ಮಂಗಳೂರು: ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಒಂಬತ್ತನೇ ದಿನದ ಬಲಿಪೂಜೆ, ನೊವೆನ-ಪ್ರಾರ್ಥನೆಗಳು ಗುರುವಾರ ನಡೆದವು. ವಂ. ಗುರು ಡೋಮಿನಿಕ್ ಮೊದಲನೆಯ ಬಲಿಪೂಜೆ ಅರ್ಪಿಸಿದರು.
ಆಧ್ಯಾತ್ಮಿಕ, ಧಾರ್ಮಿಕ ಸೇವೆ ನೀಡುವವರಿಗಾಗಿ ವಿಶೇಷವಾಗಿ ಪ್ರಾರ್ಥನೆಯನ್ನು ನಡೆಸಲಾಯಿತು. ವಂ. ಗುರು ಸುನಿಲ್, ವಂ. ಗುರು ದೀಪ್, ವಂ. ಗುರು ಅರ್ವಿನ್, ವಂ. ಗುರು ಸಂದೀಪ್ ಕುಮಾರ್ ಬಲಿಪೂಜೆ ಅರ್ಪಿಸಿದರು.
ಸಹಸ್ರಾರು ಭಕ್ತಾಧಿಗಳು ಬಂದು ಪ್ರಾರ್ಥನಾ ವಿಧಿಗಳಲ್ಲಿ ಭಾಗವಹಿಸಿದರು ಹಾಗೂ ಕೊರೋನಾ ನಿಮಿತ್ತ ಇರುವ ನಿಯಮಗಳನ್ನು ಪಾಲಿಸಿದರು.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 7:30ರ ವರೆಗೆ ಕೊಂಕಣಿ, ಇಂಗ್ಲಿಷ್, ಕನ್ನಡ, ಮತ್ತು ಮಳಯಾಳಂ ಬಾಷೆಗಳಲ್ಲಿ ನೊವೆನ ಬಲಿಪೂಜೆಗಳು ನಡೆದವು.