ಕರಾವಳಿ

ನೂತನ ಪೋಲಿಸ್ ಆಯುಕ್ತರಿಂದ ಮಂಗಳೂರು ಕಥೋಲಿಕ ಬಿಷಪರ ಭೇಟಿ : ಸಾಧಕ ಬಾಧಕಗಳ ಬಗ್ಗೆ ಚರ್ಚೆ

Pinterest LinkedIn Tumblr

ಮಂಗಳೂರು : ನೂತನ ಪೋಲಿಸ್ ಆಯುಕ್ತರಾದ ಶ್ರೀ ಎನ್ ಶಶಿಕುಮಾರ್ ಐಪಿಎಸ್ ರವರು ಮಂಗಳೂರಿನ ಕಥೋಲಿಕ ಧರ್ಮಪ್ರಾಂತ್ಯದ ಬಿಷಪರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾರವರನ್ನು ಜನವರಿ 12ರಂದು ಬಿಷಪರ ನೀವಾಸದಲ್ಲಿ ಭೇಟಿ ನೀಡಿ ಆಶೀರ್ವಾದವನ್ನು ಪಡೆದರು.

ಈ ಸಮಯದಲ್ಲಿ ಬಿಷಪರು ಮಂಗಳೂರು ಧರ್ಮಪ್ರಾಂತ್ಯದ ಚರಿತ್ರೆ, ಪ್ರಮುಖ ಚರ್ಚುಗಳ ವಿಶೇಷತೆ ಹಾಗೂ ವಿದ್ಯಾಸಂಸ್ಥೆಗಳ ಬಗ್ಗೆ ತಿಳಿಸಿ. ಕೆಲವೊಂದು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಅಯುಕ್ತರು ಮಾತಾನಾಡಿ, ಮುಂದಿನ ದಿನಗಳಲ್ಲಿ ಮಂಗಳೂರಿನ ಪ್ರಮುಖ ಚರ್ಚುಗಳಿಗೆ ಭೇಟಿ ನೀಡುವ ಆಶಯವನ್ನು ವ್ಯಕ್ತಪಡಿಸಿದರು

ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರು ವಂ| ಮ್ಯಾಕ್ಸಿಂ ಎಲ್ ನೊರೊನ್ಹಾ, ಛಾನ್ಸಲರಾದ ವಂ| ವಿಕ್ಟರ್ ಜೋರ್ಜ್ ಡಿಸೋಜಾ, ಸಾರ್ವಜನಿಕ ಸಂಪರ್ಕ ಆಧಿಕಾರಿಗಳಾದ ಶ್ರೀ ರಾಯ್ ಕಾಸ್ಟೆಲಿನೊ ಹಾಗೂ ವಂ| ವಿಕ್ಟರ್ ವಿಜೆಯ್ ಲೋಬೊ, ವಂ ಮ್ಯಾಕ್ಸಿಮ್ ರೊಜಾರಿಯೋ, ಕೆನರಾ ಸಂಪರ್ಕ ಕೇಂದ್ರದ ನಿರ್ದೇಶಕರಾದ ವಂ| ರಿಚಾರ್ಡ್ ಡಿಸೋಜಾ, ಡಿಸಿಪಿ(ಕಾನೂನು ಮತ್ತು ಸುವ್ಯವಸ್ಥೆ) ಶ್ರೀ ಹರಿರಾಮ್ ಶಂಕರ್ ಐಪಿಎಸ್, ಹಾಗೂಎಸಿಪಿ (ಕೇಂದ್ರ ವಿಭಾಗ) ಶ್ರೀ ಜಗದೀಶ್‍ರವರು ಉಪಸ್ಥಿತರಿದ್ದರು

Comments are closed.