ಕರಾವಳಿ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಸೂರ್ಯೋಪಾಸನೆ’ಯ ಬಗ್ಗೆ ಸಂಶೋಧನೆ ಮಂಡನೆ

Pinterest LinkedIn Tumblr

‘ಪೂರ್ವಾಂಚಲ ಗೌರವ’ ಸಂಸ್ಥೆಯ ವತಿಯಿಂದ ‘ಆನ್‌ಲೈನ್ ಛಠ್ ಉತ್ಸವ’ ಕಾರ್ಯಕ್ರಮ

ಮುಂಬಯಿ – ‘ಛಠ್ ಉತ್ಸವ’ ಮೂಲದಲ್ಲಿ ‘ಸೂರ್ಯ ಷಷ್ಠಿ’ ವ್ರತವಾಗಿರುವುದರಿಂದ ಅದನ್ನು ‘ಛಠ್’ ಎಂದು ಹೇಳಲಾಗುತ್ತದೆ.

‘ಛಠ್ ಉತ್ಸವ’ ಅಂದರೆ ಸೂರ್ಯೋಪಾಸನೆ. ಸೂರ್ಯೋಪಾಸನೆಯಿಂದಾಗಿ ವ್ಯಕ್ತಿಯಲ್ಲಿರುವ ಸೂಕ್ಷ್ಮ ನಕಾರಾತ್ಮಕ ಶಕ್ತಿ ಕಡಿಮೆ ಅಥವಾ ನಾಶವಾಗಿ ಸಕಾರಾತ್ಮಕ ಶಕ್ತಿ ಉತ್ಪನ್ನವಾಗುತ್ತದೆ ಅಥವಾ ಹೆಚ್ಚಾಗುತ್ತದೆ, ಎಂಬುದು ‘ಯೂನಿವರ್ಸಲ್ ಔರಾ ಸ್ಕ್ಯಾನರ್’(ಯು.ಎ.ಎಸ್.) ಈ ವೈಜ್ಞಾನಿಕ ಉಪಕರಣ ಹಾಗೂ ಸೂಕ್ಷ್ಮ-ಪರೀಕ್ಷಣೆಯಿಂದ ಮಾಡಿದ ಸೂರ್ಯೋಪಾಸನೆಯ ವಿವಿಧ ಪ್ರಯೋಗಗಳಿಂದ ಸ್ಪಷ್ಟವಾಯಿತು.

5000 ವರ್ಷಗಳ ಹಿಂದೆ ಯಾವುದೇ ಬಾಹ್ಯ, ಸ್ಥೂಲ ಉಪಕರಣಗಳ ಸಹಾಯ ಪಡೆಯದೇ ನಮ್ಮ ಋಷಿ-ಮುನಿಗಳು ಇಷ್ಟು ಅದ್ವಿತೀಯ ಉಪಾಸನಾ ಪದ್ದತಿ ನಿರ್ಮಾಣ ಮಾಡಿದ್ದರು. ಅವರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಲು ಶಬ್ದಗಳೇ ಇಲ್ಲ’, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಆಧುನಿಕ ವೈದ್ಯೆ(ಸೌ.) ನಂದಿನಿ ಸಾಮಂತ ಇವರು ಹೇಳಿದರು.

