ಅಂತರಾಷ್ಟ್ರೀಯ

ಯಾರಾಗುತ್ತಾರೆ ವಿಶ್ವದ ದೊಡ್ಡಣ್ಣ?. ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಪ್ರಕಟ

Pinterest LinkedIn Tumblr

ವಾಷಿಂಗ್ಟನ್, ನವೆಂಬರ್ 04: ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು ಕೆಲವೇ ಕ್ಷಣಗಳಲ್ಲಿ ಪೂರ್ಣ ಪ್ರಮಾಣದ ಫಲಿತಾಂಶ ಹೊರಬೀಳಲಿದೆ.

ಇನ್ನು ಕೆಲವೇ ಕ್ಷಣಗಳಲ್ಲಿ ಈ ಬಾರಿ ವಿಶ್ವದ ದೊಡ್ಡಣ್ಣ ಯಾರಾಗುತ್ತಾರೆ ಎಂಬ ಮಾಹಿತಿ ಬಹಿರಂಗವಾಗಲಿದೆ.

ಚುನಾವಣೆಯಲ್ಲಿ ಬಹುಮತ ಪಡೆಯಲು 270 ಸ್ಥಾನಗಳ ಅಗತ್ಯವಿಗೆ. ಈಗಾಗಲೇ 223 ಸ್ಥಾನಗಳು ಜೋ ಬೈಡೆನ್‌ ತೆಕ್ಕೆಗೆ ಬಂದಿವೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 145 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ.

ಅಮೆರಿಕ ಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕವೆನಿಸಿರುವ ಎಲೆಕ್ಟೊರಲ್ ಮತದಾನ ತೀವ್ರ ಕುತೂಹಲ ಕೆರಳಿಸಿದೆ. ಅಧ್ಯಕ್ಷರಾಗಲು 270 ಜನಪ್ರತಿನಿಧಿಗಳ ಬೆಂಬಲ ಬೇಕಿದೆ. ಜನಪ್ರತಿನಿಧಿಗಳನ್ನು ಎಲೆಕ್ಟೋರಲ್ ಎಂದು ಕರೆಯಲಾಗುತ್ತದೆ.

ಅಮೆರಿಕ ಅಧ್ಯಕ್ಷರಾಗಲು ಎಲೆಕ್ಟೊರಲ್ ಕಾಲೇಜ್‌ನ 538 ಮತಗಳಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯು 270 ಮತಗಳನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ಇದರಲ್ಲಿ ಇಬ್ಬರೂ ನಾಯಕರ ನಡುವೆ ನಿಕಟ ಪೈಪೋಟಿ ನಡೆಯುತ್ತಿದ್ದು, ಗೆಲುವು ಯಾರಿಗೆ ಒಲಿಯುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು ವಾಷಿಂಗ್ಟನ್‌, ನ್ಯೂಯಾರ್ಕ್, ಮೆಸ್ಸಾಚುಸೆಟ್ಸ್, ನ್ಯೂಜೆರ್ಸಿ, ಮೇರಿಲ್ಯಾಂಡ್, ವರ್ಮೊಂಟ್, ಕನೆಕ್ಟಿಕಟ್, ಡೆಲವೇರ್, ಕೊಲೊರಾಡೋ, ನ್ಯೂ ಮೆಕ್ಸಿಕೊ ಮತ್ತು ನ್ಯೂ ಹ್ಯಾಂಪ್ಶೈರ್‌ ರಾಜ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪ್ರಮುಖ ರಾಜ್ಯಗಳನ್ನು ತಮ್ಮ ತೆಕ್ಕೆಗೆ ಗೆಲುವಿಗೆ ಸಮೀಪದಲ್ಲಿದ್ದಾರೆ.

ಫ್ಲೋರಿಡಾ, ಲೋವಾ, ಓಹಿಯೊ, ಟೆಕ್ಸಾಸ್‌ನಲ್ಲಿ ಜಯಗಳಿಸಿರುವ ಡೊನಾಲ್ಡ್ ಟ್ರಂಪ್, ಎಲೆಕ್ಟೊರಲ್ ಮತಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ.

Comments are closed.