
ಪಡುಬಿದ್ರಿ: ಸಮಾಜದ ಅನರ್ಘ್ಯ ರತ್ನ ಜಯ ಸಿ.ಸುವರ್ಣರ ಆದಶ್ ನಮಗೆ ದಾರಿದೀಪ. ಅವರು ಬಿಟ್ಟುಹೋದ ಘನ ಕಾರ್ಯಗಗಳನ್ನು ಮುಂದುವರಿಸುವ ಮೂಲಕ ಸಂಘಟಿತರಾಗಿ ಅಭಿವೃದ್ಧಿ ಕಡೆಗೆ ಗಮನ ಹರಿಸೋಣ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಹೆಜಮಾಡಿಯ ಬಿಲ್ಲವ ಸಮಾಜ ಸೇವಾ ಸಂಘದ ಜಯ ಸಿ.ಸುವರ್ಣ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಜಯ ಸಿ.ಸುವರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.
ಸಮಾನತೆ, ಸತ್ಯ, ನ್ಯಾಯ, ಧರ್ಮಗಳ ಪರಿಪಾಲಕರಾದ ಜಯ ಸುವರ್ಣರ ಅಗಲಿಕೆ ತುಂಬಲಾರದ ನಷ್ಟ. ಅವರ ಹೆಸರಲ್ಲಿ ಬಹು ದೊಡ್ಡ ಕೆಲಸವಾಗಬೇಕಿದೆ ಎಂದು ಮೂಡುಬಿದಿರೆ ಆಳ್ವಾಸ್ ಸಮೂಹ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಎಮ್.ಮೋಹನ ಆಳ್ವ ಹೇಳಿದರು.

ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಅಸಂಘಟಿತರನ್ನು ಒಗ್ಗೂಡಿಸಿ ಅವರ ಅಭಿವೃದ್ಧಿಗೆ ಶ್ರಮಿಸಿದವರು ಜಯ ಸುವರ್ಣರು. ಅವರು ಬದುಕಿದ್ದು ಸಮಾಜಕ್ಕೋಸ್ಕರ. ಅವರ ಕನಸುಗಳನ್ನು ನನಸು ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದರು.
ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಅವರ ಘನ ಕಾರ್ಯಗಳು ಜನರ ಮನಸ್ಸಲ್ಲಿ ಶಾಶ್ವತವಾಗಿ ನೆಲೆಸುತ್ತದೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ನುಡಿನಮನ ಸಲ್ಲಿಸಿ ಸಾಮಾಜಿಕ ಪರಿವರ್ತನೆಯ ಪರಿಪಾಲಕರಾದ ಜಯ ಸುವರ್ಣರ ಅದರ್ಶಗಳು ನಮಗೆ ದಾರಿದೀಪ ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಮುಂಬೈಯಲ್ಲಿ ಎತ್ತರದ ಸ್ಥಾನಕ್ಕೇರಿದ ಅವರು ಊರಿನ ಬಡ ಜನರ ಏಳಿಗೆಗಾಗಿ ಅವಿರತ ಶ್ರಮಿಸಿದ್ದರು ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಮಾತನಾಡಿ, ಅವರ ಸಮಾಜ ಸೇವೆಯನ್ನು ಒಗ್ಗಟ್ಟಾಗಿ ಮುಂದುವರಿಸೋಣ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಕಠಿಣ ಶ್ರಮಜೀವಿಯಾಗಿದ್ದ ಅವರು ಸಹಸ್ರಾರು ಮಂದಿಗೆ ಉದ್ಯೋಗದಾತರಾಗಿದ್ದರು. ಅವರ ತತ್ವಾದರ್ಶಗಳು ನಮಗೆ ದಾರಿದೀಪ ಎಂದರು.
ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಯು.ಟಿ.ಖದರ್, ಪ್ರಮೋದ್ ಮಧ್ವರಾಜ್ ಮತ್ತು ಕೃಷ್ಣ ಜೆ.ಪಾಲೆಮಾರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಮತ್ತು ಕೆ.ಹರೀಶ್ ಕುಮಾರ್, ಮಾಜಿ ಶಾಸಕರುಗಳಾದ ಪ್ರಮೋದ್ ಮಧ್ವರಾಜ್.ಬಿ.ಎ.ಮೊಯಿದೀನ್ ಬಾವ, ಸಾಯಿರಾಧಾ ಗ್ರೂಪ್ಸ್ನ ಮನೋಹರ ಶೆಟ್ಟಿ, ಕುದ್ರೊಳಿ ಕ್ಷೇತ್ರದ ಪದ್ಮರಾಜ್, ಬಿಲ್ಲವರ ಅಸೋಸಿಯೇಷನ್ ನ ಅಧ್ಯಕ್ಷ ಚಂದ್ರಶೇಖರ ಪೂಜಾರಿ . ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ .ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್, ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ ವಾಸುದೇವ ಕೋಟ್ಯಾನ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮುಂಬೈ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಡಾ.ಎಮ್.ಅಚ್ಯುತ ಕುಡ್ವ ನುಡಿನಮನ ಸಲ್ಲಿಸಿದರು.
