ಉಡುಪಿ: ಜ.1 ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಸೇರಿದಂತೆ ವಿದ್ಯಾಗಮ ಕಾರ್ಯಕ್ರಮ ಕೂಡ ಆರಂಭವಾಗಿದ್ದು ಖುಷಿಖುಷಿಯಾಗಿ ಶಾಲೆಗೆ ವಿದ್ಯಾರ್ಥಿಗಳು ಬಂದಿದ್ದಾರೆ.
ಶಾಲೆ ಆರಂಭ ಹಿನ್ನೆಲೆ ಬೆಳಿಗ್ಗೆಯೇ ಶಾಲೆಗೆ ವಿದ್ಯಾರ್ಥಿಗಳ ಆಗಮಿಸಿದ್ದು ಕೋವಿಡ್ ನಿಯಮಾವಳಿಯಂತೆ ತರಗತಿಗಳು ಆರಂಭವಾಗಿದೆ. ಶೇಖಡವಾರು ಹೋಲಿಸಿದರೆ ಜಿಲ್ಲೆಯಲ್ಲಿ ಕುಂದಾಪುರದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದು ಹೆಚ್ಚಾಗಿತ್ತು.
ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವಾಗ ಮಾಸ್ಕ್ ಕಡ್ಡಾಯ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು ಒಂದು ಬೆಂಚ್ ನಲ್ಲಿ ಇಬ್ಬರೇ ಕೂರಲು ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆನಿಂದ ಹತ್ತನೆ ತರಗತಿ, ದ್ವಿತೀಯ ಪಿಯು, ವಿದ್ಯಾಗಮ ತರಗತಿಗಳು ಕೂಡ ಆರಂಭವಾಗಿದೆ.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮಾವಿನ ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಕುಂದಾಪುರದ ಜ್ಯೂನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿಕ್ಷಕರು ಪ್ರತಿ ತರಗತಿಗಳಿಗೂ ತೆರಳಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು.
(ವರದಿ- ಯೋಗೀಶ್ ಕುಂಭಾಸಿ)