಿ ಹಿಂದೂಗಳಿಗೆ ಭದ್ರತೆ ನೀಡುವ ಭರವಸೆ ನೀಡಿಲ್ಲ! ಕಾಶ್ಮೀರಿ ಹಿಂದೂಗಳಿಗೆ ಇನ್ನೂ ಪುನರ್ವಸತಿ ಕಲ್ಪಿಸಿಲ್ಲ. ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿಯನ್ನು ಅವರ ಭದ್ರತೆಯ ಭರವಸೆಯೊಂದಿಗೆ ಮಾಡಬೇಕು’ ಎಂದು ಶ್ರೀ ಚೇತನ ರಾಜಹಂಸ ಈ ಸಮಯದಲ್ಲಿ ಹೇಳಿದರು.

Comments are closed.