ಕರ್ನಾಟಕ

ಡಿ.ಜೆ.ಹಳ್ಳಿ – ಕೆಜಿ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್‌ಗೆ ಆಶ್ರಯ ನೀಡಿದ್ದ ಆರೋಪಿ ಸೆರೆ

Pinterest LinkedIn Tumblr

ಬಂಧಿತ ಆರೋಪಿ ರಿಯಾಜುದ್ದೀನ್                      ಮಾಜಿ ಮೇಯರ್ ಸಂಪತ್ ರಾಜ್

ಬೆಂಗಳೂರು, ನವೆಂಬರ್.16: ಡಿ.ಜೆ.ಹಳ್ಳಿ – ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್‌ಗೆ ಆಶ್ರಯ ನೀಡಿದ್ದ ಆರೋಪಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಡಿಜೆ‌-ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಝಾಕಿರ್ ಗೆ ಆಶ್ರಯ ನೀಡಿದ್ದ ಆರೋಪದಡಿ ರಿಯಾಜುದ್ದೀನ್ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಂಧಿತನನ್ನು ಬಿಬಿಎಂಪಿ ಕಾಂಟ್ರಾಕ್ಟರ್ ರಿಯಾಜುದ್ದೀನ್ ಎಂದು ಗುರುತಿಸಲಾಗಿದೆ. ಸಂಪತ್ ರಾಜ್ ಬೆಂಗಳೂರಿನಿಂದ ಎಸ್ಕೇಪ್ ಆಗಲು ಸಹಾಯ ಮಾಡಿದ್ದ ರಿಯಾಜುದ್ದೀನ್, ತಮ್ಮದೇ ವಾಹನದಲ್ಲಿ ಸಂಪತ್ ರಾಜ್ ಅವರನ್ನು ನಾಗರಹೊಳೆಯ ಫಾರ್ಮ್ ಹೌಸ್ ಗೆ ಕರೆದುಕೊಂಡು ಹೋಗಿ ಬಿಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದು, ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಸಂಪತ್ ರಾಜ್ ಹಾಗೂ ಝಾಕಿರ್ ಪಾತ್ರವಿರುವುದು ಅತ್ಯಂತ ಸ್ಪಷ್ಟವಾಗಿದೆ. ಆರೋಪಿಗಳ ಬಂಧನಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ.

ವಿಶೇಷ ತಂಡ ರಚಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ. ಇನ್ನು ಆರೋಪಿಗಳು ತಲೆಮರೆಸಿಕೊಳ್ಳಲು ನೆರವು ಹಾಗೂ ಆಶ್ರಯ ನೀಡಲು ಸಹಕರಿಸಿದ್ದ ರಿಯಾಜುದ್ದೀನ್ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಈತ ನೀಡಿದ ಸುಳಿವು ಆಧರಿಸಿ ತಪ್ಪಿತಸ್ಥರನ್ನು ಶೀಘ್ರದಲ್ಲೇ ದಸ್ತಗಿರಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಸದ್ಯ ತಲೆಮರೆಸಿಕೊಂಡಿರುವ ಸಂಪತ್ ರಾಜ್ ಹಾಗೂ ಜಾಕೀರ್ ಇಬ್ಬರೂ ಪರಾರಿಯಾಗಲು ರಿಯಾಜುದ್ದೀನ್ ಸಹಾಯ ಮಾಡಿದ್ದ. ತನ್ನ ಕಾರಿನಲ್ಲಿ ಆರೋಪಿಗಳನ್ನು ನಾಗರಹೊಳೆ ಬಳಿ ಇರುವ ಫಾರ್ಮ್ ಹೌಸ್‍ಗೆ ಕರೆದೊಯ್ದಿದ್ದು, ಅಲ್ಲಿಯೇ ಆರೋಪಿಗಳು ಕೆಲ ದಿನ ಉಳಿದುಕೊಂಡಿದ್ದರು.

ನಂತರ, ಅಲ್ಲಿಂದ ಬೇರೆಡೆ ಆರೋಪಿಗಳು ಹೊರಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.ರಿಯಾಝಾದ್ದೀನ್ ನೀಡಿದ ಸುಳಿವು ಆಧರಿಸಿ ಸಂಪತ್ ರಾಜ್ ಹಾಗೂ ಝಾಕಿರ್ ನನ್ನು ಶೀಘ್ರದಲ್ಲೇ ದಸ್ತಗಿರಿ ಮಾಡಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.