ಕರಾವಳಿ

ಮಂಗಳೂರಿನಲ್ಲಿ ಭಾರಿ ಮಳೆ : ಅಕಾಲಿಕ ಮಳೆಯಿಂದ ಜನಜೀವನ ಅಸ್ತವ್ಯಸ್ಥ- ದೀಪಾವಳಿ ಸಿದ್ಧತೆಗೂ ಅಡ್ಡಿ

Pinterest LinkedIn Tumblr

ಮಂಗಳೂರು, ನವೆಂಬರ್ 14: ಮಂಗಳೂರಿನಲ್ಲಿ ಶುಕ್ರವಾರ ಸಂಜೆ ಅಕಾಲಿಕ ಮಳೆ ಸುರಿದಿದೆ, ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಸುರಿದ ಭಾರೀ ಮಳೆತಿಂದಾಗಿ ದೀಪಾವಳಿ ಹಬ್ಬದ ಸಿದ್ದತೆಗೆ ತೊಡಕುಂಟಾಗಿದೆ. ಜೊತೆಗೆ ಏಕಾಏಕಿ ಸುರಿದ ಮಳೆಯಿಂದ ಹಬ್ಬದ ಶಾಪಿಂಗ್‌ ಮಾಡುತ್ತಿದ್ದವರಿಗೂ ತೊಂದರೆ ಆಯಿತು.

ಶುಕ್ರವಾರ ಸಂಜೆ ಒಮ್ಮೆಲೇ ಸುರಿದ ಬಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿತು. ದೀಪಾವಳಿ ಹಬ್ಬದ ಸಿದ್ದತೆಯಲ್ಲಿ ತೊಡಗಿದ್ದವರಿಗೆ ಅಕಾಲಿಕ ಮಳೆಯಿಂದ ತೊಂದರೆಯಾಯಿತು. ದೀಪಾವಳಿ ಹಬ್ಬಕ್ಕೆ ಖರೀದಿಯಲ್ಲಿ ತೊಡಗಿದ್ದ ಜನರಿಗೂ ಖರೀದಿಗೆ ಅಡ್ಡಿಯಾಯಿತು. ಪಟಾಕಿ, ಗೂಡುದೀಪ, ಹೂಹಣ್ಣು, ಹಣತೆ ಮಾರಾಟ ಮಾಡುವ ವ್ಯಾಪಾರಸ್ಥರಿಗೂ ಮಳೆಯಿಂದಾಗಿ ವ್ಯಾಪಾರಕ್ಕೆ ತೊಂದರೆ ಉಂಟಾಯಿತು.

ಮಳೆಗಾಲ ಋತು ಮುಗಿದು, ಚಳಿಗಾಲ ಆರಂಭವಾಗಿದೆ. ಆದರೂ ಕರಾವಳಿಯಲ್ಲಿ ಬೇಸಿಗೆಯ ವಾತಾವರಣ ವಿತ್ತು. ಶುಕ್ರವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದಾಗಿ ಭೂಮಿಯಲ್ಲಿ ತಂಪು ಆವರಿಸಿತು. ನಗರ ಸೇರಿದಂತೆ ಬಂಟ್ವಾಳ ತಾಲೂಕಿನಾದ್ಯಂತ ಹಾಗೂ ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು, ಮಿಂಚು ಸಹಿತಾ ಒಂದು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ.

Comments are closed.