ಕರಾವಳಿ

‘ಅರೇಬಿಯ ಸುಗಂಧ ದ್ರವ್ಯಗಳಿಂದಲೂ ಬಾಲಿವುಡ್‌ನ ಕೊಳಕು ನಿವಾರಣೆ ಅಸಾಧ್ಯ : ಸುದ್ಧಿವಾಹಿನಿಗಳ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಬಾಲಿವುಡ್

Pinterest LinkedIn Tumblr

ಮುಂಬೈ: ಬಾಲಿವುಡ್​ನಲ್ಲಿನ ಡ್ರಗ್ಸ್​ ಮಾಫಿಯಾ ಕುರಿತಂತೆ ವರದಿ ಮಾಡಿರುವ ಕೆಲ ಸುದ್ದಿವಾಹಿನಿ ಗಳು ಬಾಲಿವುಡ್ ನ ಕೊಳಕನ್ನು ‘ಅರೇಬಿಯ ಸುಗಂಧ ದ್ರವ್ಯಗಳನ್ನು ಬಳಸಿದರೂ ತೀವ್ರ ದುರ್ವಾಸನೆಯನ್ನ ಹೊರತೆಗೆಯಲು ಸಾಧ್ಯವಿಲ್ಲ’ ಎಂಬಂತಹ ಅವಹೇಳನಕಾರಿ ಪದಗಳನ್ನ ಬಳಸುತ್ತಿವೆ. ಡ್ರಗ್ಸ್​ ಪ್ರಕರಣ ಹಿನ್ನೆಲೆಯಲ್ಲಿ ಇಡೀ ಬಾಲಿವುಡ್ಡನ್ನೇ ಅವಹೇಳನಕಾರಿ ಆಗಿ ತೋರಿಸಲಾಗುತ್ತಿದೆ ಎಂದು ಆರೋಪಿಸಿ ಬಾಲಿವುಡ್ ನ ಘಟನಿಘಟ ನಿರ್ಮಾಪರು ಹಾಗೂ ನಾಯಕ ನಟರು, ನಟಿಯರು ಸುದ್ದಿವಾಹಿನಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಹಿಂದಿ ಚಿತ್ರೋದ್ಯಮವನ್ನ ಅವಮಾನಿಸುವುದಕ್ಕಾಗಿ ಕೆಲ ಸುದ್ದಿ ವಾಹಿನಿ ಮತ್ತು ನಾಲ್ವರು ಪತ್ರಕರ್ತರ ವಿರುದ್ಧ 38 ಚಲನಚಿತ್ರ ಸಂಸ್ಥೆಗಳು ಮತ್ತು ನಿರ್ಮಾಣ ಸಂಸ್ಥೆಗಳು ದಾವೆ ಹೂಡಿವೆ. ಕಳೆದೆರೆಡು ತಿಂಗಳುಗಳಿಂದ ಸುದ್ದಿ ವಾಹಿನಿಗಳಲ್ಲಿ ಬಾಲಿವುಡ್ ಚಿತ್ರರಂಗ ನಿರಂತರವಾಗಿ ಅಪಹಾಸ್ಯಕ್ಕೆ ಗುರಿಯಾಗುತ್ತಲೇ ಬಂದಿದೆ.

ಬಾಲಿವುಡ್​ನಲ್ಲಿನ ಡ್ರಗ್ಸ್​ ಮಾಫಿಯಾ ಕುರಿತಂತೆ ಬಿತ್ತರವಾಗಿರುವ ಸುದ್ದಿಯ ಹಿನ್ನೆಲೆಯಲ್ಲಿ ಸಿಡಿದೆದ್ದಿರುವ ಬಾಲಿವುಡ್ ಎರಡು ಸುದ್ದಿವಾಹಿನಿ ಹಾಗೂ ಅದರ ನಾಲ್ವರು ನಿರೂಪಕರ ವಿರುದ್ಧ ದೆಹಲಿ ಹೈಕೋರ್ಟ್​​ಗೆ ದೂರು ಸಲ್ಲಿಸಿವೆ.

