ಕುಂದಾಪುರ: ಬುಧವಾರ ಕುಂದಾಪುರದಲ್ಲಿ ನಡೆದ ಗ್ರಾಮಪಂಚಾಯತ್ ಚುನಾವಣೆಯ ಮತಎಣಿಕೆ ಸಂದರ್ಭ ಅಧಿಕಾರಿಗಳ ಖಡಕ್ ತನ ಪ್ರದರ್ಶನವಾಯಿತು. ಪೊಲೀಸರಿಗೆ ಎಸಿ ಎಚ್ಚರಿಕೆ ನೀಡಿದ್ದು ಒಂದು ಸಂಗತಿಯಾದರೆ ಮತಎಣಿಕೆ ಕೇಂದ್ರಕ್ಕೆ ಡಿಸಿ ಆಗಮಿಸುತ್ತಿದ್ದಂತೆ ಮಾಸ್ಕ್ ಧರಿಸಲು ಎಲ್ಲರೂ ಅಲರ್ಟ್ ಆದರು.
ಡಿಸಿ ಬಂದ್ರು ಮಾಸ್ಕ್ ಹಾಕಿಕೊಳ್ಳಿ
ಕುಂದಾಪುರ ಭಂಡಾರ್‌ಕಾರ್‍ಸ್ ಕಾಲೇಜ್ ಮತ ಎಣಿಕೆ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮದ್ಯಾಹ್ನದ ನಂತರ ಭೇಟಿ ನೀಡಿ, ಅರ್ಧಗಂಟೆಗೂ ಹೆಚ್ಚು ಸಮಯ ಮತ ಎಣಿಕೆ ಕೇಂದ್ರದಲ್ಲಿದ್ದರು. ಡಿಸಿ ಬರುವ ಸಮಯ ಹೆಚ್ಚಿನವರ ಮಾಸ್ಕ್ ಹಾಕಿಕೊಂಡಿರಲಿಲ್ಲ. ಡಿಸಿ ಬರುತ್ತಿರುವುದ ಕಂಡ ನಾಗರಿಕರು ಡಿಸಿ ಬಂದ್ರು…ಡಿಸಿ ಬಂದ್ರು ಮಾಸ್ಕ್ ಹಾಕಿಕೊಳ್ಳಿ ಎಂದು ಎಚ್ಚರಿಸಿ, ಮಾಸ್ಕ್ ಹಾಕಿದರೆ ಡಿಸಿ ಬರುವುದ ಕಂಡು ಎಲ್ಲರೂ ಅಲರ್‍ಟ್ ಆಗಿ ಮಾಸ್ಕ್ ಹಾಕಿಕೊಂಡರು.
ಕೆಲಸ ಮಾಡಲು ಆಗದಿದ್ದರೆ ರಿಲೀವ್ ಮಾಡ್ತೀನಿ..
ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಕರ್ತವ್ಯಕ್ಕೆ ಪೊಲೀಸರು ಸರಿಯಾಗಿ ಸ್ಪಂಧಿಸುತ್ತಿಲ್ಲ. ಹಲವು ಬಾರಿ ರೌಂಡ್‌ನಲ್ಲಿ ಎಚ್ಚರಿಕೆ ನೀಡಿದರೂ ಮತ ಎಣಿಕೆ ಕೇಂದ್ರದ ಮುಂದೆ ಸುಮ್ಮನೆ ನಿಲ್ಲುತ್ತಿದ್ದೀರಿ.ಸೂಚನೆ ಕೊಟ್ಟರೂ ಪಾಲಿಸದ ಮೇಲೆಯೂ ನಿರ್ಲಿಕ್ಷೆ ವಹಿಸುವುದು ತರವಲ್ಲ. ನಿಮಗೆ ಸರಿಯಾಗಿ ಕರ್ತವ್ಯ ಮಾಡಲಾಗದಿದ್ದರೆ ಹೇಳಿ ನಿಮ್ಮನ್ನು ರಿಲ್ಯೂವ್ ಮಾಡುತ್ತೇನೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಚುನಾವಣೆ ನೋಡೆಲ್ ಅಧಿಕಾರಿ ಕೆ.ರಾಜು ದ್ವನಿವರ್ಧಕ ಮೂಲಕ ಎಚ್ಚರಿಕೆ ನೀಡಿದರು. ಎಸಿ ಖಡಕ್ ಎಚ್ಚರಿಕೆ ನಂತರ ಎಚ್ಚರಗೊಂಡು ಪೊಲೀಸರು ಕರ್ತವ್ಯ ನಿರತರಾದರು.