ಅಂತರಾಷ್ಟ್ರೀಯ

ಕತಾರ್ ಭಾರತೀಯ ಸಾಂಸ್ಕೃತಿಕ ಸಂಘದ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೇರಿದ ಪಿ. ಏನ್‌.ಬಾಬುರಾಜನ್‌ರಿಗೆ ಗೌರವಭಿನಂದನೆ

Pinterest LinkedIn Tumblr

ಕತಾರ್ : ಇತ್ತೀಚಿಗೆ ನಡೆದ ಕತಾರಿನ ಭಾರತೀಯ ಸಾಂಸ್ಕೃತಿಕ ಸಂಘದ ಚುನಾವಣೆಯಲ್ಲಿ ಜಯಭೇರಿಗಳಿಸಿ ಅಧ್ಯಕ್ಷ ಸ್ಥಾನಕ್ಕೇರಿದ ಶ್ರೀ ಪಿ. ಏನ್. ಬಾಬುರಾಜನ್ ರವರಿಗೆ ಚಿಕ್ಕಮಗಳೂರು ಗೆಳೆಯರ ಬಳಗ (CFC) ಹಾಗೂ ನಿಯಾಜ್ ಅಹ್ಮದ್ ಅಭಿಮಾನಿ ಬಳಗದವರಿಂದ (NFC) ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಯಿತು.

ಇದೇ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಗಳಿಸಿ ದಾಖಲೆಯನ್ನು ನಿರ್ಮಿಸಿದ ಕತಾರಿನ ಅಚ್ಚುಮೆಚ್ಚಿನ ಕನ್ನಡಿಗ , ಸಮಾಜ ಸೇವಕ, ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ( ಮಾಜಿ ಉಪಾಧ್ಯಕ್ಷ – ಕರ್ಣಾಟಕ ಸಂಘ ಕತಾರ್ , ಮಾಜಿ ಸಹ ಕಾರ್ಯದರ್ಶಿ – ಐ. ಸಿ . ಬಿ . ಫ್ ) ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂಘದ (CFC ಹಾಗೂ NFC) ಅಧ್ಯಕ್ಷರಾದ ಇಸ್ಮಾಯಿಲ್ ಅಬೂಬಕ್ಕರ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶೈಖ್ ಮುದಸ್ಸಿರ್ ಅಹ್ಮದ್ ರವರು ಸನ್ಮಾನ ನೆರವೇರಿಸಿದರು.

ಮಹಿಳಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನೂರ್ ಉಲ್ ಹುದಾರವರು ಹಾಗೂ ಮಿಸ್ ಶೇಖಾ ಮಡಿಹಾ ಹೂಗುಚ್ಚೆಯನ್ನು ಕೊಟ್ಟು ಅಭಿನಂದಿಸಿದರು. ಉಪಾಧ್ಯಕ್ಷರಾದ ಜಾಕಿರ್ ಅಹ್ಮದ್ ರವರು ಕತಾರಿನ ಖ್ಯಾತ ಸಿಹಿ ತಿಂಡಿಯ ಪೆಟ್ಟಿಗೆಯನ್ನು ವಿತರಿಸಿ ಶುಭವನ್ನು ಹಾರೈಸಿದರು .

ಕಾರ್ಯಕ್ರಮವನ್ನು ಜಾಕಿರ್ ಅಹ್ಮದ್ ರವರು ನಿರೂಪಿಸಿದರು. ಶ್ರೀ ಸುಬ್ರಮಣ್ಯ ಹೆಬ್ಬಾಗಿಲಾರ ಸಮಾಜ ಸೇವೆಯನ್ನು ಕೊಂಡಾಡಿ ಪ್ರಶಂಸನೀಯ ಮಾತುಗಳನ್ನಾಡಿದರು. ಇಸ್ಮಾಯಿಲ್ ಅಬೂಬಕ್ಕರ್ ವಂದನಾರ್ಪಣೆಯನ್ನು ನಡೆಸಿಕೊಟ್ಟರು.

ಐಸಿಬಿಎಫ್ ಮಾಜಿ ಮುಖ್ಯಸ್ಥ ಶ್ರೀ ಮಹೇಶ್ ಗೌಡ, ಐಸಿಬಿಎಫ್ ನ ನೂತನ ಸದಸ್ಯ ದಿನೇಶ್ ಗೌಡ ಉಪಸ್ಥಿತರಿದ್ದರು. ಹಾಗೂ ಸಂಘದ (CFC ಹಾಗೂ NFC) ಪಧಾಧಿಕಾರಿಗಳಾದ ರಾಇಶ್ , ಜುನೈದ್ , ಒವಯಿಸ್, ಇಸ್ಹಾಕ್, ಇಮ್ರಾನ್ ಹಾಗೂ ಇರ್ಷಾದ್ ಉಪಸ್ಥಿತರಿದ್ದರು.

Comments are closed.