ಕರಾವಳಿ

ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಗೆ ಅನುಮತಿ ನೀಡಿದ ಸಿಎಂ! :ಏನಿದು ”ಹಸಿರು ಪಟಾಕಿ”?

Pinterest LinkedIn Tumblr

ಬೆಂಗಳೂರು/ ಮಂಗಳೂರು, ನವೆಂಬರ್.07 : ಮಹಾಮಾರಿ ಕೊರೊನಾ ವೈರಸ್ ಹೆಚ್ಚುತ್ತಿರುವ ಕಾರಣದಿಂದ ರಾಜ್ಯದಲ್ಲಿ ಈ ಬಾರಿ ದೀಪಾವಳಿಗೆ ಪಟಾಕಿ ಮಾರಾಟ ಮತ್ತು ಬಳಕೆಗೆ ನಿಷೇಧ ಹೇರಿದ್ದ ಮುಖ್ಯಮಂತ್ರಿ ಬಿ.ಎಎಸ್ ಯಡಿಯೂರಪ್ಪ ಅವರು ಇದೀಗ ಪಟಾಕಿ ಬಳಕೆ ಮತ್ತು ಮಾರಾಟಕ್ಕೆ ಮತ್ತೆ ಅನುಮತಿ ನೀಡಿದ್ದಾರೆ.

ದೀಪಾವಳಿಯ ಸಂದರ್ಭದಲ್ಲಿ ”ಹಸಿರು ಪಟಾಕಿ”ಗಳನ್ನು ಮಾರಾಟ ಮಾಡಲು ಮತ್ತು ಬಳಸಲು ಸಾರ್ವಜನಿಕರಿಗೆ ಅನುಮತಿ ನೀಡಲಾಗುವುದು ಎಂದು ಮಾಧ್ಯಮಗಳಿಗೆ ಪ್ರಕಟಣೆ ಹೊರಡಿಸಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು, ದೀಪಾವಳಿ ಹಬ್ಬದ ವೇಳೆ ಪಟಾಕಿ ಮಾರುವಂತಿಲ್ಲ ಹಾಗೂ ಪಟಾಕಿ ಸಿಡಿಸುವಂತಿಲ್ಲ ಎಂದು ತೀರ್ಮಾನಿಸಿರುವುದಾಗಿ ತಿಳಿಸಿದ್ದರು.
ದೀಪಾವಳಿಗೆ ಯಾವುದೇ ರೀತಿಯ ಪಟಾಕಿಗೆ ಅವಕಾಶ ಇರೋದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದಿಂದ ಪಟಾಕಿ ನಿಷೇಧಕ್ಕೆ ನಿರ್ಧಾರ ಮಾಡಲಾಗಿದೆ. ಅಲ್ಲದೆ ಪಟಾಕಿ ನಿಷೇಧಿಸಿ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವುದಾಗಿ ಬಿಎಸ್ ವೈ ನಿನ್ನೆ ತಿಳಿಸಿದ್ದರು.

ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ದೀಪಾವಳಿಯ ಸಮಯದಲ್ಲಿ ನಾವು ಪಟಾಕಿಗಳನ್ನು ನಿಷೇಧಿಸಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ .ಆರೋಗ್ಯ ತಜ್ಞರೊಂದಿಗೆ ಸರ್ಕಾರ ಈ ಬಗ್ಗೆ ಚರ್ಚಿಸಿದೆ. ಈ ಬಾರಿ ಪಟಾಕಿ ಬಳಕೆ ಒಳ್ಳೆಯದಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದಿದ್ದರು.

ಆದರೆ ತಮ್ಮ ಹೇಳಿಕೆ ನೀಡಿದ ಬೆನ್ನಲ್ಲೇ ನಿನ್ನೆ ರಾತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯೂಟರ್ನ್ ಹೊಡೆದಿದ್ದು, ರಾಜ್ಯದಲ್ಲಿ ಪಟಾಕಿ ಬಳಕೆ ಮತ್ತು ಮಾರಾಟಕ್ಕೆ ಅನುಮತಿ ನೀಡಿದ್ದಾರೆ.

