ಕರಾವಳಿ

ಪೊಲೀಸರೆಂದು ಮಹಿಳೆಗೆ ನಂಬಿಸಿ ಉಡುಪಿಯಲ್ಲಿ ಚಿನ್ನಾಭರಣ ದೋಚಿದ ಖದೀಮರು..!

Pinterest LinkedIn Tumblr

ಉಡುಪಿ: ಪೊಲೀಸರೆಂದು ನಂಬಿಸಿದ ಇಬ್ಬರು ವ್ಯಕ್ತಿಗಳು ಮಹಿಳೆಯೊಬ್ಬರಿಂದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಭಾನುವಾರ ನಗರದ ಅಂಬಲಪಾಡಿ ಬಳಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಭಾನುವಾರ ಅಂಬಲಪಾಡಿ ನಿವಾಸಿ ವಸಂತಿ ಮಧ್ಯಾಹ್ನ 12.30 ಸುಮಾರಿಗೆ ಮನೆ ಕೆಲಸ ಮುಗಿಸಿ ಶ್ಯಾಮಿಲಿ ಹಾಲ್ ಎದುರಿನ ಸಾಯಿರಾಧ ಅಪಾರ್ಟಮೆಂಟ್ ಎದುರುಗಡೆ ಇರುವ ಅಂಬಲಪಾಡಿ ಜಂಕ್ಷನ್ ಬಳಿಯಿಂದ ಕರಾವಳಿ ಕಡೆಗೆ ಹೋಗುವ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಶ್ಯಾಮಿಲಿ ಹಾಲ್ ವಾಹನ ಪಾರ್ಕಿಂಗ್ ಸ್ಥಳದ ಬಳಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಿಲ್ಲಿಸಿ ‘ನಾವು ಪೊಲೀಸ್… ಮುಂದೆ ಯಾರೋ ಹೆಂಗಸಿಗೆ ಚೂರಿ ತೋರಿಸಿ ಚಿನ್ನದ ಸರ ತೆಗೆದುಕೊಂಡು ಹೋಗಿದ್ದಾರೆ ನಿಮ್ಮ ಚಿನ್ನಾಭರಣಗಳನ್ನು ತೆಗೆದು ಕೊಡಿ ಪೇಪರಿನಲ್ಲಿ ಕಟ್ಟಿಕೊಡುತ್ತೇನೆ’ ಎಂದು ಹೇಳಿ ನಂಬಿಸಿದ್ದಾರೆ.

ಇಬ್ಬರು ವ್ಯಕ್ತಿಗಳು ಮಹಿಳೆಯಿಂದ ಮುಕ್ಕಾಲು ಪವನ್ ಚಿನ್ನದ ಸರ ಹಾಗೂ ಅರ್ಧ ಪವನ್ನ 2 ಚಿನ್ನದ ಬಳೆಗಳನ್ನು ಪಡೆದುಕೊಂಡು ಪೇಪರ್ನಲ್ಲಿ ಸುತ್ತಿ ವಾಪಾಸು ಕೊಟ್ಟು ಬೈಕಿನಲ್ಲಿ ಹೋದಾಗ ವಸಂತಿ ಅವರಿಗೆ ಅನುಮಾನ ಬಂದು ನೋಡಿದಾಗ ನಕಲಿ 5 ಬಳೆಗಳು ನೀಡಿ ಚಿನ್ನಾಭರಣವನ್ನು ಪಡೆದು ನಾಪತ್ತೆಯಾಗಿದ್ದಾರೆ. ಕಳೆದುಕೊಂಡ ಚಿನ್ನದ ಮೌಲ್ಯ 40 ಸಾವಿರ ರೂಪಾಯಿ ಆಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.