ಜಯ ಸಿ.ಸುವರ್ಣರ ಪತ್ನಿ ಲೀಲಾವತಿ ಜಯ ಸುವರ್ಣ, ಮಕ್ಕಳಾದ ಸೂರ್ಯ ಜೆ.ಸುವರ್ಣ, ಸುಭಾಸ್ ಜೆ.ಸುವರ್ಣ, ದಿನೇಶ್ ಜೆ.ಸುವರ್ಣ ಮತ್ತು ಯೋಗೀಶ್ ಜೆ.ಸುವರ್ಣ, ಬಂಧುಗಳಾದ ಭಾಸ್ಕರ್ ಎಂ ಸಾಲಿಯಾನ್. ಬೆಂಗಳೂರು ಬಿಲ್ಲವರ ಸಂಘದ ವೇದಕುಮಾರ್, ಕಟಪಾಡಿ ಹರಿಶ್ಚಂದ್ರ ಅಮೀನ್, ಜಗದೀಶ್ ಅಧಿಕಾರಿ, ಮಹಾಮಂಡಲದ ಮಾಜಿ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಬನ್ನಂಜೆ ಬಾಬು ಅಮೀನ್, ಎಸ್.ಕೆ.ಸಾಲ್ಯಾನ್, , ರವಿ ಶೆಟ್ಟಿ ಸಾಯಿರಾಧಾ, ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷ ಶಿವಾಜಿ ಪೂಜಾರಿ ಉಪ್ಪೂರು .ನಿರ್ದೇಶಕ ಗಳಾದಗಂಗಾಧರ್ ಜೆ ಪೂಜಾರಿ. ರಾಜ ವಿ ಸಾಲ್ಯಾನ್. ಶಾರದಾ ಕರ್ಕೇರ. ಜ್ಯೋತಿ ಕೆ ಸುವರ್ಣ . ಮೋಹನ್ ಪೂಜಾರಿಗೆ ಬಿವಂಡಿ .ಡಾ. ಎಂ ಜೆ ಪ್ರವೀಣ್ ಭಟ್ ಮುಂಬೈ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಎನ್ ಟಿ ಪೂಜಾರಿ .ವಿದ್ಯಾದಾಯಿನಿ ಸಭಾದ ಅಧ್ಯಕ್ಷ ಪುರುಷೋತ್ತಮ ಕೋಟ್ಯಾನ. ಬಿಲ್ಲವರ ಅಸೋಸಿಯೇಶನ್ ನ ಉಪಾಧ್ಯಕ್ಷರುಗಳಾದ ದಯಾನಂದ ಪೂಜಾರಿ ಕಲ್ಯ ಹರೀಶ್ ಜಿ ಅಮೀನ್ ಕಾರ್ಯದರ್ಶಿ ರವೀಂದ್ರ .ಅಸೋಸಿಯೇಷನ್ ನ ಯುವ ವಿಭಾಗದ ಕಾರ್ಯಧ್ಯಕ್ಷ ನಾಗೇಶ್ ಎಂ ಕೋಟ್ಯಾನ್. ಮಾಜಿ ಕಾರ್ಯಧ್ಯಕ್ಷ ನಿಲೇಶ್ ಪೂಜಾರಿ ಪಲಿಮಾರು. ಬಿರುವೆರ್ ಕುಡ್ಲ ಅಧ್ಯಕ್ಷ ಉದಯ ಪೂಜಾರಿ .ಶಾಂತಿ ದೇವಿ ಪಾತ್ರಿ ಸನ್ನಿಧಿ ಪೂಜಾರಿ. ಜಿಪಂ ಸದಸ್ಯರಾದ ಗೀತಾಂಜಲಿ ಸುವರ್ಣ ಮತ್ತು ಶಶಿಕಾಂತ್ ಪಡುಬಿದ್ರಿ, ಬಿಲ್ಲವರ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ ಮಲಾಡ್ ಸಂತೋಷ್ ಕೆ ಪೂಜಾರಿ . ಪತ್ರಕರ್ತಗಳದ ನವೀನ್ ಕೆ ಇನ್ನ .ದಿನೇಶ್ ಕುಲಾಲ್ ಹೇಮರಾಜ್ ಕರ್ಕೇರ .ಮತ್ತಿತರರು ಉಪಸ್ಥಿತರಿದ್ದರು.
ಅಕ್ಷಯ ಪತ್ರಿಕೆಯ ಸಂಪಾದಕ ಹರೀಶ್ ಹೆಜಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವಿಸಿದರು. ಜಯ ಸುವರ್ಣರ ಅಳಿಯ ಭಾಸ್ಕರ ಎಮ್.ಸಾಲ್ಯಾನ್ ವಂದಿಸಿದರು. ಒಂದು ನಿಮಿಷ ಮೌನ ಪ್ರಾರ್ಥನೆ ಬಳಿಕ ಜಯ ಸುವರ್ಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
Comments are closed.