ದೆಹಲಿ ಹೈಕೋರ್ಟ್ ನಲ್ಲಿ ದಾಖಲಾಗಿರುವ ದಾವೆಯಲ್ಲಿ ರಿಪಬ್ಲಿಕ್ ಟಿವಿ, ಅರ್ನಬ್ ಗೋಸ್ವಾಮಿ, ಪ್ರದೀಪ್ ಭಂಡಾರಿ, ಟೈಮ್ಸ್ ನೌ, ರಾಹುಲ್ ಶಿವಶಂಕರ್, ನವಿಕಾ ಕುಮಾರ್ ಹೆಸರು ಸೇರಿಸಲಾಗಿದೆ. ಶಾರುಖ್ ಖಾನ್, ಅಜಯ್ ದೇವಗನ್, ಸಲ್ಮಾನ್ ಖಾನ್, ಅಮೀರ್ ಖಾನ್, ಕರಣ್ ಜೋಹರ್, ಅಕ್ಷಯ್ ಕುಮಾರ್, ಆದಿತ್ಯ ಚೋಪ್ರಾ, ಫರ್ಹಾನ್ ಅಖ್ತರ್, ಜೋಯಾ ಅಖ್ತರ್ ಸೇರಿದಂತೆ ಎಲ್ಲಾ ಪ್ರಮುಖ ಬ್ಯಾನರ್ ಗಳು ಸೂಟ್ ನಲ್ಲಿ ವೆರೈಟಿಯಾಗಿ ಕಾಣಿಸಿಕೊಂಡಿವೆ. ದಿ ಫಿಲ್ಮ್ & ಟೆಲಿವಿಷನ್ ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ (ಪಿಜಿಐ) ಮತ್ತು ಸಿನಿ ಮತ್ತು ಟಿವಿ ಕಲಾವಿದರ ಸಂಘ (ಸಿಎನ್ ಟಿಎಎ) ಕೂಡ ಈ ದಾವೆಯಲ್ಲಿ ಸೇರಿಕೊಂಡಿವೆ.

ಮಾದಕ ವಸ್ತು​ ಪ್ರಕರಣ ಹಿನ್ನೆಲೆಯಲ್ಲಿ ಇಡೀ ಬಾಲಿವುಡ್‌ನ್ನೇ ಅವಹೇಳನಕಾರಿ ಆಗಿ ತೋರಿಸಲಾಗುತ್ತಿದೆ. ಹೀಗಾಗಿ ಸಂಬಂಧಿತ ಚಾನೆಲ್​ಗಳು/ನಿರೂಪಕರು ಬಾಲಿವುಡ್​ ಗಣ್ಯರ ಬಗ್ಗೆ ಸುದ್ದಿ ಪ್ರಕಟಿಸದಂತೆ ಹಾಗೂ ಅವಹೇಳನಕಾರಿಯಾಗಿ ಇದುವರೆಗೆ ಪ್ರಸಾರ ಮಾಡಿರುವ ಎಲ್ಲ ಕಾರ್ಯಕ್ರಮಗಳನ್ನು ಹಿಂಪಡೆಯುವಂತೆ ದೂರಿನಲ್ಲಿ ಕೋರಲಾಗಿದೆ.

ದೂರು ನೀಡಿದವರ ಸಂಪೂರ್ಣ ಪಟ್ಟಿ :

1.ಭಾರತೀಯ ಚಲನಚಿತ್ರ ಮತ್ತು ಟಿವಿ ನಿರ್ಮಾಪಕರ ಮಂಡಳಿ (IFTPC)

2, ದಿ ಸಿನೆ ಅಂಡ್ ಟಿವಿ ಆರ್ಟಿಸ್ಟ್ ಅಸೋಸಿಯೇಷನ್ (CINTAA)

3. ದಿ ಫಿಲ್ಮ್ &ಟೆಲಿವಿಷನ್ ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ (PGI) 2.

4. ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್ (SWA)

5.ಅಮೀರ್ ಖಾನ್ ಪ್ರೊಡಕ್ಷನ್ಸ್

6. ಆಡ್ ಲ್ಯಾಬ್ಸ್ ಫಿಲ್ಮ್ಸ್

7. ಅಜಯ್ ದೇವಗನ್ ಫ್ಲಿಮ್

8. ಆಂಡೋಲನ ಚಲನಚಿತ್ರಗಳು

9. ಅನಿಲ್ ಕಪೂರ್ ಫಿಲ್ಮ್ ಅಂಡ್ ಕಮ್ಯೂನಿಕೇಶನ್ ನೆಟ್ ವರ್ಕ್

10.ಅರ್ಬಾಜ್ ಖಾನ್ ಪ್ರೊಡಕ್ಷನ್ಸ್ .

11. ಅಶುತೋಷ್ ಗೋವರಿಕರ್ ಪ್ರೊಡಕ್ಷನ್ಸ್

12. BSK ನೆಟ್ ವರ್ಕ್ ಮತ್ತು ಮನರಂಜನೆ

13. ಉತ್ತಮ ಚಲನಚಿತ್ರಗಳ ಕೇಪ್

14. ಕ್ಲೀನ್ ಸ್ಲೇಟ್ ಫಿಲ್ಮ್ಸ್

15. ಧರ್ಮ ಪ್ರೊಡಕ್ಷನ್ಸ್

16. ಎಮ್ಮಯ್ ಮನರಂಜನೆ ಮತ್ತು ಚಲನಚಿತ್ರಗಳು

17. ಎಕ್ಸೆಲ್ ಮನರಂಜನೆ

18. ಫಿಲ್ಮ್ ಕ್ರಾಫ್ಟ್ ಪ್ರೊಡಕ್ಷನ್ಸ್

19. ಹೋಪ್ ಪ್ರೊಡಕ್ಷನ್

20. ಕಬೀರ್ ಖಾನ್ ಫಿಲ್ಮ್ಸ್

21. ಲುವ್ ಫಿಲ್ಮ್ಸ್

22. ಮ್ಯಾಕ್ಗಫಿನ್ ಚಿತ್ರಗಳು

23. ನಾಡಿಯಾದ್ವಾಲಾ ಮೊಮ್ಮಗ ಮನರಂಜನೆ

24. ಒನ್ ಇಂಡಿಯಾ ಕಥೆಗಳು

25. ಆರ್.ಎಸ್. ಮನರಂಜನೆ (ರಮೇಶ್ ಸಿಪ್ಪಿ ಎಂಟರ್ ಟೈನ್ ಮೆಂಟ್)

26. ರಾಕೇಶ್ ಓಂಪ್ರಕಾಶ್ ಮೆಹ್ರಾ ಚಿತ್ರಗಳು

27. ಕೆಂಪು ಮೆಣಸಿನಕಾಯಿ ಮನರಂಜನೆ

28. ರೀಲ್ ಲೈಫ್ ಪ್ರೊಡಕ್ಷನ್ಸ್

29. ರಿಲಯನ್ಸ್ ಬಿಗ್ ಎಂಟರ್ ಟೈನ್ ಮೆಂಟ್

30. ರೋಹಿತ್ ಶೆಟ್ಟಿ Picturez

31. ರಾಯ್ ಕಪುರ್ ಫಿಲ್ಮ್ಸ್

32. ಸಲ್ಮಾನ್ ಖಾನ್ ಫಿಲ್ಮ್ಸ್

33. ಸಿಖ್ಯಾ ಮನರಂಜನೆ

34. ಸೊಹೈಲ್ ಖಾನ್ ಪ್ರೊಡಕ್ಷನ್ಸ್

35. ಟೈಗರ್ ಬೇಬಿ ಡಿಜಿಟಲ್

36. ವಿನೋದ್ ಚೋಪ್ರಾ ಫಿಲ್ಮ್ಸ್

37. ವಿಶಾಲ್ ಭಾರದ್ವಾಜ್ ಚಿತ್ರಗಳು

38. ಯಶ್ರಾಜ್ ಫಿಲ್ಮ್ಸ್

Comments are closed.