
ಮಂಗಳೂರು, ಸೆಪ್ಟಂಬರ್ 02 : ಮುಂದಿನ ದಿನಗಳಲ್ಲಿ ವಿದೇಶಗಳಿಂದ ಮಂಗಳೂರಿಗೆ ಆಗಮಿಸುವ ವರಿಗೆ ಸರಕಾರದಿಂದ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ವಿದೇಶದಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರು ಈ ಹೊಸ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಸೂಚನೆ ಹೊರಡಿಸಿದೆ.
ಸೂಚನೆಗಳ ಪ್ರಕಾರ, ನಗರಕ್ಕೆ ಮರಳುವ ಭಾರತೀಯ ನಾಗರಿಕರು ಅಧಿಕೃತ ವೆಬ್ ಸೈಟ್ ನಲ್ಲಿ ‘ಏರ್ ಸುವಿದಾ ಸ್ವಯಂ-ವರದಿ ಫಾರ್ಮ್’ ಅನ್ನು ಭರ್ತಿ ಮಾಡಬೇಕಾಗುತ್ತದೆ. (https: //www.newdelhiairport.in/airsuvidha/APHO-registration) ಅಲ್ಲದೆ, ಪ್ರಯಾಣಿಕರು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳನ್ನು ಏರುವ ಮುನ್ನ ವಿಮಾನ ನಿಲ್ದಾಣ ವರದಿ ನೀಡುವ ಮೊದಲೇ ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಎಲ್ಲಾ ಪ್ರಯಾಣಿಕರು ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಆರೋಗಾ ಸೇತು ಆ್ಯಪ್, ಕ್ವಾಂಟೈನ್ ವಾಚ್ ಮತ್ತು ಆಪ್ತಮಿತ್ರಾ ಎಂಬ ಮೂರು ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಅದೇಶ ನೀಡಲಾಗಿದೆ.
ದೇಶದಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರು ಸಕ್ರೀಯವಾಗಿರುವ ಭಾರತೀಯ ಸಿಮ್ ಕಾರ್ಡ್ ಹೊಂದಿರಬೇಕು. ಪ್ರಯಾಣಿಕರಿಗೆ ಸ್ಥಳೀಯ ಸಿಮ್ ಇಲ್ಲದಿದ್ದರೆ, ಅವರು ತಮ್ಮ ಕುಟುಂಬ ಸದಸ್ಯರು ಅಥವಾ ಸಂಬಂಧಿಕರನ್ನು ಸ್ಥಳೀಯ ಸಿಮ್ ಪಡೆಯಲು ಕೇಳಿಕೊಳ್ಳಬೇಕು. ಪ್ರ
ಯಾಣಿಕರು ಮಂಗಳೂರಿಗೆ ಬರುವ ಮೊದಲು ಸಿಮ್ ಅನ್ನು ಈಗಾಗಲೇ ಸಕ್ರಿಯಗೊಳಿಸಬೇಕು. ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಹೊಸ ಸಿಮ್ ಕಾರ್ಡ್ಗಳನ್ನು ಖರೀದಿಸಲು ಅವಕಾಶ ನೀಡಲಾಗಿದ್ದು, ಇದರ ಪ್ರಯೋಜನವನ್ನು ಪಡೆಯ ಬಹುದು ಎಂದು ಪ್ರಕಟಣೆ ತಿಳಿಸಿದೆ.
Comments are closed.