ಕರಾವಳಿ

ಬೊಕ್ಕಪಟ್ಣದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣೆ

Pinterest LinkedIn Tumblr

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಕಾರ್ಡ್ ದೇಶದ ಪ್ರತಿಯೊಬ್ಬ ಬಡವನಿಗೂ ಸೇರಬೇಕು. ಆ ಮೂಲಕ ಆ ಯೋಜನೆಯನ್ನು ಸಫಲಗೊಳಿಸುವಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.

ಭಾರತೀಯ ಜನತಾ ಪಾರ್ಟಿ ಕುದ್ರೋಳಿ ವಾರ್ಡ್, ಫ್ರೆಂಡ್ಸ್ ಬೊಕ್ಕಪಟ್ಣ ಸರ್ಕಲ್ ಮಂಗಳೂರು ಇದರ ಆಶ್ರಯದಲ್ಲಿ ಕರ್ನಾಟಕ ಒನ್ ಇದರ ಸಹಭಾಗಿತ್ವದಲ್ಲಿ ನಡೆದ ಆಯುಷ್ಮಾನ್ ಭಾರತ್ ಕಾರ್ಡ್ ಉಚಿತ ನೋಂದಣಿ ಹಾಗೂ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಬಡವರು ಆಸ್ಪತ್ರೆಯ ಮೆಟ್ಟಿಲು ಹತ್ತಲು ಭಯಪಡುವಂತಾಹ ಪರಿಸ್ಥಿತಿಯನ್ನು ಮನಗಂಡು ಪ್ರತಿಯೊಬ್ಬ ಪ್ರಜೆಯೂ ಕೂಡ ಆರೋಗ್ಯ ಸಂಬಂಧಪಟ್ಟ ವಿಚಾರಗಳಿಗೆ ಪೂರಕವಾಗಿ ಜಾರಿಗೆ ತಂದ ಆಯುಷ್ಮಾನ್ ಭಾರತ್ ಕಾರ್ಡ್ ಸೂಕ್ತ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಶಾಸಕರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕಟ್ಟಕಡೆಯ ವ್ಯಕ್ತಿಯನ್ನೂ ಗಮನದಲ್ಲಿರಿಸಿ ಯೋಜಿಸಿದ ಆಯುಷ್ಮಾನ್ ಭಾರತ್, ಜನೌಷಧಿ ಕೇಂದ್ರ ಮುಂತಾದ ಆರೋಗ್ಯ ಸಂಬಂದಿಸಿದ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ದೊರೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚಿನ ಗಮನ ವಹಿಸಬೇಕು ಎಂದರು.

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ‌ ಅದ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ, ಬೂತ್ ಮಟ್ಟದಲ್ಲಿ ಜನರಿಗೆ ಕೇಂದ್ರ ಹಾಗೂ ರಾಜ್ಯದ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತನೂ ಮಾಡಬೇಕು. ಯೋಜನೆಯ ಲಾಭ ಹಾಗೂ ಅದನ್ನು ಪಡೆಯುವ ಬಗೆಯನ್ನು ಸಾರ್ವಜನಿಕರಿಗೆ ವಿವರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ ಅವರು ವಹಿಸಿದರು.

ಅತಿಥಿಗಳಾಗಿ ಮ.ನ.ಪಾ ಮೇಯರ್ ದಿವಾಕರ್ ಪಾಂಡೇಶ್ವರ್,ಮಂಗಳೂರು ಮಹಾನಗರ ಪಾಲಿಕೆ ಲೆಕ್ಕಪತ್ರ ಸ್ಥಾಯಿ ಸಮಿತಿ ಅದ್ಯಕ್ಷರಾದ ಜಗದೀಶ್ ಶೆಟ್ಟಿ ಬೋಳೂರು, ಕೆನರಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ರಮೇಶ್ ನಾಯ್ಕ, ಉದ್ಯಮಿಗಳಾದ ಸಂತೋಷ್ ಗಡಿಯಾರ , ಸಂಪತ್ ಶೆಟ್ಟಿ ,
ಯಶವರ್ಧನ್ ಬರ್ಕೆ , ಬಿಜೆಪಿ ಯುವ ಮೋರ್ಚಾ ಮಂಗಳೂರು ನಗರ ದಕ್ಷಿಣ ಕೋಶಾಧಿಕಾರಿಗಳಾದ ರಕ್ಷಿತ್ ಪೂಜಾರಿ ಮಂಗಳೂರು ನಗರ ದಕ್ಷಿಣ ಮಂಡಲದ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಭವಾನಿ ಶಂಕರ್ ನಾಯಕ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಹರ್ಷದ್.ಬೊಕ್ಕಪಟ್ಣ ಫ್ರೆಂಡ್ಸ್ ಸರ್ಕಲ್ ಇದರ ಗೌರವಾಧ್ಯಕ್ಷ ಪ್ರತಾಪ್ ಮಲ್ಯ ಮತ್ತು ಅಧ್ಯಕ್ಷರಾದ ಶರತ್ ಬಂಗೇರ,ಜ್ಞಾನೇಶ್ ಕೊಟ್ಟಾರಿ ಚೇತನ್ ಕುಲಾಲ್ ನಿಹಾಲ್ ಬಂಗೇರ ರಾಜೇಶ್ ಸುವರ್ಣ ಶ್ರವಣ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿವಾನಿ ಕಿಣಿ ನಿರೂಪಿಸಿದರು ಸಿದ್ದೇಶ್ ವಂದನಾರ್ಪಣೆಗೈದರು.

Comments are closed.