ಕರಾವಳಿ

ಬೋನಿಗೆ ಬಿತ್ತು ಮಣಿಪಾಲದಲ್ಲಿ ಆತಂಕ ಮೂಡಿಸಿದ್ದ ಚಿರತೆ..!

Pinterest LinkedIn Tumblr

ಉಡುಪಿ: ಕಳೆದ ಕೆಲವು ದಿನಗಳಿಂದ ಮಣಿಪಾಲದ ವಿಜಯನಗರ ಕೋಡಿ ಎಂಬಲ್ಲಿ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಬೋನಿಗೆ ಬಿದ್ದಿದೆ.

ಮಣಿಪಾಲ ವಿಜಯನಗರ ಕೋಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆ ಈ ಭಾಗದ ಜನರಲ್ಲಿ ಭೀತಿ ಹುಟ್ಟಿಸಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ‌ ನೀಡಿದ್ದು ಚಿರತೆ ಸೆರೆ ಹಿಡಿಯಲು ಇಲಾಖೆಯವರು ಬೋನು ಇರಿಸಿದ್ದರು. ಬೋನಿನೊಳಗೆ ಎರಡು ನಾಯಿ ಮರಿಗಳನ್ನು ಕಟ್ಟಿ ಚಿರತೆ ಸೆರೆಗೆ ಫ್ಲಾನ್ ಮಾಡಲಾಗಿತ್ತು.

ಇಲಾಖೆಯವರ ಉಪಾಯದಂತೆ ಚಿರತೆ ಶನಿವಾರ ಮುಂಜಾನೆ ಬೋನಿಗೆ ಬಿದ್ದಿದೆ. ಚಿರತೆ ಉಪಟಳದಿಂದ ಭಯಭೀತರಾಗಿದ್ದ ಸುತ್ತಮುತ್ತಲಿನ ಜನರು ಅರಣ್ಯ ಇಲಾಖೆಯ ಕಾರ್ಯಕ್ಕೆ ಸಂತಸಗೊಂಡಿದ್ದಾರೆ.

Comments are closed.