ಕರಾವಳಿ

ಮಂಗಳೂರು ಏರ್‌ಪೋರ್ಟ್‌ನಲ್ಲಿ 67 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ: ಇಬ್ಬರ ಸೆರೆ

Pinterest LinkedIn Tumblr

ಮಂಗಳೂರು, ಜನವರಿ.07: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಸೋಮವಾರ ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಚಿನ್ನ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿ ಇಬ್ಬರನ್ನು ವಶಕ್ಕೆ ಪಡಿದಿದ್ದಾರೆ.

ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪೈಸ್ ಜೆಟ್ ನಲ್ಲಿ ಪ್ರಯಾಣಿಸಿದ್ದ ಇಬ್ಬರ ಬಳಿಯಲ್ಲಿ 67 ಲಕ್ಷ ರೂ. ಮೌಲ್ಯದ 1.2 ಕಿ.ಗ್ರಾಂ ಅಕ್ರಮ ಚಿನ್ನ ಪತ್ತೆಯಾಗಿದೆ.

ಭಟ್ಕಳದ ಮೂಲದ ಪ್ರಯಾಣಿಕ ದೊಡ್ಡ ಗಾತ್ರದ ಪ್ಲಾಸ್ಟಿಕ್ ಕ್ಯಾಪ್ಸೂಲ್‌ನೊಳಗೆ ಚಿನ್ನದ ಪೇಸ್ಟ್ ತುಂಬಿಸಿ ಗುದದ್ವಾರದಲ್ಲಿಟ್ಟು ಸಾಗಾಟ ಮಾಡಿದ್ದ. ಈತನಿಂದ 641 ಗ್ರಾಂ ಹಾಗೂ ಇನ್ನೋರ್ವ ಕೇರಳದ ಕಾಸರಗೋಡಿನ ನಿವಾಸಿ 646 ಗ್ರಾಂ ಚಿನ್ನದ ಪೇಸ್ಟ್‌ನ್ನು ಒಳಚಡ್ಡಿಯಲ್ಲಿಟ್ಟು ಸಾಗಾಟ ಮಾಡಿದ್ದ. ಒಟ್ಟು 1.2 ಕಿ.ಗ್ರಾಂ. ಚಿನ್ನ ಪತ್ತೆ ಮಾಡಲಾಗಿದೆ.

ಡಿಆರ್‌ಐ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ. ಆರೋಪಿಗಳು ಸಾಗಾಟ ಮಾಡಲು ಸಹಕಾರಿಯಾಗಲು ಚಿನ್ನವನ್ನು ಪೇಸ್ಟ್ ರೂಪಕ್ಕೆ ಪರಿವರ್ತಿಸಿದ್ದರು. ಪತ್ತೆಯಾದ ಚಿನ್ನವು 999 ಪರಿಶುದ್ಧತೆ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.