ದೀಪಾವಳಿಯ ಸಂದರ್ಭದಲ್ಲಿ ”ಹಸಿರು ಪಟಾಕಿ”ಗಳನ್ನು ಮಾರಾಟ ಮಾಡಲು ಮತ್ತು ಬಳಸಲು ಜನರಿಗೆ ಅವಕಾಶವಿದ್ದು, ಜನರು ಬಯಸಿದರೆ “ಹಸಿರು ಪಟಾಕಿ”ಗಳನ್ನು ಬಳಸಬಹುದು” ಎಂದು ತಿಳಿಸಿದ್ದಾರೆ. ಹಾಗೆಯೇ ಜನರು ದೀಪಾವಳಿಯನ್ನು ಸರಳವಾಗಿ ಆಚರಣೆ ಮಾಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ

ಏನಿದು ”ಹಸಿರು ಪಟಾಕಿ” : ಗೊಂದಲಕ್ಕೆ ತೆರೆ

ಇಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೊರಡಿಸಲಾದ ಆದೇಶದಲ್ಲಿ ಸಾರ್ವಜನಿಕರಿಗೆ ಗೊಂದಲ ಉಂಟಾಗಿದೆ. ಇಲ್ಲಿ “ಹಸಿರು ಪಟಾಕಿ” ಯಾವೂದು ಎಂಬ ಪ್ರಶ್ನೆ ಮೂಡಿದೆ.

ಮಂಗಳೂರಿನ ಪ್ರಸಿದ್ಧ ಪಟಾಕಿ ಉದ್ಯಮಿಯೊಬ್ಬರ ಹೇಳಿಕೆ ಪ್ರಕಾರ ಶಿವಕಾಶಿಯಲ್ಲಿ ತಯಾರಾಗುವ ಎಲ್ಲಾ ಪಟಾಕಿಗಳು “ಹಸಿರು ಪಟಾಕಿ” ವರ್ಗಕ್ಕೆ ಸೇರುತ್ತದೆ. ಅದೇ ಚೀನಾದಿಂದ ಅಮದಾಗುವ ಪಟಾಕಿಗಳು ಈ “ಹಸಿರು ಪಟಾಕಿ” ವರ್ಗಕ್ಕೆ ಸೇರುವುದಿಲ್ಲ.

ಮೊದಲು ಶಿವಕಾಶಿಯಲ್ಲಿ ಎಲ್ಲಾ ವರ್ಗದ ಪಟಾಕಿಗಳು ತಯಾರಾಗುತ್ತಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಶಿವಕಾಶಿಯಲ್ಲಿ ಬರೀ ಹಸಿರು ಪಟಾಕಿ ತಯಾರಿಗೆ ಮಾತ್ರ ಸರ್ಕಾರ ಅವಕಾಶ ನೀಡಿದ್ದು, ಈಗ ಅಲ್ಲಿ ತಯಾರಾಗುವ ಎಲ್ಲಾ ಪಟಾಕಿಗಳು “ಹಸಿರು ಪಟಾಕಿ” ವರ್ಗಕ್ಕೆ ಸೇರುತ್ತದೆ.

ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಹೆಚ್ಚಿನ ಪಟಾಕಿ ಉದ್ಯಮಿಗಳು ಶಿವಕಾಶಿಯಿಂದಲೇ ಪಟಾಕಿ ತರಿಸುತ್ತಿರುವುದರಿಂದ ಈ ಎಲ್ಲಾ ಪಟಾಕಿಗಳನ್ನು “ಹಸಿರು ಪಟಾಕಿ” ವರ್ಗಕ್ಕೆ ಸೇರಿದ್ದಾಗಿದ್ದು, ಸಾರ್ವಜನಿಕರು ಇದನ್ನು ಬಳಸ ಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments are closed.