ಕರಾವಳಿ

ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ : ವಿಶಿಷ್ಟ ರೀತಿಯಲ್ಲಿ ಜನ್ಮ ದಿನ ಆಚರಿಸಿದ ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರು ತಮ್ಮ ಹಾಗೂ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಜನ್ಮದಿನವನ್ನು ಬಡ ಕುಟುಂಬವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.

ಮರೋಳಿಯ ಗೀತಾ ಎಂಬವರ ಮನೆಗೆ ವಿದ್ಯುತ್ ಸಂಪರ್ಕವಿಲ್ಲದೆ ಚಿಮಿಣಿ ಹಾಗೂ ಕ್ಯಾಂಡಲ್ ಮೂಲಕ ಬದುಕು ಸಾಗಿಸುತ್ತಿದ್ದರು. ಈ ವಿಚಾರವಾಗಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶಾಸಕರ ಗಮನಕ್ಕೆ ತಂದು ವಿದ್ಯುತ್ ಸಂಪರ್ಕ ಒದಗಿಸುವಂತೆ ಕೋರಿದ್ದರು.

ತಕ್ಷಣವೇ ಸ್ಪಂದಿಸಿದ ವೇದವ್ಯಾಸ್ ಕಾಮತ್ ಅವರು ಸಂಪರ್ಕ ಒದಗಿಸಲು ಇದ್ದ ತೊಡಕುಗಳನ್ನು ನಿವಾರಿಸಿ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ. ಕಳೆದ 40 ವರ್ಷಗಳಿಂದ ಚಿಮಿಣಿ ದೀಪದಲ್ಲಿ ಬದುಕು ಸಾಗಿಸುತ್ತಿದ್ದ ಕುಟುಂಬದ ಬದುಕಿನಲ್ಲಿ ಇಂದು ಬೆಳಕು ಕಂಡಾಂತಾಗಿದೆ.

ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು ಅವರು, ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಅವರ ಜನ್ಮ ದಿನಾಚರಣೆಯು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿರುವ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ್ ಎಂಬಂತೆ ಈ ಕುಟುಂಬದ ವಿಶ್ವಾಸವನ್ನು ಶಾಸಕ ವೇದವ್ಯಾಸ್ ಕಾಮತ್ ಪೂರ್ಣಗೊಳಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಸಹಕರಿಸಿದ ದಿನೇಶ್ ಗುರುಪುರ, ಬಿ.ಕರುಣಾಕರ ಪ್ರಭು, ಸಂದೀಪ್ ನಾಯಕ್, ಗಣೇಶ್ ಶೆಟ್ಟಿ,ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಶೆಟ್ಟಿ,ಸುಧೀರ್ ಶೆಟ್ಟಿ ಕಣ್ಣೂರು, ಪೂರ್ಣಿಮಾ,ಜಗದೀಶ್ ಶೆಟ್ಟಿ ಬೋಳೂರು, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಸುರೇಂದ್ರ ಜಪ್ಪಿನಮೊಗರು,ರಮೇಶ್ ಕಂಡೆಟ್ಟು,ಅಜಯ್ ಕುಲಶೇಖರ, ಭಾಸ್ಕರ್ ಚಂದ್ರ ಶೆಟ್ಟಿ, ಜಗದೀಶ್ ಶೆಣೈ, ಪ್ರಶಾಂತ್ ಮರೋಳಿ, ಕಿರಣ್ ಮರೋಳಿ, ಜಗನ್ನಾಥ ದೊಡ್ಡಮನೆ, ಪ್ರದೀಪ್,ಮಾಲತಿ ಶೆಟ್ಟಿ, ಪ್ರವೀಣ್, ಮಹೇಶ್ ತಾತಾವು, ರಾಘವೇಂದ್ರ ಶೆಣೈ, ವಸಂತ್ ಜೆ ಪೂಜಾರಿ, ಸಚಿನ್, ಗುರುವಪ್ಪ, ಮಾಲತಿ ತಾತಾವು, ಸರಳ, ಅರುಣ್ ಶೆಟ್ಟಿ, ಜಯರಾಮ್, ಲೀಲಾ, ಅನಿತಾ, ಕರುಣಾಕರ, ನರಸಿಂಹ, ದಿನೇಶ್, ಚಂದ್ರಹಾಸ್, ಅಶೋಕ ಮತ್ತಿತರರು ಉಪಸ್ಥಿತರಿದ್ದರು.

Comments are closed.