ಅವರು ಛಠ್ ಉತ್ಸವದ ನಿಮಿತ್ತ ‘ಪೂರ್ವಾಂಚಲ ಗೌರವ’ ಸಂಸ್ಥೆಯು ನವೆಂಬರ್ 18 ರಿಂದ 20 ರ ಅವಧಿಯಲ್ಲಿ ಆಯೋಜಿಸಲಾಗಿದ್ದ ‘ಆನ್‌ಲೈನ್ ಛಠ್ ಮಹಾಪರ್ವ’ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸೂರ್ಯೋಪಾಸನೆಯ ಅಧ್ಯಾತ್ಮಶಾಸ್ತ್ರವನ್ನು ವೈಜ್ಞಾನಿಕ ಭಾಷೆಯಲ್ಲಿ ತಿಳಿಸಿ ಹೇಳಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಈ ಬಗ್ಗೆ ಮಾಡಿದ ಆಧ್ಯಾತ್ಮಿಕ ಸಂಶೋಧನೆಯನ್ನು ವಿವರಿಸುವ ವಿಡಿಯೋವನ್ನು ನವೆಂಬರ್ 20ರ ಕಾರ್ಯಕ್ರಮದಲ್ಲಿ ತೋರಿಸಲಾಯಿತು. ಈ ವಿಡಿಯೋದಲ್ಲಿ ಸೂರ್ಯೋಪಾಸನೆಯ ಅಂತರ್ಗತ ಮುಂದಿನ ಕೃತಿಗಳನ್ನು ಮಾಡುವಾಗ ಆ ವ್ಯಕ್ತಿಯ ಮೇಲಾಗುವಂತಹ ಸೂಕ್ಷ್ಮ-ಶಕ್ತಿಯ ಪರಿಣಾಮವನ್ನು ‘ಯು.ಎ.ಎಸ್.’ ಉಪಕರಣದ ಮೂಲಕ ಮಾಡಿದ ಅಧ್ಯಯನವನ್ನು ಮಂಡಿಸಲಾಯಿತು.

ಸೂರ್ಯೋಪಾಸನೆಯ ಅಂತರ್ಗತ ಮಾಡಲಾದ ಕೃತಿಗಳು

1. ಸೂರ್ಯನಿಗೆ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಅರ್ಘ್ಯ ನೀಡುವುದು
2. 108 ಬಾರಿ ಗಾಯತ್ರಿ ಮಂತ್ರದ ಜಪ ಮಾಡುವುದು
3. ಸೂರ್ಯನ ಹನ್ನೆರಡು ಹೆಸರುಗಳನ್ನು ಉಚ್ಚರಿಸದೇ ಸೂರ್ಯನಮಸ್ಕಾರ ಮಾಡುವುದು ಹಾಗೂ ಸೂರ್ಯನ ಹನ್ನೆರಡು ಹೆಸರುಗಳನ್ನು ಉಚ್ಚರಿಸುತ್ತಾ ಸೂರ್ಯನಮಸ್ಕಾರ ಮಾಡುವುದು

ಯಾವುದೇ ಉಪಾಸನೆಯ ಮೂಲ ಪರಿಣಾಮವು ಸೂಕ್ಷ್ಮಸ್ತರದಲ್ಲಿ ಆಗುತ್ತಿರುತ್ತದೆ. ಈ ಪರಿಣಾಮವು ಕೇವಲ ಸೂಕ್ಷ್ಮ-ಪರೀಕ್ಷಣೆಯಿಂದಲೇ ತಿಳಿಯುತ್ತದೆ. ಇದಕ್ಕಾಗಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸೂಕ್ಷ್ಮ ಘಟನಾವಳಿಗಳ ಕುರಿತು ಜ್ಞಾನವನ್ನು ಪಡೆಯುವ ಮತ್ತು ಅವುಗಳನ್ನು ಚಿತ್ರದ ರೂಪದಲ್ಲಿ (ಅಂದರೆ ಸೂಕ್ಷ್ಮ-ಚಿತ್ರದ ರೂಪದಲ್ಲಿ) ಮಂಡಿಸುವ ಸಂಶೋಧನೆಯ ಸಮನ್ವಯಕರಾದ ಕು. ಪ್ರಿಯಾಂಕಾ ಲೋಟಲೀಕರ ಇವರು ಸೂರ್ಯಪೂಜೆಯ ಸಮಯದಲ್ಲಿ ಘಟಿಸುವ ಸೂಕ್ಷ್ಮದ ಪ್ರಕ್ರಿಯೆಯನ್ನು ತೋರಿಸಲು ಬಿಡಿಸಿದ ಸೂಕ್ಷ್ಮ-ಚಿತ್ರವನ್ನು ಪ್ರಸ್ತುತ ಪಡಿಸಲಾಯಿತು.

ವರದಿ ಕೃಪೆ :ಶ್ರೀ. ರೂಪೇಶ ರೇಡಕರ, ಸಂಶೋಧನ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

Comments are closed.