ಕರಾವಳಿ

ಒಳ್ಳೆ ವಿದ್ಯಾಭ್ಯಾಸ ಮಾಡಿ ಹೆತ್ತವರಿಗೂ ಸಮಾಜಕ್ಕೂ ಹೆಸರು ತರಬೇಕು : ಐಕಳ ಹರೀಶ್ ಶೆಟ್ಟಿ

Pinterest LinkedIn Tumblr

ಜಾಗತಿಕ ಬಂಟರ ಒಕ್ಕೂಟದಿಂದ ಕುಂದಾಪುರದಲ್ಲಿ ಸಹಾಯಧನ ವಿತರಣೆ

ನಾವು ಸಮಾಜದಲ್ಲಿ ಒಳ್ಳೆ ಕೆಲಸ ಮಾಡಿದರೆ ಸಮಾಜ ನಮ್ಮನ್ನು ಗುರುತಿಸುತ್ತದೆ ನಮ್ಮ ಮಕ್ಕಳು ಒಳ್ಳೆ ವಿದ್ಯಾಭ್ಯಾಸ ಮಾಡಿ ಹೆತ್ತವರಿಗೂ ಸಮಾಜಕ್ಕೂ ಹೆಸರು ತರಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.

ಅವರು ಕುಂದಾಪುರ ಬಂಟರ ಸಂಘದ ಸಭಾ ಭವನದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆದ ಸಹಾಯ ಧನವನ್ನು ವಿತರಿಸಿ ಮಾತನಾಡಿದರು.

ಸಮಾಜ ಕಲ್ಯಾಣ ಯೋಜನೆಯ ಹೊಸ ಮನೆ ನಿರ್ಮಾಣ ಶೇಕಡಾ 80ಮನೆಗಳು ಸಂಪೂರ್ಣ ಗೊಂಡಿದ್ದು ಇನ್ನುಳಿದ ಮನೆಗಳನ್ನು ಅತೀ ಶೀಘ್ರ ದಲ್ಲು ಸಂಪೂರ್ಣ ಮಾಡುತ್ತೇವೆ ಕುಂದಾಪುರದ ಬಂಟರು ಕಷ್ಟ ದಲ್ಲಿರುವವರು ಯೋಚಿಸಬೇಡಿ ನಿಮ್ಮ ಜೊತೆ ಒಕ್ಕೂಟ ಇದೆ. ನಮ್ಮದಾನಿಗಳು ನೀಡಿದ ಸಹಕಾರ ನಮಗೆ ನಮ್ಮ ಸಮಾಜದ ನೊಂದವರ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಯಿತು ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಮಾತನಾಡುತ್ತಾ ಒಕ್ಕೂಟ ಇದುವರೆಗೆ 6ಕೋಟಿ ರೂಪಾಯಿಗಳ ಸಹಾಯ ಧನ ವಿತರಣೆ ಮಾಡಿದೆ ನೆರೆದ ಮಕ್ಕಳಿಗೆ ಒಳ್ಳೆ ಗುಣ ನಡತೆಯಿಂದ ಒಳ್ಳೆ ಅಂಕ ಪಡೆದು ಕೀರ್ತಿ ತನ್ನಿ ಒಕ್ಕೂಟದಿಂದ ನಿಮಗೆ ಸಹಕಾರ ನೀಡುತ್ತೇವೆ , ಮನೆ ಇಲ್ಲದವರಿಗೆ ಮನೆ ಕೊಡುವ ಕೆಲಸ ಒಕ್ಕೂಟದಿಂದ ನಡೆಯುತ್ತಿದೆ ಎಂದರು,

ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಅವರು ಒಕ್ಕೂಟದ ಕಾರ್ಯಕ್ರಮಗಳ ವಿವರ ನೀಡಿ ಪ್ರಸ್ತಾವನೆ ಮಾಡಿದರು ಕುಂದಾಪುರ ಬಂಟರ ಸಂಘದ ಸಂಚಾಲಕ ಸುಧಾಕರ ಶೆಟ್ಟಿ ಅವರ್ಸೆ ಯುವ ಬಂಟರ ಸಂಘದ ಅಧ್ಯಕ್ಷ ಸುನಿಲ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ವಿತರಣೆ ಮಾಡಿದರು.

Comments are closed.