ಕರಾವಳಿ

ಹಿರಿಯ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ವಿಧಿವಶ : ಯಕ್ಷಭಾರತಿಯಿಂದ ಸಂತಾಪ

Pinterest LinkedIn Tumblr

ಮಂಗಳೂರು : ತೆಂಕುತಿಟ್ಟಿನ ಹಿರಿಯ ಭಾಗವತರಾದ ಕಂಚಿನ ಕಂಠದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ(77ವರ್ಷ) ಇಂದು (27.9.2020 ಆದಿತ್ಯವಾರ) ನಿಧನರಾದರು.

ಹವ್ಯಾಸಿ ರಂಗದಲ್ಲಿ ಅವರು ಲಂಡನ್ ಭಾಗವತರೆಂದೇ ಪ್ರೀತಿ ಪಾತ್ರರು. ಸುಮಾರು ಐದು ದಶಕಗಳ ಕಾಲ ವೃತ್ತಿ ಹಾಗೂ ಹವ್ಯಾಸಿ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ತಮ್ಮದೇ ವಿಶಿಷ್ಟ ಶೈಲಿಯಮೂಲಕ ಪ್ರಸಿದ್ಧರಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಇವರ ಪುತ್ರ ಮುರಲಿ ಕೃಷ್ಣ ಶಾಸ್ತ್ರೀ ಪ್ರಸಿದ್ಧ ಭಾಗವತರಾಗಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು ಯಕ್ಷಗಾನ ಕಲಾರಂಗ 2011ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಯಕ್ಷಭಾರತಿ ಸಂತಾಪ:

ಕರ್ನಾಟಕ ಯಕ್ಷಭಾರತಿ ಪುತ್ತೂರು ಕಲಾತಂಡಕ್ಕೆ ಬೊಳ್ಳಾವ ಸತ್ಯಶಂಕರರ ಪ್ರೇರಣೆಯಿಂದ ಆರಂಭ ದಿಂದಲೂ ಭಾಗವತರಾಗಿದ್ದ ತೆಂಕಬೈಲು ಶಾಸ್ತ್ರಿಗಳು ಹಲವಾರು ಆಟ – ಕೂಟಗಳಲ್ಲಿ ತಮಗೆ ವಿಶೇಷ ಸಹಕಾರ ನೀಡಿದ್ದರು.ಅಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಮಗನನ್ನೂ ಪರಿಚಯಿಸಿದ್ದರು ಎಂದು ಕರ್ನಾಟಕ ಯಕ್ಷಭಾರತಿ ಬಾನುಲಿ ತಂಡದ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ದುಃಖ ವ್ಯಕ್ತಪಡಿಸಿದ್ದಾರೆ.

ಯಕ್ಷಾಂಗಣ ಮಂಗಳೂರು ಪದಾಧಿಕಾರಿಗಳ ಪರವಾಗಿ ಅವರು ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.
ಶಾಸ್ತ್ರಿಗಳು ಪ್ರತಿ ವರ್ಷ ಕದಿರೆಗೆ ಬಂದು ಭಾರಿ ಉತ್ತಮ ಗುಣಮಟ್ಟದಲ್ಲಿ ಕಾರ್ಯಕ್ರಮ ಕೊಡುತ್ತಿದ್ದರು. ಅವರ ಆತ್ಮಕ್ಕೆ ದೇವರು ಶಾಂತಿ ನೆಮ್ಮದಿ ನೀಡಲಿ ಎಂದು ಶ್ರೀಕೃಷ್ಣ ಯಕ್ಷಸಭಾದ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ ಪ್ರಾರ್ಥಿಸಿದ್ದಾರೆ.

Comments are closed.