ಕರಾವಳಿ

ಕೋವಿಡ್ 19 ನಿಯಮಾನುಸಾರ ದಸರಾ ಆಚರಣೆ: ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಉಡುಪಿ: ಕೋವಿಡ್ 19 ಹಿನ್ನೆಲೆಯಲ್ಲಿ ಮೈಸೂರು ದಸರಾ ಸೇರಿದಂತೆ ಎಲ್ಲೆಡೆ ಸರಳ ರೀತಿಯಲ್ಲಿ ದಸರಾ ಆಚರಣೆ ನಡೆಯುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪೂಜಾ ಪುನಸ್ಕಾರಗಳಿಗಷ್ಟೇ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಮಾಧ್ಯಮದ ಜೊತೆ ಅವರು ಮಾತನಾಡಿದರು‌.

ಸಾಂಪ್ರದಾಯ ಬದ್ಧವಾಗಿ ನವರಾತ್ರಿ ನಡೆಯುವ ಧಾರ್ಮಿಕ ಕ್ಷೇತ್ರದ ಎದುರು ಹುಲಿವೇಷ ಸ್ಪರ್ಧೆಯ ಬದಲು ಪ್ರದರ್ಶನಕ್ಕೆ ಒಂದು ಅವಕಾಶ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಯವರಿಗೆ ಮನವಿ ಬಂದಿರುವ ಹಿನ್ನೆಲೆ ಸೀಮಿತ ಸಂಖ್ಯೆಯ ಹುಲಿಗಳನ್ನು ಒಂದು ಅವಧಿಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುವುದು. ಕೆಲವೆಡೆ ಅವಕಾಶ ಕೊಡಲಾಗಿದೆ. ಯಾವ ವೇಷ ಧರಿಸಬೇಕೆಂಬ ನಿಯಮವಿಲ್ಲ. ಆದರೆ ಸಾಮಾಜಿಕ ಅಂತರದ ಜೊತೆಗೆ ಕೋವಿಡ್ 19 ವ್ಯಾಪ್ತಿಯೊಳಗೆ ನಿಯಮ ಪಾಲನೆಯನ್ನು ಮಾಡಬೇಕು ಎಂದರು.

ಎರಡು ಸಾವಿರಕ್ಕೂ ಹೆಚ್ಚಿನ ಕಲಾವಿದರು ಯಕ್ಷಗಾನ ಮೇಳಗಳಿದ್ದು, ಹೊಸ ಮೇಳಗಳ ರಚನೆಯ ಪ್ರಸ್ತಾಪವಿದೆ. ಕಟ್ಟಕಡೆಯ ಕಲಾವಿದನೂ ನಿರುದ್ಯೋಗಿಯಾಗಬಾರದು.ಯಾವ ಕಲಾವಿದನೂ ಕಲಾಪ್ರದರ್ಶನದಿಂದ ಕಲಾವಿದನಾಗಿ ದುಡಿಯುವುದರಿಂದ ವಂಚಿತನಾಗಬಾರದು ಎಂಬುದು ಸರ್ಕಾರದ ಇಚ್ಛೆ. ಹಾಗಾಗಿ ಅಂತಹ ವಾತಾವರಣ ನಿರ್ಮಾಣ ಮಾಡಲಾಗುವುದು.ಯಕ್ಷಗಾನ ಕಲಾವಿದರಿಗೆ ಕೋವಿಡ್ 19 ಪರೀಕ್ಷೆ ಮಾಡಿಸಬೇಕು. ಸೀಮಿತ ಪ್ರೇಕ್ಷಕರನ್ನು ಇಟ್ಟುಕೊಂಡು ಪ್ರದರ್ಶನಕ್ಕೆ ಕಲ್ಪಿಸುವುದು. ಜೊತೆಗೆ ಇಡೀ ರಾತ್ರಿ ನಡೆವ ಮೇಳಗಳಿಗೆ ಸರ್ಕಾರದಿಂದ ನೆರವು ನೀಡುವ ಬಗ್ಗೆಯೂ ಚರ್ಚೆಗಳಾಗಬೇಕಿದೆ ಎಂದರು.

Comments are closed.