ಕರಾವಳಿ

ಮಂಗಳೂರು-ಕಾಸರಗೋಡು ಮಧ್ಯೆ ಬಸ್ ಸಂಚಾರ ಮತ್ತೆ ಆರಂಭ

Pinterest LinkedIn Tumblr

ಮಂಗಳೂರು, ನವೆಂಬರ್,17: ಮಂಗಳೂರು-ಕಾಸರಗೋಡು ಮಧ್ಯೆ ಸರಕಾರಿ ಬಸ್ ಸಂಚಾರ ಸೋಮವಾರದಿಂದ ಮತ್ತೆ ಅರಂಭಗೊಂಡಿದ್ದು, ಸುಮಾರು 20 ಬಸ್‌ಗಳು ಮಂಗಳೂರಿನಿಂದ ಕಾಸರಗೋಡಿಗೆ ಮತ್ತು 20 ಬಸ್‌ಗಳು ಕಾಸರಗೋಡಿನಿಂದ ಮಂಗಳೂರಿಗೆ ಆಗಮಿಸಿವೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ಅಧಿಕಾರಿ ತಿಳಿಸಿದ್ದಾರೆ.

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿದ ಲಾಕ್‍ಡೌನ್ ಸಂದರ್ಭ ಕಳೆದ ಏಳೆಂಟು ತಿಂಗಳಿನಿಂದ ಮಂಗಳೂರು-ಕಾಸರಗೋಡು ಮಧ್ಯೆ ಸರಕಾರಿ ಬಸ್ ಸಂಚಾರ ಹಾಗೂ ಇತರ ವಾಹನ ಸಂಚಾರ ನಿಲುಗಡೆಯಾಗಿತ್ತು.

ಇತರ ವಾಹನ ಸಂಚಾರ ಈಗಾಗಲೇ ಆರಂಭಗೊಂಡಿದ್ದು, ಸರಕಾರಿ ಬಸ್ ಸಂಚಾರ ಮಾತ್ರ ಸೋಮವಾರದಿಂದ ಅರಂಭಗೊಂಡಿದೆ. ಲಾಕ್‌ಡೌನ್ ತೆರವಿನ ಬಳಿಕ ಹಂತ ಹಂತವಾಗಿ ಬಸ್ ಸಂಚಾರಕ್ಕೆ ಅನುಮತಿ ನೀಡಿದ ವೇಳೆ ಮಂಗಳೂರಿನಿಂದ ಹೊರಟ ಸರಕಾರಿ ಬಸ್‌ಗಳು ತಲಪಾಡಿವರೆಗೆ ಚಲಿಸುತ್ತಿತ್ತು.

ಕೋವಿಡ್ 19 ನಿಯಮಗಳ ಪಾಲನೆಯೊಂದಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಎರಡೂ ರಾಜ್ಯಗಳ 40 ಸರಕಾರಿ ಬಸ್‌ಗಳು ಪ್ರಯಾಣಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್‌ಗಳನ್ನು ಸಂಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಕೆಎಸ್ಸಾರ್ಟಿಸಿ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Comments are closed.