ನವದೆಹಲಿ: ಸಾಲದ ಕಂತು ಮುಂದೂಡಿಕೆ (ಇಎಂಐ ಮೊರಾಟೋರಿಯಂ)ನ್ನು ಸೆ.28ರವರಗೆ ವಿಸ್ತರಿಸಿ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತ ಆದೇಶ ನೀಡಿದೆ. ಈ ಅವಧಿಯಲ್ಲಿ ವಸೂಲಾಗದ ಸಾಲವನ್ನು ನಿಷ್ಕ್ರಿಯ ಸ್ವತ್ತು ( ನಾನ್ ಪರ್ಫರ್ಮಿಂಗ್ ಅಸೆಟ್ – ಎನ್ಪಿಎ) ಎಂದು ಘೋಷಿಸುವಂತಿಲ್ಲ ಎಂದು ಬ್ಯಾಂಕುಗಳಿಗೆ ಸೂಚಿಸಿದೆ.


ಸಾಲ ಮರುಪಾವತಿಸಲಾಗದ ಗ್ರಾಹಕರ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರಕ್ಕೆ ಬರಲು ಸುಪ್ರೀಂಕೋರ್ಟ್ ಕೇಂದ್ರಕ್ಕೆ ಎರಡು ವಾರಗಳ ಗಡುವು ನೀಡಿದೆ. ಮೊರಾಟೋರಿಯಂ ಅವಧಿಯಲ್ಲಿ ಚಕ್ರಬಡ್ಡಿ ವಿಧಿಸದಿರುವ ಕುರಿತು ಪರಿಗಣಿಸುವಂತೆಯೂ ಕೇಂದ್ರಕ್ಕೆ ಸೂಚಿಸಿದೆ. ಇದೇ 28ರ ಒಳಗೆ ಸ್ಪಷ್ಟ ನಿಲುವು ಹೇಳುವಂತೆ ಕೋರ್ಟ್ ಹೇಳಿದೆ.

ಕೊರೊನಾ ಲಾಕ್ಡೌನ್ ತರುವಾಯ ಜನರ ಆರ್ಥಿಕ ಸಂಕಷ್ಟವನ್ನು ಪರಿಗಣಿಸಿ ರಿಸರ್ವ್ ಬ್ಯಾಂಕ್ ಸಾಲದ ಕಂತುಗಳ ಮುಂದೂಡಿಕೆಯನ್ನು ಆ.31ರವರೆಗೆ ವಿಸ್ತರಿಸಿತ್ತು. 6 ತಿಂಗಳವರೆಗೆ ವಿಸ್ತರಿಸಲಾಗಿದ್ದ ಇಎಂಐ ಮೊರಾಟೋರಿಯಂ ಯೋಜನೆ ಆಗಸ್ಟ್ 31ಕ್ಕೆ ಅಂತ್ಯವಾಗಿತ್ತು. ಇದಾದ ನಂತರವೂ ಲೋನ್ ಮಾರಾಟೋರಿಯಂ ಯೋಜನೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸುಂತೆ ಒತ್ತಾಯಿಸಲಾಗಿತ್ತು. ಅಲ್ಲದೇ ಈ ಅವಧಿಯಲ್ಲಿ ಚಕ್ರಬಡ್ಡಿ ಹಾಕದಿರುವಂತೆ ಮನವಿ ಮಾಡಲಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯವು ಮಧ್ಯಂತರ ಆದೇಶ ನೀಡಿದೆ.
Comments are closed.