ಕರಾವಳಿ

ಉಗ್ರರ ಪರ ಗೋಡೆ ಬರಹ ಪ್ರಕರಣ: NIA ತನಿಖೆಗೆ ಶಿಫಾರಸು ಮಾಡಲು ವಿಎಚ್‌ಪಿ ಆಗ್ರಹ

Pinterest LinkedIn Tumblr

 

ಮಂಗಳೂರು ಡಿಸೆಂಬರ್ 11 : ಮಂಗಳೂರಿನ ಉಗ್ರರ ಪರ ಗೋಡೆಬರಹ ಪ್ರಕರಣಕ್ಕೆ ಸಂಭಂದಿಸಿದಂತೆ ತೀರ್ಥಹಳ್ಳಿಯ ಮಾಜ್ಸ್ ಮುನೀರ್ ಅಹಮದ್ ಮತ್ತು ಮಹಮದ್ ಶರೀಕ್ ಸಹಿತ ಮೂರುಜನ ಶಂಕಿತ ಉಗ್ರರನ್ನು ಬಂಧಿಸಿದ ಕೆಲಸ ಶ್ಲಾಘನೀಯ, ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ, ಜೊತೆಗೆ ಈ ಪ್ರಕರಣದ ತನಿಖೆಯನ್ನು NIAಗೆ ಶಿಫಾರಸು ಮಾಡಲು ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಆಗ್ರಹಿಸುತ್ತಿದ್ದೇವೆ ಎಂದು ವಿಶ್ವ ಹಿಂದು ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಿಂದ ಐಸಿಸ್ ಉಗ್ರಗಾಮಿ ಸಂಘಟನೆಗಳ ಕುಖ್ಯಾತ ಕೆಲವು ವ್ಯಕ್ತಿಗಳ ವಿಡಿಯೋ ಮತ್ತು ಜಾಗತಿಕ ಭಯೋತ್ಫಾದಕ ಜಮೈಕಾ ಮೂಲದ ಶೇಕ್ ಅಬ್ದುಲ್ಲಾ ಫೈಝಲ್ ಪ್ರಚೋದನ ಕಾರಿ ಭಾಷಣ ಮತ್ತು ಉಗ್ರರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಸಿಕ್ಕಿರುವುದು ಬಹಳ ಆತಂಕಕಾರಿ ವಿಷಯ.

ಇವರ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದ್ದು ಇನ್ನಷ್ಟು ವ್ಯಕ್ತಿಗಳು ಇದರ ಹಿಂದೆ ಕೆಲಸಮಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿದ್ದು,NIA ತನಿಖೆಗೆ ಒಳಪಡಿಸಿದರೆ ಇದರ ಹಿಂದಿರುವ ವ್ಯವಸ್ಥಿತ ಜಾಲವನ್ನು ಮತ್ತು ವ್ಯಕ್ತಿಗಳನ್ನು ಭೇದಿಸಲು ಸಾಧ್ಯವಾಗುತ್ತದೆ. ಆದುದರಿಂದ ಈ ಪ್ರಕರಣವನ್ನು NIA ತನಿಖೆಗೆ ನೀಡಲು ಮಂಗಳೂರು ಪೊಲೀಸ್ ಕಮಿಷನರ್ ಶಿಫಾರಸು ಮಾಡಬೇಕೆಂದು ಈ ಮೂಲಕ ಆಗ್ರಹ ಮಾಡುತ್ತಿದ್ದೇನೆ ಎಂದು ಶರಣ್ ಪಂಪವೆಲ್ ತಿಳಿಸಿದ್ದಾರೆ.

Comments are closed.