ಬೆಂಗಳೂರು: ಸ್ವಾತಂತ್ರ್ಯಾ ನಂತರ ಈ ಎಪ್ಪತ್ತು ವರ್ಷದಲ್ಲಿ ದೇಶದಲ್ಲಿ ಏನೇನು ನಡೆಯಬೇಕಿತ್ತೋ ಅದು ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ನಡೆಯುತ್ತಿದೆ. ಏಳು ವರ್ಷದಲ್ಲಿ ನಮೋ ಸಾಧನೆ ನಿಜಕ್ಕೂ ಹೆಮ್ಮೆಯನಿಸುತ್ತದೆ. 370 ವಿಧಿ ಮೂಲಕ ಕಾಶ್ಮೀರದ ಹಲವಾರು ವರ್ಷಗಳ ಸಮಸ್ಯೆ ನಿವಾರಣೆಗೆ ಕಠಿಬದ್ಧರಾಗಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಮೋದಿಯವರ ಮುಂದಾಳತ್ವದಲ್ಲಿ ರಾಮಮಂದಿರ ನಿರ್ಮಾಣವಾಗುವುದು ನಿಜಕ್ಕೂ ದೈವಸಂಕಲ್ಪವಾಗಿತ್ತು ಅನ್ನಿಸುತ್ತಿದೆ ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅಭಿಪ್ರಾಯಪಟ್ಟಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದು ನಿಜಕ್ಕೂ ಸಂತಸದ ವಿಚಾರ. ಬಿಜೆಪಿ ಆಡಳಿತದ ನಮೋ ಸರಕಾರದಲ್ಲಿ ಜನರ ಆಶೋತ್ತರಗಳು ಸಾಕಾರಗೊಳ್ಳುತ್ತಿದೆ. ಮೋದಿಯವರ ಸಾಧನೆ, ಚಮತ್ಕಾರಗಳನ್ನು ದೂರದರ್ಶನದಲ್ಲಿ ನೋಡುತ್ತಿರುತ್ತೇನೆ. ಕಾಶ್ಮೀರದ ಸಮಸ್ಯೆ ಮೋದಿಯವರು ಬಂದ ಮೇಲೆ ಬದಲಾವಣೆಯಾಗಿದೆ. ನನ್ನ ಪೂರ್ವಜರು ಕಾಶ್ಮೀರದ ಅನಂತನಾಗಿನವರು. 1526ರಲ್ಲಿ ಬಾಬರ್ ಹಿಂದೂಸ್ಥಾನಕ್ಕೆ ಬಂದ ಬಳಿಕ ಬಾಬ್ರಿ ಮಸೀದಿ ದ್ವಂಸ, ದೇವಸ್ಥಾನ ಕೆಡವಿದ್ದು ಮೊದಲಾದ ಸಮಸ್ಯೆಗಳು ನಡೆದವು. ಕಾಶ್ಮೀರದಲ್ಲಿದ್ದ ಶಂಕರಾಚಾರ್ಯರ ಅನುಯಾಯಿಗಳಾಗಿದ್ದ ಸಾರಸ್ವತ ಮುನ್ನೂರು ಕುಟುಂಬಗಳು ಅವರವರ ಮನೆದೇವರುಗಳ ಜೊತೆ ಗೋವಾಕ್ಕೆ ಬಂದರು. ಇಸ್ಲಾಂನಿಂದ ತಪ್ಪಿಸಿಕೊಂಡು ಬಂದ ಅವರಿಗೆ ಗೋವಾದಲ್ಲಿ ಕ್ರಿಶ್ಚಿಯನಿಟಿ ಮತಾಂತರ ಸಮಸ್ಯೆಯೊಡ್ಡಿತ್ತು. ಅಲ್ಲಿಂದ ಆ ಕುಟುಂಬ ಶ್ರಂಗೇರಿಗೆ ಬಂದಿದ್ದು ಅಲ್ಲಿ ಶಂಕರಾಚಾರ್ಯರು ನಗರ ಸಂಸ್ಥಾನದಲ್ಲಿ ಶಿವಪ್ಪ ನಾಯ್ಕರ ಆಳ್ವಿಕೆಯ ನಗರ ಹೊಸನಗರವಿತ್ತು. ಹೊಸನಗದರಲ್ಲಿ ಶಿವಪ್ಪ ನಾಯಕರು ವಿಜಯನಗರ ಸಾಮ್ರಾಜ್ಯದ ಮಾಂಡಲಿಕರಾಗಿದ್ದಾಗ ನನ್ನ ಪೂರ್ವಜರು ಅಲ್ಲಿಗೆ ಬಂದರು. ಶಿವಪ್ಪ ನಾಯಕ ಅವರ ಅಳಿಯ ರಾಮರಾಯ ಸೇನಾಧಿಪತಿಯಾಗಿದ್ದು ನಿಲೇಶ್ವರದಿಂದ ಕಾರವಾರದ ತನಕ ಕರಾವಳಿಯಲ್ಲಿ ನಮ್ಮ ಪೂರ್ವಜರಿಗೆ ನೆಲೆಯೂರಲು ಅವಕಾಶ ನೀಡಿದ್ದರು. ಅಲ್ಲಿಂದ ಆಯಾಯ ವ್ಯಾಪ್ತಿಯಲ್ಲಿ ಸಾರಸ್ವತರ ಹೆಸರು ನಮ್ಮ ಹೆಸರಿನಲ್ಲಿ ಬಂದವು.
ಕಾಶ್ಮೀರದ ಇಷ್ಟು ವರ್ಷದ ಅನಾಹುತ ತಪ್ಪಿಸಿದ್ದು ನರೇಂದ್ರ ಮೋದಿಯವರು. ನಾನು ಇದೆಲ್ಲಾ ವಿಚಾರ ಎಲ್ಲಿಯೂ ಹೇಳಿಕೊಂಡಿಲ್ಲ. ಇದೊಂದು ಒಳ್ಲೆ ಅವಕಾಶ ಎಂದು ಸಂವಾದ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ. ಭವ್ಯ ರಾಮಂದಿರಕ್ಕೆ ನಾನು ಹಾಗೂ ನನ್ನ ಸ್ನೇಹಿತರ ಮೂಲಕ ಮಂದಿರ ನಿರ್ಮಾಣ ಕಾರ್ಯಕ್ಕೆ ಅಳಿಲು ಸೇವೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.