ಕರಾವಳಿ

ಕಾಂಗ್ರೆಸ್ ಮುಕ್ತ ಗ್ರಾಮ ಪಂಚಾಯಿತಿ ಬಿಜೆಪಿಯ ಗುರಿಯಾಗಿದೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್

Pinterest LinkedIn Tumblr

ಕುಂದಾಪುರ: ಓಟಿಗಾಗಿ ಕಾಂಗ್ರೆಸ್ ಪಕ್ಷವು ಗಾಂಧಿ ಆಶಯ ಬಳಸಿಕೊಂಡಿದ್ದು, ಬಿಟ್ಟರೆ ಕುಟುಂಬ ರಾಜಕಾರಣದ ಮೂಲಕ ಗ್ರಾಮಾಭಿವೃದ್ಧಿ ಮಣ್ಣುಪಾಲು ಮಾಡಿದೆ. ಆದರೆ ನರೇಂದ್ರ ಮೋದಿಯವರು ಗ್ರಾಮಗಳ ಅಭಿವೃದ್ಧಿ ಮೂಲಕ ರಾಷ್ಟ್ರೋತ್ಥಾನ ಗುರಿ ಹೊಂದಿದ್ದಾರೆ ಎಂದು ಕೈ ಪಕ್ಷದ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದರು.

ಕೋಟೇಶ್ವರ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ, ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಬೆಂಬಲಿತರೇ ಆಯ್ಕೆಯಾಗಿವ ಮೂಲಕ ಕಾಂಗ್ರೆಸ್ ಮುಕ್ತ ಗ್ರಾಮ ಪಂಚಾಯಿತಿ ನಮ್ಮ ಗುರಿ ಎಂದು ಹೇಳಿದರು.

ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್‌ಡಿ‌ಎ ಸರ್ಕಾರ ವಿಶ್ವವೇ ಭಾರತದ ದತ್ತ ತಿರುಗಿ ನೋಡುವಂತೆ ಮಾಡಿದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಬರ, ನೆರೆ ಜೊತೆ ಕರೋನಾ ಸಂಕಷ್ಟದಲ್ಲಿ ಜನರ ನೆರವಿಗೆ ಬರುವ ಮೂಲಕ ಸ್ಪಂಧಿಸಿದ್ದಾರೆ. ಇದರ ಪರಿಣಾಮ ಮತದಾರರಲ್ಲಿ ಬಿಜೆಪಿಗೆ ಮತ ಕೊಡಿ ಎಂದು ಕೇಳಿವ ನೈತಿಕತೆ ಸಿಕ್ಕದೆ ಎಂದು ಹೇಳಿದರು.

ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗೋಭಕ್ಷಕರಿಗೆ, ಕೊಲೆ, ಹಲ್ಲೆಗಳಿಗೆ ಪ್ರೇರಣೆ ನೀಡುವ ಮೂಲಕ ಪಕ್ಷಪಾತಿ ಧೋರಣೆ ಅನುಸರಿಸಿದರೆ, ಬಿಜೆಪಿ ಸರ್ಕಾರ ಎಲ್ಲರನ್ನೂ ಗಮನದಲ್ಲಿಟ್ಟು ಸರ್ವಜನ ಹಿತದ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಶಾಂತಿ ನೆಮ್ಮದಿ ನೆಲೆಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಎಗ್ಗಿಲ್ಲದೆ ನಡೆಯುತ್ತಿದ್ದ ಮಾಧಕ ಜಾಲ ಬೀರು ಸಹಿತ ಕಿತ್ತೊಸೆಯುವ ಕೆಲಸ ಬಿಜೆಪಿ ಸರ್ಕಾರ ಮಾಡಲಿದೆ ಎಂದರು.
ಉಡುಪಿ ಬಿಜೆಪಿ ಅಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಸಂಸದರಾದ ಶೋಭಾ ಕರಂದ್ಲಾಜೆ, ಎಸ್ ಮುನಿಸ್ವಾಮಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ್ ಶೆಟ್ಟಿ, ಕೆ.ರಘುಪತಿ ಭಟ್, ಉಮಾನಾಥ ಕೋಟ್ಯಾನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷ ವೀಣಾ ನಾಯಕ್, ರಾಜ್ಯ ಬಿಜೆಪಿ ಪ್ರಧಾನ ಕಾರ್‍ಯದರ್ಶಿ ಮಹೇಶ್ ತೆಂಗಿನಕಾಯಿ, ದಕ ಬಿಜೆಪಿ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಇದ್ದರು.

ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್‍ಯದರ್ಶಿ ಸದಾನಂದ ಉಪ್ಪಿನಕುದ್ರು ನಿರೂಪಿಸಿದರು. ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ವಂದಿಸಿದರು.

ಗ್ರಾಮ ಬಲಿಷ್ಠವಾದರೆ ದೇಶ ಬಲಿಷ್ಠವಾಗುತ್ತದೆ ಎನ್ನುವ ತತ್ವದಲ್ಲಿ ಸಮರ್ಥ ದೇಶಕಟ್ಟು ಸಲುವಾಗಿ ಗ್ರಾಮ ಪಂಚಾಯಿತಿ ಅಧಿಕಾರ ಬಿಜೆಪಿ ಬೆಂಬಲಿತರು ಪಡೆಯಬೇಕು ಎನ್ನುವ ಉದ್ದೇಶದಲ್ಲಿ ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಮನೆಮನೆಗೆ ಗಂಗೆ ವಿನೋತನ ಯೋಜನೆ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಜೊತೆ, ಉಜ್ವಲ್ ಗ್ಯಾಸ್ ಸಂಪರ್ಕ, ಸ್ವಚ್ಛಭಾರತ ಗ್ರಾಮ ನೈರ್ಮಲ್ಯಕ್ಕೆ ಒತ್ತು ಕೊಡಲಾಗುತ್ತಿದೆ. ಎಲ್ಲಾ ಸೇವೆಯನ್ನು ಗ್ರಾಮದಲ್ಲೇ ನೀಡುವ ಉದ್ದೇಶವಿದ್ದು, 15ನೇ ಹಣಕಾಸು ಯೋಜನೆಯಲ್ಲಿ ಗ್ರಾಮಗಳಿಗೆ ಕೇಂದ್ರ ಸರ್ಕಾರ  1ಕೋಟಿ ನೀಡಿಲಿದ್ದು, ಇದರಿಂದ ಗ್ರಾಮಗಳ ಅಭಿವರದ್ಧಿಗೆ ಬೇಗ ಸಿಗಲಿದೆ.
– ಅಶ್ವಥ್ ನಾರಾಯಣ್, ಉಪಮುಖ್ಯಮಂತ್ರ ಕರ್ನಾಟಕ ಸರ್ಕಾರ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದು, ಮತ ಕೇಳುವ ನೈತಿಕ ಸ್ಥೈರ್ಯ ಪಡೆದುಕೊಂಡಿದೆ. ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಗ್ರಾಮಗಳಿಗೆ ನೇರೆ ಅನುದಾನ ನೀಡುವ ಮೂಲಕ ಗ್ರಾಮೋಭಿವೃದ್ಧಿಗೆ ವೇಗ ನೀಡಿದೆ, ಕಾಂಗ್ರೆಸಿಗರಿಗೆ ಗಾಂಧಿ ಪೊಟೋ ಮಾತ್ರ ಬೇಕಿದ್ದು, ಅವರ ಸಿದ್ದಂತವಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ100ರಷ್ಟು ಸ್ಥಾನ ಬಿಜೆಪಿ ಪಾಲಾಗಲಿದೆ.
-ಶೋಭಾ ಕರಂದ್ಲಾಜೆ, ಸಂಸದೆ, ಉಡುಪಿ ಚಿಕ್ಕಮಗಳೂರು.

Comments are closed.