ಕರಾವಳಿ

“ರಾಜ್ಯಮಟ್ಟದ ಗೀತ ಗಾಯನ” ಸ್ಪರ್ಧೆಯಲ್ಲಿ ಮಂಗಳೂರು ಪಾಲಿಕೆಗೆ ಪ್ರಥಮ ಸ್ಥಾನ

Pinterest LinkedIn Tumblr

ಮಂಗಳೂರು : ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಮಹಾನಗರಪಾಲಿಕೆಗಳಿಗೆ ಇತ್ತೀಚೆಗೆ ಬೆಂಗಳೂರಿನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ಆಯೋಜಿಸಲಾಗಿದ್ದ “ರಾಜ್ಯಮಟ್ಟದ ಗೀತ ಗಾಯನ” ಸ್ಪರ್ಧೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಪ್ರಥಮ ಸ್ಥಾನ ಗಳಿಸಿದೆ.

ಈ ಸ್ಪರ್ಧೆಯಲ್ಲಿ ಎಸ್.ಕೆ.ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ (ರಿ) ಇದರ ನಿಕಟಪೂರ್ವ ಅಧ್ಯಕ್ಷ ಶಿವರಾಜ್ ಪಿ.ಬಿ.ನೇತೃತ್ವ ವಹಿಸಿದ್ದರು. ತಂಡದಲ್ಲಿ ಭಾರತಿ ಎಸ್., ಮೀರಾ, ನಮೃತಾ, ಜಗದೀಶ್, ಶರಣ್, ಭಾರತಿ, ದೊಡ್ಡ ನಂಜಯ್ಯ, ಸಂತೋಷ್, ಪದ್ಮಾ ಹಾಗು ಸಹನಾ ಭಾಗವಹಿಸಿದ್ದರು.

ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಮುರಳೀಧರ ಕಾಮತ್ ಸಂಗೀತ ನೀಡಿದ್ದರು.

Comments are closed.