ಕರಾವಳಿ

ಲೈಟ್ ಫಿಶಿಂಗ್ ಆಕ್ಷೇಪಿಸಿದ್ದಕ್ಕೆ ಮಲ್ಪೆ ಮೀನುಗಾರರ ಮೇಲೆ ತಮಿಳುನಾಡು ಮೀನುಗಾರರ ಗೂಂಡಾಗಿರಿ..!

Pinterest LinkedIn Tumblr

ಉಡುಪಿ: ತಮಿಳುನಾಡು ಮೀನುಗಾರರು ಕರ್ನಾಟಕ ಮೀನುಗಾರರ ಮೇಲೆ ಗೂಂಡಾಗಿರಿ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ. ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಮೀನುಗಾರರ ಬೋಟ್ ಅನ್ನು ತಮಿಳುನಾಡು ಮೀನುಗಾರರು ಹಾನಿಗೊಳಿಸಿದ್ದು ಮಲ್ಪೆ ಬಂದರಿಗೆ ಅವರ ಬೋಟ್ ಸಹಿತ ಕರೆತರಲಾಯಿತು.

ತಮಿಳುನಾಡು ಮೀನುಗಾರರು ಕಾನೂನುಬಾಹಿರವಾಗಿ ಲೈಟ್ ಅಳವಡಿಸಿ ಮೀನುಗಾರಿಕೆ ನಡೆಸುತ್ತಿದ್ದರು ಎನ್ನಲಾಗಿದ್ದು ಇದಕ್ಕೆ ಮಲ್ಪೆಯ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ತಮಿಳು ಮೀನುಗಾರರು ಮಲ್ಪೆಯಿಂದ ತೆರಳಿದ್ದ ಬೋಟಿಗೆ ಹಾನಿ ಮಾಡಿದ್ದಾರೆ.

ಆಳ ಸಮುದ್ರಕ್ಕೆ ತೆರಳಿದ್ದ ಎಲ್ಲಾ ಮೀನುಗಾರಿಕಾ ಬೋಟುಗಳು ಮಲ್ಪೆ ಬಂದರಿಗೆ ವಾಪಸ್ ಬಂದು ಮಲ್ಪೆ ಮೀನುಗಾರರು ಪ್ರತಿಭಟನೆ ನಡೆಸಿದರು. ಬೋಟಿಗೆ ಹಾನಿ ಮಾಡಿದ ತಮಿಳು ಮೀನುಗಾರರನ್ನು ಬೋಟ್ ಸಹಿತ ಕರೆತಂದು ಮುತ್ತಿಗೆ ಹಾಕಿದ್ದಾರೆ.

ತಮಿಳುನಾಡು ಬೋಟ್ ಗಳಿಗೆ ಮಲ್ಪೆ ಸ್ಥಳೀಯ ಮೀನುಗಾರರು ತರಾಟೆ ತೆಗೆದುಕೊಂಡಿದ್ದು ನೂರಾರು‌ ಸ್ಥಳೀಯ ಮೀನುಗಾರರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟಿಸಿದರು. ಕರಾವಳಿ‌ ಕಾವಲು ಪಡೆ ಪೊಲೀಸ್ ಅಧೀಕ್ಷಕ ಪ್ರವೀಣ್ ನಾಯಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದರು.

 

Comments are closed.