ಕರಾವಳಿ

ಸನಾತನ ಧರ್ಮದ ಬಗ್ಗೆ ಜಾಗೃತಿಗಾಗಿ “ಧರ್ಮಸಂವಾದ” : 100 ಸಂಚಿಕೆಗಳು ಪೂರ್ಣ -ವಿಶೇಷ ಸಂವಾದ ಕಾರ್ಯಕ್ರಮ

Pinterest LinkedIn Tumblr

ಲಾಕ್ ಡೌನ ಕಾಲಾವಧಿಯಲ್ಲಿ ಸಮಾಜದಲ್ಲಿ ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಆಧ್ಯಾತ್ಮಿಕ ಸಾಧನೆಯ ಮಹತ್ವ್ವವನ್ನು ತಿಳಿಸುವ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ‘ಧರ್ಮಸಂವಾದ’ ಎಂಬ ಆನ್‌ಲೈನ್ ಮಾಲಿಕೆಯನ್ನು ಪ್ರಾರಂಭಿಸಲಾಯಿತು.

ಇದರಲ್ಲಿ ಹಿಂದೂ ಧರ್ಮದ ಆಚಾರ-ವಿಚಾರ, ಧರ್ಮವಿಜ್ಞಾನ, ಖಗೋಳಶಾಸ್ತ್ರ, ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿ, ಧರ್ಮಗ್ರಂಥ, ಪ್ರಾಚೀನ ಭಾರತದ ನೌಕಾಶಾಸ್ತ್ರ, ಆಧ್ಯಾತ್ಮಿಕ ಸಾಧನೆ, ಗುರು-ಶಿಷ್ಯ ಪರಂಪರೆ, ಹದಿನಾರು ಸಂಸ್ಕಾರಗಳು, ಆಚಾರಧರ್ಮ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

ಫೇಸ್‌ಬುಕ್ ಮತ್ತು ಯೂಟ್ಯೂಬ್ ಮೂಲಕ ಪ್ರಸಾರವಾಗುವ ಈ ಕಾರ್ಯಕ್ರಮವು ವಾರದಲ್ಲಿ ಮೂರು ದಿನ ನೇರಪ್ರಸಾರ ಹಾಗೂ ಮೂರು ದಿನ ಮರುಪ್ರಸಾರವಾಗುತ್ತದೆ. ಈ ಕಾರ್ಯಕ್ರಮದ ನೂರು ಸಂಚಿಕೆಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ‘ವಿಶೇಷ ಸಂವಾದ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ 75ನೇ ಸಂತರಾದ ಪೂಜ್ಯನೀಯ ರಮಾನಂದ ಗೌಡ ಇವರು ಉಪಸ್ಥಿತರಿದ್ದು ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಈ ಕಾರ್ಯಕ್ರಮವು ಹೇಗೆ ಆರಂಭಗೊಂಡಿತು.

ಇದರ ಆರಂಭದ ದಿನಗಳಲ್ಲಿ ಎದುರಿಸಿದ ಸವಾಲುಗಳು ಹಾಗೂ ಅದಕ್ಕೆ ಮಾಡಿದ ಉಪಾಯಗಳ ಬಗ್ಗೆ ಮಾಹಿತಿ ನೀಡಿದರು.

ಹಾಗೆಯೇ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ ಗೌಡ ಇವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಧರ್ಮಸಂವಾದದ ಮೂಲಕಇದುವರಗೆ 18 ಲಕ್ಷಕ್ಕೂ ಅಧಿಕ ಜನರು ಲಾಭ ಪಡೆದು ಕೊಂಡಿದ್ದಾರೆ.

ವೀಕ್ಷಕರ ಅಭಿಪ್ರಾಯ :

1. ಈ ಧರ್ಮಸಂವಾದದಿಂದ ಹಿಂದೂ ಧರ್ಮದ ಶ್ರೇಷ್ಠ ಜ್ಞಾನ ತಿಳಿದು, ಹಿಂದೂ ಧರ್ಮದ ಮಹಾನತೆ ಅರಿವಾಯಿತು. – ತರುಣ ಗೌಡ, ಬೆಂಗಳೂರು

2. ನಾನು ನಿಮ್ಮ ಕಾರ್ಯಕ್ರಮಗಳನ್ನು ಪ್ರತಿದಿನ ವೀಕ್ಷಣೆ ಮಾಡುತ್ತೇನೆ. ಇದರಿಂದ ನನಗೆ ನನ್ನ ಧರ್ಮದ ಬಗ್ಗೆ ತಿಳಿದು ಅದರಂತೆ ಕೃತಿ ಮಾಡಿ, ನನಗೆ ತುಂಬಾ ಒಳ್ಳೆಯದಾಯಿತು. ನನ್ನ ಜೀವನದಲ್ಲಿ ತುಂಬಾ ಬದಲಾವಣೆ ಅಗಿದೆ. ಕೋಪ, ಸಿಟ್ಟು ಕಡಿಮೆ ಆಗಿ, ಜೀವನದಲ್ಲಿ ಶಾಂತಿ ಲಭಿಸಿದೆ. – ಸೌ. ಇಂದುಮತಿ, ತಮಿಳುನಾಡು

Comments are closed.