ಕರಾವಳಿ

ದಸರಾ ಮಹೋತ್ಸವ ವಿಶೇಷ ಆಕರ್ಷಣೆ : ಹುಲಿವೇಷಧಾರಿಯ ಹೊಟ್ಟೆಯಲ್ಲಿ ಮೂಡಿ ಬಂದ ಪೂಜಾರಿ

Pinterest LinkedIn Tumblr

ಮಂಗಳೂರು, ಆಕ್ಟೋಬರ್.26: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ವೈಭವದ “ಮಂಗಳೂರು ದಸರಾ ಮಹೋತ್ಸವ”ದ ಸಮಾರೋಪ ಹಾಗೂ “ದಸರಾ ಮಹೋತ್ಸವ” ಪ್ರಯುಕ್ತ ಶ್ರೀ ಕ್ಷೇತ್ರದ ದರ್ಬಾರು ಮಂಟಪದಲ್ಲಿ ಪೂಜಿಸಲ್ಪಟ್ಟ ಶ್ರೀ ಗಣಪತಿ, ನವದುರ್ಗೆ, ಆದಿಶಕ್ತಿ ಹಾಗೂ ಶ್ರೀ ಶಾರದೆ ಮಾತೆಯ ವಿಸರ್ಜನಾ ಪೂಜೆಯ ಸಂದರ್ಭದಲ್ಲಿ ಹುಲಿವೇಷವೊಂದು ಸಾರ್ವಜನಿಕರ ಗಮನ ಸೇಳೆಯಿತು.

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ “ಮಂಗಳೂರು ದಸರಾ’ ಮೆರವಣಿಗೆ ಇರುವುದಿಲ್ಲ. ಆದರೆ ಈ ಬಾರಿ ನವದುರ್ಗೆಯರ ಸಹಿತ ಶಾರದಾ ಮಾತೆಯ ಶೋಭಾಯಾತ್ರೆ ಶ್ರೀ ಕ್ಷೇತ್ರದ ಪ್ರಾಂಗಾಣದಲ್ಲಿ ನಡೆಯಲ್ಲಿದ್ದು, ಬಳಿಕ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಯನ್ನು ವಿಸರ್ಜಿಸಲಾಗುವುದು.

ಇದೇ ವೇಳೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ವೈಭವದ “ಮಂಗಳೂರು ದಸರಾ ಮಹೋತ್ಸವ” ಇಂದು ಸಂಜೆ ಸಂಪನ್ನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಪ್ರಾಂಗಣದಲ್ಲಿ ಹುಲಿವೇಷಗಳ ಹರಕೆ ಕುಣಿತಕ್ಕೆ ವ್ಯವಸ್ಥೆಗೊಳಿಸಲಾಗಿತ್ತು.

ಈ ಹರಕೆ ಕುಣಿತದಲ್ಲಿ ಸುಮಾರು 14 ಹುಲಿವೇಷ ತಂಡಗಳು ಶ್ರೀ ದೇವರ ಸನ್ನಿದಿಯಲ್ಲಿ ತಮ್ಮ ತಂಡಗಳ ಪ್ರದರ್ಶನ ನೀಡಿದರು. ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಒಂದೊಂದು ತಂಡಕ್ಕೆ ಕುಣಿತಕ್ಕೆ ಹತ್ತು ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.

ಈ ಸಂದರ್ಭದಲ್ಲಿ ಮಂಗಳೂರಿನ ಶಿವ ಫ್ರೆಂಡ್ಸ್ (ರಿ.) ಇವರ ಹುಲಿವೇಷಧಾರಿಯ ಹೊಟ್ಟೆಯ ಭಾಗದಲ್ಲಿ ಬಿಡಿಸಲಾದ ಚಿತ್ರವೊಂದು ಎಲ್ಲರ ಗಮನ ಪಾತ್ರವಾಯಿತು.

ಶಿವ ಫ್ರೆಂಡ್ಸ್ (ರಿ.) ಇವರ ಹುಲಿವೇಷದಲ್ಲಿ ಚಿತ್ರಕಲಾವಿದ ಮಂಜೇಶ್ವರ ನಿವಾಸಿ ತಾರಾನಾಥ ಆಚಾರ್ಯ ಕಡಂಬಾರು ಅವರ ಕುಂಚದಲ್ಲಿ ಕಲಾತ್ಮಕವಾಗಿ ಮೂಡಿ ಬಂದ ಶ್ರೀ ಕ್ಷೇತ್ರ ಕುದ್ರೋಳಿಯ ನವೀಕರಣದ ರೂವಾರಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರ ಚಿತ್ರ ಮೆಚ್ಚುಗೆಗೆ ಪಾತ್ರವಾಯಿತು.

Comments are closed.