ಕರಾವಳಿ

ಉಡುಪಿ ಸಂತೆಕಟ್ಟೆಯ ‘ರೋಬೊ ಸಾಪ್ಟ್’ ಕಟ್ಟಡದಲ್ಲಿ ಬೆಂಕಿ ಅವಘಡ-ಲಕ್ಷಾಂತರ ಮೌಲ್ಯದ ಪರಿಕರ ನಷ್ಟ

Pinterest LinkedIn Tumblr

ಉಡುಪಿ: ಉಡುಪಿ ಸಮೀಪದ ಸಂತೆಕಟ್ಟೆಯಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ರೋಬೋ ಸಾಪ್ಟ್ ಹೆಸರಿನ ಸಾಫ್ಟ್‌ವೇರ್ ಕಂಪೆನಿಯ ಕಟ್ಟಡದಲ್ಲಿ ಡಿ.11ರ ಮಧ್ಯರಾತ್ರಿ ವೇಳೆ ಬೆಂಕಿ ಅವಘಡ ಸಂಭವಿಸಿದೆ.

ವಿದ್ಯುತ್ ಶಾರ್ಟ್‌ಸಕ್ಯೂಟ್‌ನಿಂದ ಈ ಬೆಂಕಿ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅವಘಡದಲ್ಲಿ ಕಂಪ್ಯೂಟರ್‌ಗಳು ಹಾಗೂ ಇಂಟಿರಿಯರ್, ಫರ್ನಿಚರ್ ಮತ್ತು ಸರ್ವರ್ ಕೊಠಡಿಗಳು ಸುಟ್ಟು ಹೋಗಿವೆ. ಮಾಹಿತಿ ತಿಳಿದು 12.45ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಉಡುಪಿಯ ಅಗ್ನಿ ಶಾಮಕದಳದ ಸಿಬ್ಬಂದಿಗಳು, ಮೂರು ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಸಿ ಬೆಂಕಿ ಹತೋಟಿಗೆ ತಂದರು.

ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ತಿಪ್ಪೆಸ್ವಾಮಿ ನೇತೃತ್ವ ದಲ್ಲಿ 15 ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದ್ದಾರೆ. ಇದರಿಂದ ಸುಮಾರು 50ಲಕ್ಷ ರೂ. ನಷ್ಟವಾಗಿದೆಯೆಂದು ಅಂದಾಜಿಸಲಾಗಿದೆ.

Comments are closed.