ಕರಾವಳಿ

ಮಕ್ಕಳಲ್ಲಿ ಸಂಸ್ಕಾರ ಬೆಳೆಸುವಲ್ಲಿ ‘ಕೃಷ್ಣ ವೇಷ ಸ್ಪರ್ಧೆ’ ಪೂರಕ : ವಿಜೇತರಿಗೆ ಬಹುಮಾನ ವಿತರಿಸಿ ಎಸ್.ಪಿ.ಕಲ್ಕೂರ

Pinterest LinkedIn Tumblr

ಮಂಗಳೂರು : ಎಳವೆಯಲ್ಲೇ ಮಕ್ಕಳಿಗೆ ಪುರಾಣ ಪಾತ್ರಗಳ ಕಲ್ಪನೆಯೊಂದಿಗೆ ಉತ್ತಮ ಸಂಸ್ಕಾರವನ್ನು ಹೊಂದುವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ಸಾಹದಲ್ಲಿ ಪಾಲ್ಗೊಳ್ಳುವ ಮನಸ್ಸನ್ನು ಪ್ರೇರೇಪಿಸುವುದಕ್ಕೆ ಕಲ್ಕೂರ ಪ್ರತಿಷ್ಠಾನ ಹಮ್ಮಿಕೊಂಡ ‘ಕೃಷ್ಣ ವೇಷ ಸ್ಪರ್ಧೆ’ ಪೂರಕವಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು.

ಕಲ್ಕೂರ ಪ್ರತಿಷ್ಠಾನದಿಂದ ‘ಆನ್‌ಲೈನ್’ ಮೂಲಕ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

ಕಳೆದ ಮೂರೂವರೆ ದಶಕಗಳಿಂದ ಶ್ರೀ ಕ್ಷೇತ್ರ ಕದ್ರಿಯ ಪರಿಸರದಲ್ಲಿ ೧೨ ವೇದಿಕೆಗಳಲ್ಲಿ ಏರ್ಪಡಿಸಲಾಗುತ್ತಿದ್ದ ಈ ರಾಷ್ಟ್ರೀಯ ಮಕ್ಕಳ ಉತ್ಸವವನ್ನು ಈ ಬಾರಿ ‘ಕೊರೊನಾ’ ಹಾವಳಿಯಿಂದಾಗಿ ‘ಆನ್‌ಲೈನ್’ ಮೂಲಕ ಏರ್ಪಡಿಸುವ ಅನಿವಾರ್ಯತೆ ಒದಗಿ ಬಂದಿದೆ. ಆದರೂ ಮಕ್ಕಳ ಹಾಗೂ ಹೆತ್ತವರ ಉತ್ಸಾಹದ ಪಾಲ್ಗೊಳ್ಳುವಿಕೆಯಿಂದಾಗಿ ಈ ಸ್ಪರ್ಧೆಯು ಯಶಸ್ವಿಯಾಗಿದೆ ಎಂದರು. ಸುಮಾರು ೩೫೦೦ಕ್ಕೂ ಅಧಿಕ ಸಂಖ್ಯೆಯ ಮಕ್ಕಳು ೩೨ ವಿಭಾ ಗಗಳಲ್ಲಿ ಸ್ಪರ್ಧಿಸಿದ್ದು ಹೆತ್ತವರ ಮತ್ತು ಮಕ್ಕಳ ಅತ್ಯುತ್ಸಾಹವನ್ನು ಪ್ರದರ್ಶಿಸಿದೆ.

ಈ ಪೂರ್ವದಲ್ಲೂ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾಗಿದ್ದ ಮಕ್ಕಳು ತಾವು ಗಳಿಸಿಕೊಂಡಿದ್ದ ಪಂಚಲೋಹದ ಕೃಷ್ಣನ ಮೂರ್ತಿಯನ್ನು ತಮ್ಮ ಮನೆಗಳಲ್ಲಿ ದೇವರ ಮಂಟಪದಲ್ಲಿರಿಸಿ ಪೂಜಿಸಿ ಧನ್ಯತೆಯನ್ನು ಕಾಣುತ್ತಿದ್ದು ಈ ಬಾರಿಯೂ ಅನೇಕ ಮಂದಿ ಪಂಚಲೋಹದ ಮೂರ್ತಿಗಳ ನಿರೀಕ್ಷೆಯಲ್ಲಿ ಬಂದಿದ್ದರು. ಈ ಬಾರಿ ವಿಶೇಷವಾಗಿ ಕಡೆಗೋಲು ಕೃಷ್ಣನ ಚಿತ್ರವಿರುವ ವಿಶಿಷ್ಠವಾದ ಸ್ಮರಣಿಕೆಯೊಂದಿಗೆ ವಿಜೇತರನ್ನು ಗೌರವಿಸಲಾಯ್ತು.

ಸರಕಾರದ ಸೂಚನೆಯಂತೆ ಸಾರ್ವಜನಿಕ ಅಂತರವನ್ನು ಕಾಪಾಡಿಕೊಂಡು ಬೆಳ್ಳಿಗೆ 9 ರಿಂದ ಮಧ್ಯಾಹ್ನ 2 ರ ತನಕ ಒಟ್ಟು 4 ಹಂತಗಳಲ್ಲಿ ವಿವಿಧ ವಿಭಾಗಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯ್ತು.

ಪ್ರತ್ಯೇಕ ಪ್ರತ್ಯೇಕ ಸಮಯ ನಿಗದಿಪಡಿಸಿ ಆಹ್ವಾನಿಸಲಾಗಿತ್ತು. ಕಡ್ಡಾಯವಾಗಿ ಮಕ್ಕಳ ಪೋಷಕರು ಮಾತ್ರ ಪಾಲ್ಗೊಳ್ಳುವಂತೆ ವಿನಂತಿಸಲಾಗಿತ್ತು. ಉಡುಪಿ, ಬೆಳ್ತಂಗಡಿ, ಮೂಡಬಿದಿರೆ, ಮುಂತಾದೆಡೆಯಿಂದ ಅಲ್ಲದೆ ದೂರದ ಮೈಸೂರಿನಿಂದಲೂ ಮಕ್ಕಳ ಪೋಷಕರು ಅತ್ಯುತ್ಸಾಹದಿಂದ ಪಾಲ್ಗೊಂಡು ಅತಿಥಿಗಳಿಂದ ಬಹುಮಾನಗಳನ್ನು ಸ್ವೀಕರಿಸಿದರು.

ಉದ್ಯಮಿ ರತ್ನಾಕರ ಜೈನ್, ತಾರಾನಾಥ ಶೆಟ್ಟಿ ಬೋಳಾರ, ಸಂಜಯ್‌ರಾವ್, ಜಾನ್‌ಚಂದ್ರನ್, ತಮ್ಮ ಲಕ್ಷ್ಮಣ ವಿನಯಾನಂದ, ದಯಾನಂದ ಕಟೀಲ್, ಬಿ. ವಿಜಯಲಕ್ಷ್ಮೀ ಶೆಟ್ಟಿ, ಗೀತಾ ಅಚಾರ್, ಕದ್ರಿ ನವನೀತ ಶೆಟ್ಟಿ ಸಹಿತ ಸ್ಪರ್ಧೆಯಲ್ಲಿ ಸಹಕರಿಸಿದ ತೀರ್ಪುಗಾರರು ಶಾರದಾ ವಿದ್ಯಾಸಂಸ್ಥೆಯ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.

Comments are closed.