ಕರಾವಳಿ

ಸಾಲಿಗ್ರಾಮ ಜಾತ್ರೆಯಲ್ಲಿ ಬಲೂನು ವ್ಯಾಪಾರ, ಭಿಕ್ಷಾಟನೆ ನಿರತ ಮಕ್ಕಳ ರಕ್ಷಣೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಾಲಿಗ್ರಾಮ, ಜಿಲ್ಲಾ ನಾಗರಿಕ ಸೇವಾ ಸಮಿತಿ ಇವರು ಜಂಟಿಯಾಗಿ ಸಾಲಿಗ್ರಾಮ ಜಾತ್ರೆಯಲ್ಲಿ ಬಲೂನ್ ಮಾರುತ್ತಿದ್ದವರು ಹಾಗೂ ಬಾಲ ಭಿಕ್ಷುಗಳನ್ನು ಸ್ಥಳಾಂತರಿಸಿದ್ದಾರೆ.

ರಾಜಸ್ತಾನ ಮೂಲದ ಕುಟುಂಬಗಳೊಂದಿಗೆ ಮಕ್ಕಳು ಸಹ ಬಲೂನು ವ್ಯಾಪಾರ ಮಾಡುತ್ತಿದ್ದು ಗಮನಿಸಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ತಕ್ಷಣ ತಂಡದೊಂದಿಗೆ ತೆರಳಿ 8 ಹೆಣ್ಣುಮಕ್ಕಳು 4 ಗಂಡುಮಕ್ಕಳನ್ನು ರಕ್ಷಿಸಿ ಮಕ್ಕಳನ್ನು ದುಡಿಸದೆ ಶಿಕ್ಷಣ ನೀಡುವಂತೆ ಪೋಷಕರನ್ನು ಮನವರಿಕೆ ಮಾಡಿಸಿ ಅವರೊಂದಿಗೆ ತಮ್ಮ ಸ್ವಂತ ಊರಿಗೆ ಹೊಗುವಂತೆ ರೈಲ್ವೆ ನಿಲ್ದಾಣಕ್ಕೆ ಕಳುಹಿಸಿದರು. ಭಿಕ್ಷಾಟನೆ ನಿರತ ಸುಮಾರು 16 ಮಕ್ಕಳನ್ನು ರಕ್ಷಿಸಿ ಭಿಕ್ಷಾಟನೆ ಮಾಡದಂತೆ ತಡೆದು ಪೋಷಕರೊಂದಿಗೆ ಕಳುಹಿಸಲಾಯಿತು .ಒಟ್ಟಾರೆ ಜಾತ್ರೆಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುದು ಅಪರಾಧವಾಗಿದ್ದು ಮಕ್ಕಳು ಓದಬೇಕೆನ್ನುವುದು ಇಲಾಖೆಯ ಆಶಯವಾಗಿದೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕೋಟ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ. ಪಿ, ಸಹಾಯಕ ಉಪನಿರೀಕ್ಷಕಿ ಮುಕ್ತಾ, ಪಟ್ಟಣ ಪಂಚಾಯತ್ ಸಾಲಿಗ್ರಾಮ ಇದರ ಮುಖ್ಯಾಧಿಕಾರಿ ಅರುಣ್ ಕುಮಾರ್ ,ಕೋಟ ಠಾಣಾ ಹೆಡ್ ಕಾನ್ಸ್ಟೇಬಲ್ ಸುರೇಶ್, ರಾಜು, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಪಿಲ, ಸಮಾಜ ಕಾರ್ಯಕರ್ತರಾದ ಯೋಗೀಶ್, ಸುರಕ್ಷಾ, ಸಂದೇಶ್, ಜಿಲ್ಲಾ ನಾಗರಿಕ ಸೇವಾ ಸಮಿತಿಯ ನಿತ್ಯಾನಂದ ವಳಕಾಡು, ತಾರಾನಾಥ್ ಮೇಸ್ತ ಭಾಗವಹಿಸಿದ್ದರು

ಇಲಾಖಾ ಅಧಿಕಾರಿಗಳೊಂದಿಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಲತಾ ಹೆಗ್ಡೆ ತಾವು ರಕ್ಷಣಾ ಕಾರ್ಯಾಚರಣೆಗೆ ಸಾಥ್ ನೀಡಿದರು .

 

Comments are closed.