ಮಂಗಳೂರು, ನವೆಂಬರ್.22 : ಸ್ಯಾಂಡ್ ಬಜಾರ್ ಆಪ್‌ನ ಮೂಲಕ ನೋಂದಣಿ ಮಾಡಿದರೆ 10 ಮೆಟ್ರಿಕ್ ಟನ್‌ಗೆ 5ಸಾವಿರ ರೂ. ಹಾಗೂ 20ಕಿಲೋ ಮೀಟರ್‌ವರೆಗೆ ಮರಳು ಸಾಗಾಟಕ್ಕೆ 2ಸಾವಿರ ಬಾಡಿಗೆ ಸೇರಿ 7ಸಾವಿರ ರೂ.ಗೆ ಮರಳು ಸಾಗಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಸಿಆರ್‌ಝೆಡ್ ವ್ಯಾಪ್ತಿಯಲ್ಲಿ 88 ಮಂದಿಗೆ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವುದಕ್ಕೆ ಅನುಮತಿ ನೀಡಲಾಗಿದೆ. ಧಕ್ಕೆಗಳನ್ನು ಗುರುತಿಸಿ ಅದಕ್ಕೆ ಜಿಪಿಎಸ್ ಹಾಕಬೇಕು. ಎಲ್ಲ ಧಕ್ಕೆಗಳಲ್ಲೂ ಉನ್ನತ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಕ್ರಮಕ್ಕೆ ಬ್ರೇಕ್ :
ಮರಳನ್ನು ಅಕ್ರಮವಾಗಿ ರಾತ್ರಿ ಸಾಗಾಟ ಮಾಡಲಾಗುತ್ತಿದ್ದು, ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಹಿನ್ನಲೆಯಲ್ಲಿ ಬುಧವಾರದೊಳಗೆ ಪೊಲೀಸ್ ಇಲಾಖೆ, ಗಣಿ ಇಲಾಖೆ, ಕಂದಾಯ ಇಲಾಖೆ ಸಮನ್ವಯ ಸಭೆಯನ್ನು ನಡೆಸಿ, ಅಕ್ರಮದಲ್ಲಿ ತೊಡಗಿಸಿಕೊಂಡ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಮರಳುಗಾರಿಕೆ, ಸಾಗಾಟ ಮೇಲೆ ನಿಗಾಯಿಡಲು ಪೊಲೀಸರು, ಗಣಿ ಇಲಾಖೆಯ ಜಂಟಿ ಚೆಕ್‌ಪೋಸ್ಟ್‌ಗಳನ್ನು ರಚನೆ ಮಾಡಲಾಗುವುದು. ಅಕ್ರಮ ಮರಳುಗಾರಿಕೆ ನಡೆಯುವ ಬಗ್ಗೆ ಮಾಹಿತಿ ನೀಡಿದರೆ ಅಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ ನಿಗಾಯಿಡಲಾಗುವುದು ಎಂದರು.
ನಾನಾ ಸಿಆರ್‌ಝೆಡ್ ಮರಳುಗಾರಿಕೆ ಸಂಬಂಧಪಟ್ಟಂತೆ 6 ಶ್ರೇಣಿಯ ನದಿ, ನದಿ ತೊರೆ ಮೂಲಗಳು ಗುರುತಿಸಲಾಗಿದೆ. ಅದರಲ್ಲಿ ಚಿಕ್ಕ, ತೊರೆ, ಹಳ್ಳಕ್ಕೆ ಗ್ರಾಮ ಪಂಚಾಯಿತಿ ಅವಕಾಶ, ನದಿ, ಉಪನದಿಗೆ 30ಬ್ಲಾಕ್ ಕೆಎಸ್‌ಸಿಎಲ್‌ಗೆ ಟೆಂಡರ್. 18ಕ್ಕೂ ಅಧಿಕ ಕಡೆ ಟೆಂಡರ್ ಆಗಿ ಮರಳು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.